ಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
No edit summary
೪ ನೇ ಸಾಲು:
== ಚಾರಿತ್ರಿಕ ಹಿನ್ನೆಲೆ ==
 
ಬಾಣದ ಆಕಾರದಲ್ಲಿರುವ [[ಸಾಮ್ರಾಟ್ ಅಶೋಕ|ಅಶೋಕ]]ನ ಕಾಲದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಯಾವ ವಿಧವಾದ ಹೋಲಿಕೆಗಳೂ ಕಂಡು ಬರುವುದಿಲ್ಲ. ಉದ್ದನೆಯ ಈ ಅಕ್ಷರ [[ಶಾತವಾಹನರು|ಸಾತವಾಹನ]] ಕಾಲದಲ್ಲಿ ಸಣ್ಣದಾಗಿ ಕದಂಬ ಕಾಲದಲ್ಲಿ ಘಂಟೆಯ ಆಕಾರವನ್ನು ಹೊಂದುತ್ತದೆ.ಎರಡು ಪಾರ್ಶ್ವಗಳನ್ನು ಸೇರಿಸುವ ಒಂದು ರೇಖೆ ಇಲ್ಲಿ ಉದ್ಭವವಾಗುತ್ತದೆ. ಇದೇ ಮುಂದೆ ಪರಿವರ್ತಿತವಾಗಿ ಅಕ್ಷರದ ಕೆಳಭಾಗವಾಗುತ್ತದೆ. [[ರಾಷ್ಟ್ರಕೂಟ]] ಕಾಲದಲ್ಲಿಯೂ ಈ ಅಕ್ಷರದಲ್ಲಿ ಅಂತಹ ಬದಲಾವಣೆಗಳೇನೂ ಕಾಣಬರುವುದಿಲ್ಲ. ಆದರೆ ಕಲ್ಯಾಣಿ [[ಚಾಲುಕ್ಯ|ಚಾಳುಕ್]]ಯರ ಕಾಲದಲ್ಲಿ ಬಹು ಬದಲಾವಣೆಗಳನ್ನು ಹೊಂದಿ ಈಗಿನ ಅಕ್ಷರಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಕೆಳಭಾಗದಲ್ಲಿ ಒಂದು ವೃತ್ತಾಕಾರ ಉದ್ಭವವಾಗಿ ಅದು ಪಾಶ್ರ್ವವನ್ನು ಮೀರಿ ಹೊರಬರುತ್ತದೆ. ಇದೇ ಆಕಾರ [[ಕಲಚೂರಿ ರಾಜವಂಶ|ಕಳಚುರಿ]], [[ಹೊಯ್ಸಳ]] ಮತ್ತು [[ಸೇವುಣ]] ಕಾಲಗಳಲ್ಲಿಯೂ ಮುಂದುವರಿಯುತ್ತದೆ. ಆದರೆ [[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ಕಾಲದಲ್ಲಿ ಕೆಳಗಿನ ವೃತ್ತಾಕೃತಿ ಅಗಲವಾಗುವ ಬದಲು ಉದ್ದವಾಗುತ್ತದೆ ಮತ್ತು ಪಾಶ್ರ್ವದ ರೇಖೆಯನ್ನು ಮೀರಿ ಹೊರಬರುವುದಿಲ್ಲ. ಇದೇ ಸ್ವರೂಪವೇ ಇನ್ನೂ ಗುಂಡಗಾಗಿ ಹದಿನೆಂಟನೆಯ ಶತಮಾನದಲ್ಲಿ ಮುಂದುವರಿಯುತ್ತದೆ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ}}
"https://kn.wikipedia.org/wiki/ಶ" ಇಂದ ಪಡೆಯಲ್ಪಟ್ಟಿದೆ