ಫ್ರೆಂಚ್ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
ಚುNo edit summary
ಟ್ಯಾಗ್: 2017 source edit
೧ ನೇ ಸಾಲು:
 
ಫ್ರೆಂಚ್ ಸಾಹಿತ್ಯ
== ಹತ್ತನೆಯ ಶತಮಾನದಲ್ಲಿ ಆರಂಭ ==
ಫ್ರೆಂಚ್ ಸಾಹಿತ್ಯ ಆರಂಭವಾದುದು 10ನೆಯ ಶತಮಾನದಲ್ಲಿ. 10 ಮತ್ತು 11ನೆಯ ಶತಮಾನಗಳಲ್ಲಿ ರಚಿತವಾಗಿರಬಹುದೆಂದು ಸ್ಮರಣೀಯ ಕೃತಿಗಳು ಇವು: ಸೇಂಟ್ ಯೂಲೇಲಿಯಾ ಕುರಿತ ನಾಡಾಡಿ ಹಾಡುಗಳು (ಕ್ಯಾಂಟಿಲೇನೆ); ಸೇಂಟ್ ಲಿಗೆರನ ಜೀವನಚರಿತ್ರೆ; ಸೇಂಟ್ ಅಲೆಕ್ಸಿಸ್ಸನ ಜೀವನ ಚರಿತ್ರೆ (1050). ಫ್ರೆಂಚ್ ಸಾಹಿತ್ಯದ ಮೊಟ್ಟಮೊದಲ ಮಹತ್ತರ ಕೃತಿ ಚಾನ್ಸೆನ್ಸ್ ಡಿ ಗೆಸ್ಟೆ. ಇದೊಂದು ಮಹಾಕಾವ್ಯಗಳ ಸರಣಿ. ಈ ಸರಣಿಯ ಸುಮಾರು ನೂರು ಮಾದರಿಗಳು ಮಾತ್ರ ಈಗ ದೊರೆತಿವೆ. ಈ ಎಲ್ಲ ಕಾವ್ಯಗಳ ವಸ್ತು ಪರಂಪರಾಗತ ಫ್ರೆಂಚ್ ಇತಿಹಾಸದ ಮಹಾಪುರುಷರ ವೀರಸಾಧನೆಗಳು. ಷಾರ್ಲೆಮೇನ್ ಮತ್ತು ಅವನ ಸಂತತಿಗೆ ಸೇರಿದ್ದು ಒಂದು ಗುಂಪು. ಮೆಯೆನ್ಸಿಯ ಡೂನನ ವೀರಗತೆಗಳದು ಇನ್ನೊಂದು ಗುಂಪು. ಗ್ಯಾರಿನ್ ಡಿ ಮ್ಯೊಂಗ್ಲೆನನ ವೀರಗತೆಗಳದು ಮತ್ತೊಂದು. ಹೀಗೆ ಮೂರು ಮುಖ್ಯ ಗುಂಪುಗಳಿವೆ. ಧಾರ್ಮಿಕ ಯುದ್ಧಗಳದ್ದು, (ಕ್ರೂಸೇಡ್ಸ್) ಲೊರೇನರ್ಸ್ ಕುರಿತದ್ದು ಈ ಗುಂಪುಗಳೂ ಇವೆ. ಇವುಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದ ಕಾವ್ಯ ಚಾನ್ಸೆನ್ ಡಿ ರೊಲ್ಯಾಂಡ್. ಕಣ್ಣಿಗೆ ಕಟ್ಟುವಂಥ ವರ್ಣನೆ. ಮರೆಯಲಾಗದ ಪಾತ್ರಗಳ ಚಿತ್ರಣ ಈ ಕಾವ್ಯದ ವಿಶೇಷ ಗುಣ. ಭೀಕರ ಕಾಳಗಗಳು, ಮಂತ್ರಾಲೋಚನೆ, ಧಾರ್ಮಿಕ ಶ್ರದ್ಧೆಯ ಅಭಿವ್ಯಕ್ತಿ ಇವೇ ಈ ಕಾವ್ಯಗಳಲ್ಲಿ ಪ್ರಧಾನ. ಶೃಂಗಾರ ಅಲ್ಲಲ್ಲಿ ಗೌಣವಾಗಿ ಕಾಣಿಸಿಕೊಳ್ಳುತ್ತವೆ.
೧೨೩ ನೇ ಸಾಲು:
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಚ್ ಸಾಹಿತ್ಯ|ಫ್ರೆಂಚ್ ಸಾಹಿತ್ಯ}}
"https://kn.wikipedia.org/wiki/ಫ್ರೆಂಚ್_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ