"ಚಾಣಕ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಅಕ್ಷರದೋಷ ಸರಿಪಡಿಸಿದೆ.
(→‎ಬಾಹ್ಯ ಕೊಂಡಿಗಳು: {{wikiquote|ಚಾಣಕ್ಯ}})
ಚು (ಅಕ್ಷರದೋಷ ಸರಿಪಡಿಸಿದೆ.)
ಟ್ಯಾಗ್: 2017 source edit
'''ಕೌಟಿಲ್ಯ''' ಎಂದೇ ಪ್ರಸಿದ್ಧನಾದ '''ಚಾಣಕ್ಯ''' (ಸು. [[ಕ್ರಿ.ಪೂ.]] ೩೫೦ - ೨೮೩), [[ಪ್ರಾಚೀನ ಭಾರತ]]ದ ಅದ್ವಿತೀಯ [[ಅರ್ಥಶಾಸ್ತ್ರಜ್ಞ]]. [[ಮೌರ್ಯ ಸಾಮ್ರಾಜ್ಯ]] ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು.<ref>[http://www.kanaja.in/%E0%B2%9A%E0%B2%BE%E0%B2%A3%E0%B2%95%E0%B3%8D%E0%B2%AF/ ಚಾಣಕ್ಯ ಅಸಾಧಾರಣ ಪುರುಷ ]</ref>."ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ [[ತಕ್ಷಶಿಲೆ]]ಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ [[ಗಾಂಧಾರ]]ದಲ್ಲಿತ್ತು. ಗಾಂಧಾರದ ರಾಜ [[ಅಂಬಿ]], [[ಯವನರು|ಯವನ]] ಚಕ್ರವರ್ತಿಯಾದ [[ಅಲೆಕ್ಸಾಂಡರ]]ನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ [[ಚಂದ್ರಗುಪ್ತ ಮೌರ್ಯ]].
==ಅಸಾಧಾರಣ ಪುರುಷ==
ಚಾಣಕ್ಯ ತುಂಬ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರ. ಯುದ್ಧ ವಿದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠೀಣಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳೀಯದತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ.
ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ.
ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಚೀಣಾ ದೇಶದಲ್ಲಿ ಹುಟ್ಟಿದುದರಿಂದ ಚಾಣಕ್ಯ ಎಂದು ಹೆಸರು ಬಂದಿತು ಎಂದು ಹೇಳುತ್ತಾರೆ. ಈತನ ಪ್ರತಿಭೆಯನ್ನು ತೊರಿಸುವತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು.
 
==ತಕ್ಷಶಿಲೆಯ ವಿದ್ಯಾರ್ಥಿ==
ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿಧ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗ ವಿದ್ಯಾರ್ಥಿಗಳು ಬರುತ್ತಿದ್ದರು. ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು. ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ! ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ. ವೇದಗಳನ್ನೂ ಧನುರ್ವಿದ್ಧೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಸಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು.
೧,೩೨೦

edits

"https://kn.wikipedia.org/wiki/ವಿಶೇಷ:MobileDiff/807110" ಇಂದ ಪಡೆಯಲ್ಪಟ್ಟಿದೆ