ಕಣಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Personal information removed
No edit summary
೩ ನೇ ಸಾಲು:
ಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಪುರಾತನ ಕಾಲದಿಂದಲೂ ಮಾಡಿಕೊಂಡಿರುವ ಒಂದು ವ್ಯವಸ್ಥೆ. ಅದರಲ್ಲೂ ಮುಖ್ಯವಾಗಿ ಬತ್ತದ ಬೆಳೆಗಾರರು ಇದನ್ನು ಹೆಚ್ಚಾಗಿ ಬಳಸುತ್ತಾರೆ.
 
ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ,; ತೆನೆ ತೆನೆ ಕೂಡಿದರೆ ಬಳ್ಳ. ಬಳ್ಳ ಎಂದರೆ ಧವಸ-ಧಾನ್ಯಗಳನ್ನು ಅಳೆಯುವ ಸಾಧನ. ಹಿಂದೆ ರಾಜ-ಮಹಾರಾಜರು ರೈತರಿಂದ ಧವಸ-ಧಾನ್ಯಗಳನ್ನು ವಸೂಲಿ ಮಾಡಿ ಅವನ್ನೇಲ್ಲ ಸಂಗ್ರಹಿಸಿ ದೊಡ್ಡದೊಂದು ಉಗ್ರಾಣವನ್ನು ಕಟ್ಟಿಸಿ ಅದರೊಳಗೆ ವರ್ಷಗಟ್ಟಲೆ ಶೇಖರಿಸಿ ಇಡುತ್ತಿದ್ದರು. ಊರಿಗೆ ಬರಗಾಲ, ಕ್ಷಾಮ ಬಂದಾಗ ಉಗ್ರಾಣದಲ್ಲಿನ ಧವಸ-ಧಾನ್ಯಗಳನ್ನು ಜನರಿಗೆ ದಾನ ಮಾಡುತ್ತಿದ್ದರು. ಈಗಲೂ ಅಂತಹ ಬೃಹತ್ ಉಗ್ರಾಣ/ಕಣಜವನ್ನು ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರದಲ್ಲಿ ಕಾಣಬಹುದು.
 
ಜನಪದರ ಇಡೀ ಜೀವನವೇ '''ಕಣಜ'''ದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಜನ ಸಾಮಾನ್ಯರು ರಾಜ-ಮಹಾರಾಜರಂತೆ ಉಗ್ರಾಣಗಳನ್ನು ಕಟ್ಟಿಸುವ ಶಕ್ತಿ ಇಲ್ಲದುದರಿಂದ ತಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಬಿದಿರಿನಿಂದ ಮಾಡಿದ ಗುಡಾಣ/ಕಣಜಗಳನ್ನು ಸಗಣಿಯಿಂದ ತಾರಿಸಿ ಧವಸ-ಧಾನ್ಯಗಳ ಶೇಖರಣೆಗೆ ಬಳಸುತ್ತಾರೆ.
"https://kn.wikipedia.org/wiki/ಕಣಜ" ಇಂದ ಪಡೆಯಲ್ಪಟ್ಟಿದೆ