ಫ್ರೆಂಚ್ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಟ್ಯಾಗ್: 2017 source edit
೬೩ ನೇ ಸಾಲು:
 
==೧೯ ನೆಯ ಶತಮಾನದಿಂದ ಈಚೆ==
19ನೆಯ ಶತಕದಲ್ಲಿ ಹಲವಾರು ನೂತನ ಸಾಹಿತ್ಯ ಪಂಥಗಳು ಆರಂಭವಾದುವು. ಅವುಗಳಲ್ಲಿ ಮೊದಲನೆಯದು [[ರೊಮ್ಯಾಂಟಿಕ್ ಸಾಹಿತ್ಯ|ರೊಮ್ಯಾಂಟಿಕ್]] ಕಾವ್ಯಮಾರ್ಗ. ವ್ಯಕ್ತಿ ವಿಶಿಷ್ಟತೆಗೆ ಮನ್ನಣೆ ಕೊಡುವುದೆ ಈ ಪಂಥದ ಮುಖ್ಯ ಧ್ಯೇಯ. ಫ್ರಾಂಕೊ ಡಿ ಷಾಟುಬ್ರಿಯಾಂಡ್ (1768-1848) ಈ ಪಂಥದ ಪ್ರವರ್ತಕ. ಆಲ್ಪಾನ್ಸ್ ಡಿ ಲಾಮಾರ್ಟಿನ್ ಇದನ್ನು ಬೆಳೆಸಿದ. [[ವಿಕ್ಟರ್ ಹ್ಯೂಗೊ]] ರೊಮ್ಯಾಂಟಿಕ್ ಸಾಹಿತಿಗಳಲ್ಲಿ ಅದ್ವಿತೀಯ. ಈತನ ಕವನಗಳಲ್ಲಿನ ಶಬ್ದಸಂಪತ್ತಿನ. ವಿವಿಧ ಛಂದೋ ಪ್ರಯೋಗಗಳು ಗಣನೀಯವಾಗಿವೆ. ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲೆತ್ನಿಸಿ ವಿಫಲನಾದ. ಈತನ ಲೆಮಿಸೆರಬಲೆಲೆ ಮಿಸೆರಬಲೆ, ಹಂಚ್ ಬ್ಯಾಕ್ ಆಫ್ ನಾತರ್‍ದಾಮ್ ಸುಪ್ರಸಿದ್ಧ ಕಾದಂಬರಿಗಳು.
 
ಸೊಗಸಾದ ಭಾವಗೀತೆಗಳನ್ನೂ ಬರೆದು ಉತ್ಕøಷ್ಟ ನಾಟಕಗಳನ್ನು ಬರೆದು ಜನಮನದಲ್ಲಿ ನಿಂತ ಆಲ್ಪ್ರೆಡ್ ಡಿ ಮಸ್ಸೆಟ್ಸ್ (1810-57). ಈ ಶತಕದ ಮಧ್ಯ ಭಾಗದಲ್ಲಿ ತಿಯೊ ಫಿಲೆ ಗಾಟಿಯರ ಎಂಬ ಕವಿಯ ನೇತೃತ್ವದಲ್ಲಿ ಪಾರ್ನಾಸಿಯನ್ ಕಾವ್ಯಪಂಥ ಆರಂಭವಾಯಿತು. ಈ ಕವಿಯ ಪ್ರಾತಿನಿಧಿಕ ಕಾವ್ಯಸಂಕಲನ ಇಮಾ ಎಟ್ ಕ್ಯಾಮಿ (1852). ಲೆಕಾಂಟೆ ಡಿ ಲಿಸ್ಲೆ, ಜೋಸ್ ಡಿ ಹೆರೆಡಿಯಾ ಮತ್ತು ಚಾಲ್ರ್ಸ[[ಚಾರ್ಲ್ಸ್ ಬೊದಿಲೇರ್]] ಈತನ ಪ್ರಮುಖ ಅನುಯಾಯಿಗಳು. ಸಲ್ಲಿ ಪ್ರುದೋಮೆ ತಾತ್ತಿಕ-ಚಿಂತನಶೀಲ ಕವಿ. ಸ್ಪಷ್ಟವಾದ ಲಲಿತವಾದ ಶೈಲಿ ಈತನದು. ಫ್ರಾಂಕೊ ಕಾಪ್ಪಿ ದಲಿತ ಜನರ ನೋವು-ನಲಿವುಗಳನ್ನು ಚಿತ್ರಿಸಿದ ಕವಿ. ಪಾರ್ಲ ವರ್ಲೇನ್ (1844-96). ಅರ್ಥರ್ ರಿಂಬಾಡ್ (1854-91) ಮತ್ತು ಸ್ಟೀಪೆನ್ ಮಲಾರ್ಮೆ [[ಸಿಂಬಾಲಿಸಮ್ ತತ್ತ್ವದತತ್ತ್ವ]]ದ. ನವ್ಯಕಾವ್ಯದ ಪ್ರವರ್ತಕರು. ಸಾಂಕೇತಿಕತೆ, ಅಸ್ಪಷ್ಟತೆ ಇವರ ಕಾವ್ಯದ ವಿಶಿಷ್ಟ ಲಕ್ಷಣಗಳು.
 
ಐತಿಹಾಸಿಕ ಮತ್ತು ತೌಲನಿಕ ವಿಮರ್ಶೆಯನ್ನಾರಂಭಿಸಿದ ಅಬೆಲ್ ವಿಲ್ಲೆಮೇನ್ (1790-1870), ಅಗಸ್ಟೀನ್ ಸೇಂಟ್ ಬವ್ (1804-69) (ಪೋರ್ಟ ರಾಯಲ್ ಪೋಸ್ಕ್ರೈಟ್ರ್ರೆಯ್ಟ್ಸಲಿಟರೇರಿಸ್ ಮತ್ತು ಲೆ ಲುಂಡಿ ಕೃತಿಗಳ ಕರ್ತೃ) ಮತ್ತು ಹಿಪ್ಪೋಲಿಟ್ ಟೇನ್ ಸಾಹಿತ್ಯ ವಿಮರ್ಶೆಯನ್ನು ಬಲಗೊಳಿಸಿದವರು.
೭೧ ನೇ ಸಾಲು:
ಫ್ರಾಂಕೊ ಗಿಜೋಟ್, ಅಡಾಲ್ಪ್ ತಿಯೆರ್ಸ್. ಜೂಲ್ಸ್ ಮಿಚ್ಲೆಟ್. ಫಸ್ಟಲ್ ಡಿ ಕೌಲಾಂಜಿ ಸುಪ್ರಸಿದ್ಧ ಇತಿಹಾಸಕಾರರು. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಮಾದರಿಯ ದೃಷ್ಟಿ.
 
ಕಲಾತ್ಮಕ ರಚನೆಗೆ ಹೆಸರಾದ ಅಗಸ್ಟೀನ್‍ಸ್ಕ್ರೈಬ್ (1791-1861) ನೈತಿಕ ಹಾಗೂ ಕೌಟುಂಬಿಕ ನಾಟಕಗಳ ಕಿಮಿಲ್ ಆಜಿಯರ್. ವಿಕ್ಟೋರಿಯನ್ ಸಾರ್ಡು. [[ಅಲೆಕ್ಸಾಂಡರ್ ಡ್ಯೂಮಾ]]-ಇವರು ಪ್ರಹಸನ ಪ್ರಪಂಚದಲ್ಲಿ ಪ್ರಸಿದ್ಧರು. ಸ್ಕ್ರೈಬ್‍ನಾಲ್ಕು ನೂರಕ್ಕೂ ಮಿಕ್ಕು ನಾಟಕಗಳನ್ನು ಬರೆದ.
 
ಕಾದಂಬರಿ ಕ್ಷೇತ್ರ ಮಾತ್ರ ಈ ಕಾಲದಲ್ಲಿ ಅತ್ಯಂತ ಸಮೃದ್ಧವೂ ಶ್ರೀಮಂತವೂ ಆಗಿರುವುದು ಸುಸ್ಪಷ್ಟವಾಗಿದೆ. ಜಾರ್ಜ ಸ್ಯಾಂಡ್ ಎಂಬಾಕೆ ಬರೆದ ಸಾಮಾಜಿಕ ಗ್ರಾಮಜೀವನದ ರಮ್ಯ ಕಾದಂಬರಿಗಳು ಹೇರಳವಾಗಿವೆ. ಸ್ಪಂಡಾಲ್ ಮನೋವೈಜ್ಞಾನಿಕ ಮತ್ತು ವಾಸ್ತವಿಕ ಕಾದಂಬರಿಗಳನ್ನು ಬರೆದು ಹೆಸರಾದ. ಬಾಲ್ಜಾಕ್ ಈ ಕಾಲದ ಶ್ರೇಷ್ಠ ಕಾದಂಬರಿಕಾರ. ಗಸ್ಟಾವ್ ಪ್ಲೂಬೆರ್‍ನ ಸುಪ್ರಸಿದ್ಧ ಕಾದಂಬರಿ [[ಮದಾಂ ಬಾವರಿ|ಮದಾಂಬಾವರಿ]] (1857) ವಾಸ್ತವಿಕತೆಯ ನಾಂದಿಯನ್ನು ಹಾಡಿತು. ಸಹಜ ನೈಸರ್ಗಿಕತೆಯ ಹೊಸಪಂಥದ ಮೊದಲಿಗ [[ಎಮಿಲಿ eóÉೂೀಲಾಜೋಲಾ]] (1840-1902). ಈತನದು ಸತ್ತ್ವಶಾಲಿ ಬರಹ. ಸಣ್ಣಕಥೆಗಳಲ್ಲಿ ಗಾಯ್‍ಡಿಮೋಪಸಾ[[ಗಾಯ್‍ ಡಿ ಮೋಪಸಾ]] (1850-93). ಐತಿಹಾಸಿಕ ರಮ್ಯ ಕಾದಂಬರಿಗಳಲ್ಲಿ ಅಲೆಕ್ಸಾಂಡರ್ ಡ್ಯೂಮಾ (1830-70) ಸುವಿಖ್ಯಾತರಾಗಿದ್ದಾರೆ. ಡ್ಯೂಮಾನ ಕೌಂಟ್ ಆಫ್ ಮಾಂಟೆಕ್ರಿಸ್ಟೊ ಮತ್ತು ದಿತ್ರೀ ಮಸ್ಕಟೀರ್ಸ್ ಚಿರಕಾಲಿಕ ಕೃತಿಗಳು. ಪ್ರಾಸ್ಪರ್‍ಮೆರಿಮೀಯ (ಕೊಲಂಬಾ ಎಂಬ ಕಾದಂಬರಿ ಕಾರ್ಸಿಕಾದ ಕತೆ) ಕಾದಂಬರಿಗಳಲ್ಲಿ ಲೌಕಿಕ ತಿಳಿವಳಿಕೆ. ಸಂಕ್ಷಿಪ್ತತೆ; ಜೂಲ್ಸ್ ಮತ್ತು ಎಡ್ಮಂಡ್ ಗೊನ್ಕೋರ್ಟ ಸೇರಿ ಬರೆದ ಕಾದಂಬರಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಅವಲೋಕನ. ತದ್ವತ್ ಚಿತ್ರಣ ವಿಶೇಷ ಗುಣಗಳು. ಆಲ್ಪೋನ್ಸ್ ಡಾಡೆಟ್ ಉತ್ತಮ ಹಾಸ್ಯಸಾಹಿತಿ. ಆತ ಸೃಷ್ಟಿಸಿದ ತಾರಸ್ಕೋನಿನ ಟಾರ್ಟೆರಿನ್ ಚಿರಸ್ಮರಣೀಯ ಹಾಸ್ಯ ಪಾತ್ರ. ಡಾಡೆಟ್ಟನನ್ನು ಫ್ರಾನ್ಸಿನ ಡಿಕನ್ಸ್ ಎಂದು ಕರೆದಿದ್ದಾರೆ. ಹೀಗೆ ಹೆನ್ರಿ ಬೇಲ್ (ಸ್ಪಂಡಾಲ್.) ಪ್ರಾಸ್ಪರ್ ಮೆವಿವೀ, ಡಾಡೆಟ್, ಜೋಲಾ, ಫ್ಲೊಬೆರ್, ಗೊನ್‍ಕೋರ್ಟ, ಜೂಲ್ಸ್, ಜಿ.ಕೆ.ಹೈಸ್‍ಮನ್, ಪಿಯರೆಲೋಟಿ (ಇಂಪ್ರೆಷನಿಸ್ಟ್), ಪಾಲ್ ಬೋರ್ಗೆಟ್, ರೊಮೇನ್ ರೋಲಾ, ಮಾರ್ಸೆಲ್‍ಪ್ರೂಸ್ಟ್-ಇವರೆಲ್ಲ ಪ್ರಥಮ ಪಂಕ್ತಿಯಲ್ಲಿ ನಿಲ್ಲಬಲ್ಲ ಶ್ರೇಷ್ಠ ಕಾದಂಬರಿಕಾರರು. ವೈಜ್ಞಾನಿಕ. ಮನೋವೈಜ್ಞಾನಿಕ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆ ಈ ಕಾದಂಬರಿಗಳಲ್ಲಿ ಪ್ರಧಾನ. ಆಧುನಿಕ ಜೀವನದ ಸಂಕೀರ್ಣತೆಯನ್ನು ಅಭಿವ್ಯಕ್ತಿಸುವ ವಿವಿಧ ತಂತ್ರಗಳ ಪ್ರಯೋಗಗಳನ್ನು ಈ ಕೃತಿಗಳಲ್ಲಿ ಕಾಣಬಹುದು. 19ನೆಯ ಶತಮಾನದ ಕಡೆಯ ವರ್ಷಗಳಲ್ಲಂತೂ ಕಾದಂಬರಿ ರಚನೆ ಒಂದು ವ್ಯಾಪಾರೋದ್ಯಮವೇ ಆಯಿತು. ಅಗ್ಗದ ಜನಪ್ರಿಯತೆ, ಹಣಸಂಪಾದನೆ ಕಾದಂಬರಿಕಾರರ ಗುರಿಯಾದುವು. ರೆನೆ ಬಾಜಿûನ್‍ಪಾಲ್ ಬೋರ್ಗೆಟ್, ಅಬೆಲ್ ಹವ್ರ್ಮೆಂಟ್, ಮಾರ್ಸೆಲ್ ಪ್ರೂಸ್ಟ್ ಇವರ ಕೃತಿಗಳು ಅಸಂಖ್ಯಾತವಾಗಿ ಖರ್ಚಾದುವು. ಆದರೆ ಅವರ ಒಂದು ಕೃತಿಯೂ ವಸ್ತುನಿಷ್ಠವಾದ, ಪ್ರತಿಭಾವಪೂರ್ಣವಾದ ಸಾಹಿತ್ಯಕೃತಿ ಎನಿಸಿಕೊಳ್ಳಲಿಲ್ಲ. ಪಿಯರ್ ಲೋಟಿ (1850-1927). ಅನಾಟೋಲ್ ಫ್ರಾನ್ಸ್ (1844-1924) [[ರೊಮೇನ್ ರೋಲಾ]] (1866-1944) 19ನೆಯ ಶತಕದ ಕಡೆಯ ಭಾಗದಲ್ಲಿ ಬಂದ ಶ್ರೇಷ್ಠ ಕಾದಂಬರಿಕಾರರು. 20ನೆಯ ಶತಮಾನದ ಮೊದಲ ಭಾಗದಲ್ಲೂ ಇವರ ಬರೆವಣಿಗೆ ತನ್ನ ಯಶಸ್ಸನ್ನು ಉಳಿಸಿಕೊಂಡಿತ್ತು. ಲೋಟಿ ಪ್ರತಿಭಾವಂತ. ವಸ್ತುನಿಷ್ಠವಾದ ಮನೋಧರ್ಮವುಳ್ಳ ಶ್ರೇಷ್ಠ ಕಲಾವಿದ. ಆನಟೋಲ್ ಫ್ರಾನ್ಸ್ ವಿಲಕ್ಷಣ ಸ್ವಭಾವದ ದೊಡ್ಡ ಸಾಹಿತಿ. ಸ್ವೋಪಜ್ಞತೆ, ಸ್ವತಂತ್ರವಾದ ವಿಚಾರಧಾರೆ ಮುಂತಾದ ಫ್ರೆಂಚ್ ಪರಂಪರೆಯ ಶ್ರೇಷ್ಠಾಂಶಗಳು ಈತನ ಮನೋಧರ್ಮದಲ್ಲಿ ಬೆರೆತು ಹೋಗಿದ್ದುವು. ಈತನ ಪುಸ್ತಕಗಳಷ್ಟನ್ನು ಮಾತ್ರ ಓದಿದರೆ ಸಾಕು ಈತನ ನಾಡಿನ, ಈತನ ಕಾಲದ ಎಲ್ಲವನ್ನೂ ತಿಳಿದಂತಾಗುತ್ತದೆ. ಈತನ ಮಹತ್ತರ ಕೃತಿ, ಪೆಂಗ್ವಿನ್ ಐಲೆಂಡ್ ನಾಗರಿಕತೆಯ ಚರಿತ್ರೆಯ ವಿಡಂಬನೆ. ಸ್ವಿಫ್ಟ್, ವಾಲ್ಟೇರ್ ಮುಂತಾದ ಹಿರಿಯ ವಿಡಂಬನಕಾರರೂ ಮೆಚ್ಚಿ ನಮಿಸಿರುವ ಕೃತಿ. ಕಾಂಟೆಂಪೊರೆರಿ ಹಿಸ್ಟರಿ ಎಂಬ ಹೆಸರಿನ ಕಾದಂಬರಿ ಚತುಷ್ಟಯ. ದಿ ಕ್ರೈಮ್ ಆಫ್ ಸಿಲ್ವೆಸ್ಟರ್ ಬೊನಾರ್ಡ ಎಂಬುವು ಈತನ ಇತರ ಶ್ರೇಷ್ಠ ಕೃತಿಗಳು. ಫ್ರಾನ್ಸ್‍ನದು ಸರಳವಾದ, ಶುದ್ಧವಾದ ಶೈಲಿ. ವಿಚಾರಗಳು ಕ್ರಾಂತಿಕಾರಕ ಸೋಗು. ಆಷಾಡಭೂತಿತನಗಳನ್ನು ಕಂಡರೆ ಬೆಂಕಿಯಾಗುವ ಈತನ ಕೋಪ ಸಾತ್ತ್ವಿಕವಾದ್ದು. ಅದರಲ್ಲಿ ಆಕ್ರೋಶದ ಕಡುತಾಪವಿಲ್ಲ. ತಾತ್ತ್ವಿಕ ಸಮಚಿತ್ತ. ವ್ಯಂಗ್ಯ ಮತ್ತು ಆರೋಗ್ಯಕರ ಸೂಕ್ಷ್ಮ ವಿಮರ್ಶನ ದೃಷ್ಟಿ ಇವನಲ್ಲಿವೆ.
 
ರೊಮೆನ್ ರೋಲಾನ ಜೀನ್ ಕ್ರಿಸ್ಟೋಫೆ (ಹತ್ತು ಸಂಪುಟಗಳ ಸುದೀರ್ಘ ಕಾದಂಬರಿ) ಒಂದು ಅಮರ ಕೃತಿ.
೮೦ ನೇ ಸಾಲು:
 
 
ಕೊಲೆಟ್ಟೆ 20ನೆಯ ಶತಕದ ಪೂರ್ವಾರ್ಧದ ಅತ್ಯಂತ ಜನಪ್ರಿಯ ಕಾದಂಬರಿಕಾರ. [[ಆಲ್ಬರ್ಟ ಕಾಮು]] ಒಬ್ಬ ಪ್ರಭಾವಶಾಲಿ ಬರಹಗಾರ. ಈತನ ಎಲ್ಲ ಕಾದಂಬರಿಗಳ ಪಲ್ಲವಿ. ವ್ಯಕ್ತಿಯ ಸಮಸ್ಯೆ ಮತ್ತು ಆಗುಹೋಗುಗಳೆಲ್ಲ ಹೇಗೆ ಸಮಾಜ ವ್ಯವಸ್ಥೆಯ ಒಂದು ಅವಿಭಾಜ್ಯ ಭಾಗವಾಗಿರುತ್ತವೆ ಎಂಬುದನ್ನು ತೋರಿಸುವುದೇ. ಈತನ ಕಾಲಿಗುಲ ಹಾಗೂ ಇತರ ಕೃತಿಗಳು 1965ರ ಈಚಿನ ಕನ್ನಡ ಲೇಖಕರ ಮೇಲೂ ಹೆಚ್ಚಿನ ಪರಿಣಾಮ ಬೀರಿವೆ. 1956ರಲ್ಲಿ ಪ್ರಕಟವಾದ ಲಾ ಷೂಟ್ ಮಾನವನ ಕೋಟಲೆ-ಸಂಕಷ್ಟಗಳನ್ನು ಕುರಿತ ಕಾದಂಬರಿ. ಆಂದ್ರೆ ಷೀಡ್ ಇನ್ನೊಬ್ಬ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರ. ಈತನ ಮನೋವೈಜ್ಞಾನಿಕ ಕಾದಂಬರಿಗಳು ಮತ್ತು ಈ ಕಾಲದ ವಿಮರ್ಶಾ ಮಾನದಂಡವನ್ನೇ ನಿರ್ಮಿಸಿದ ಸಾಹಿತ್ಯ ವಿಮರ್ಶಾ ಲೇಖನಗಳು ಫ್ರೆಂಚ್ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆಗಳು. ಈತ ಮೊದಲು ಮಲ್ಲಾರ್ಮೆ. ವೇಲರಿ. ಮೆಟರ್‍ಲಿಂಕ್‍ರಿಂದ ಪ್ರಭಾವಿತನಾಗಿ ಸಂಕೇತ ವಿಧಾನದ ಕೃತಿಕಾರನಾಗಿದ್ದ.
 
 
೧೦೨ ನೇ ಸಾಲು:
ಕಾವ್ಯದಲ್ಲಿ ಪಾಲ್ ವೇಲರಿ (1871-1945) ಹಾಗೂ ಅಪಾಲಿನೇರ್ ಅವರ ಅನಂತರ ಜೂಲ್ಸ್ ಸೂಪರ್‍ವಿಯೆಲ್ಲೆ (1884) ಶ್ರೇಷ್ಠ ಕವಿಗಳು ಎನಿಸಿದ್ದಾರೆ. ಈ ಕಾಲದಲ್ಲಿ ಕವಯಿತ್ರಿಯರು ಹಲವರಿದ್ದರೂ ಒಬ್ಬರಾದರೂ ಪ್ರಥಮ ದರ್ಜೆಯ ಕವಯಿತ್ರಿ ಎನಿಸಲಿಲ್ಲ. ಸಿಡೋನಿ ಗೇಬ್ರಿಯಲ್ ಕೋಲೆಟ್ಟೆ (1873-1954) ಬಹುಜನರ ಮೆಚ್ಚುಗೆ ಪಡೆದ ಕವಯಿತ್ರಿ. ಕಾದಂಬರಿಕಾರ್ತಿಯಾಗಿ ಇನ್ನೂ ಹೆಚ್ಚು ಗಣ್ಯಳು. ಕೌಂಟೆಸ್ ಅನ್ನಾ ಎಲಿಸಬೆತ್ ಡಿ ನೊವಾಯಿಲ್ಲೆ (1876-1933) ಸುಪ್ರಸಿದ್ಧಳಾದ ಕವಯಿತ್ರಿ.
 
[[ಸರ್ರಿಯಲಿಸಮ್ (ನವ್ಯ ಸಾಹಿತ್ಯ ಸಿದ್ದಾಂತ ಚಳವಳಿ)|ಅತಿವಾಸ್ತವಿಕತಾವಾದ]] (ಸರ್ರಿಯಲಿಸಮ್) ಮತ್ತು ಆದರ್ಶರೂಪದ ಕಮ್ಯೂನಿಸಮ್ ಫ್ರೆಂಚ್ ಕಾವ್ಯದ ಪ್ರಧಾನಶಕ್ತಿಗಳಾಗಿ ತಲೆದೋರಿದುವು. ಆಂದ್ರೆ ಬ್ರಿಟೋನ್ (1896-) ಈ ಪಂಥದ ನಾಯಕ. 1940ರಲ್ಲಿ [[ನವ ಅತಿವಾಸ್ತವಿಕತಾವಾದ (ನಿಯೊಸರ್ರಿಯಲಿಸಮ್)]] ಆರಂಭವಾಯಿತು. ವೇಲರಿಯ ಅನಂತರ ಅಂಥ ದೊಡ್ಡ ಕವಿಯಾರೂ ಬರಲಿಲ್ಲ. ಪಂಥಕ್ಕಿಂತ ತಮ್ಮದೇ ಆದ ವ್ಯಕ್ತಿ ವೈಶಿಷ್ಟ್ಯವನ್ನು ಮೆರೆದ ಕವಿಗಳೇ ಹೆಚ್ಚು ಗಮನಾರ್ಹರಾಗಿದ್ದಾರೆ.
 
ಅಸ್ತಿತ್ವವಾದದಲ್ಲೆ[[ಅಸ್ತಿತ್ವವಾದ]]ದಲ್ಲೆ (ಎಕ್ಜಿಸ್ಟೆಂಷಿಯಲಿಸಮ್) ಕ್ರೈಸ್ತ (ಆಸ್ತಿಕ) ಮತ್ತು ನಾಸ್ತಿಕ ಎಂದು ಎರಡು ಪಂಥಗಳಾದವು. ಗೇಬ್ರಿಯಲ್ ಮಾರ್ಸೆಲ್ (1889-) ಮೊದಲನೆಯ ವರ್ಗಕ್ಕೆ ಸೇರಿದ ಗಣ್ಯನಾದರೆ ಎರಡನೆಯ ಗುಂಪಿಗೆ [[ಜೀನ್ ಪಾಲ್ ಸಾತರ್್ೃಸರ್ಟೆ|ಜೀನ್ ಪಾಲ್ ಸಾರ್ತೃ]] (1905-) ಸೇರುತ್ತಾನೆ. ಆತನ ಸಿದ್ಧಾಂತ ಹೊಸಮಾರ್ಗವನ್ನೇ ತೆರೆಯಿತು. ಕಾವ್ಯ, ಕಾದಂಬರಿ, ಪ್ರಬಂಧ, ಉಪನ್ಯಾಸ-ಈ ಎಲ್ಲ ಪ್ರಕಾರಗಳಲ್ಲೂ ಈತ ತನ್ನ ಜೀವನ ತತ್ತ್ವಗಳನ್ನು ನೂತನ ದೃಷ್ಟಿಕೋನವನ್ನು ಅಭಿವ್ಯಕ್ತಿಸಿದ್ದಾನೆ. ಮೂಲತಃ ಈತ ಮಾನವತಾವಾದಿ. ಮಾರಿಸ್ ಮೆರ್ಲೊ ಪೋಂಟಿ (1908-), ಸೈಮೊನ್ ಡಿಬೋವಾಯ್ (1908-). ವಿ-ನಾಟಕಕಾರ ಜೀನ್ ಗೆನೆಟ್ ಸಾತರ್್ೃ ತತ್ತ್ವಗಳ ಪ್ರತಿಪಾದಕರಾಗಿ ಯಶಸ್ವಿ ಕಾದಂಬರಿಗಳನ್ನು ಬರೆದರು.
 
ಕ್ರೈಸ್ತ ಕ್ಯಾಥೋಲಿಕ್ ಧರ್ಮದ ಪುನರುಜ್ಜೀವನ ಈ ಶತಕದ ಮಹತ್ತರ ಘಟನೆ. ಇದರ ಪ್ರಭಾವ ಸಾಹಿತ್ಯದ ಎಲ್ಲ ಪ್ರಕಾರಗಳ ಮೇಲೂ ಪ್ರಬಲವಾಗಿ ಬಿದ್ದರೂ ನಿರೀಕ್ಷಿಸಿದ ಮಹತ್ತರ ಫಲಕೊಡಲಿಲ್ಲವೆಂದು ಸಮರ್ಥ ವಿಮರ್ಶಕರ ಅಭಿಪ್ರಾಯ. ಜೂಲ್ಸ್ ಲೇಮೇಯ್ಟರ್, ಮಾರಿಸ್ ಬ್ಯಾರೆಸ್ ಹೆಸರಿಗೆ ಕ್ಯಾಥೋಲಿಕರಾದರೂ ನಿಜದಲ್ಲಿ ಸಂದೇಹವಾದಿಗಳಾಗಿದ್ದರು. ಆಗಿನ ಹಲವಾರು ಸಾಹಿತಿಗಳು ಇದೆ ಸ್ವಭಾವದವರು.
 
ಎರಡನೆಯ ಮಹಾಯುದ್ಧದ ಅನಂತರ ಅನೇಕ ಸಾಹಿತಿಗಳು ರಾಜಕಾರಣಕ್ಕೆ ತಿರುಗಿದರು. ಸಾತರ್್ೃಸಾರ್ತೃ, ಆರಾಗಾನ್, ಎಲ್ಯೂಯರ್ಡೆ ಲೆ-ಫೆವೆಬ್ರೆ, ಟ್ರೆಸ್ಟಾನ್ ಜಾರಾ, ಏಯ್ಮಿಸಿಜೇರ್-ಮುಂತಾದವರು ಈ ರೀತಿ ರಾಜಕೀಯ ಪ್ರಜ್ಞೆಯಲ್ಲಿ ಆಸಕ್ತರಾಗಿ ಮಾರ್ಕ್ ತತ್ತ್ವಗಳನ್ನು ಬೆಂಬಲಿಸಿದರು. ಐರಿಷ್ ಮೂಲದ ಸ್ಯಾಮ್ಯುಯೆಲ್ ಬೆಕಟ್ಟನ ನಾಟಕಗಳು ದೊಡ್ಡ ವಿವಾದವನ್ನೇ ಎಬ್ಬಿಸಿದುವು. ಈತನದು ಒಂದು ರೀತಿಯಲ್ಲಿ ನೀತಿವಾದ. ಫ್ಯಾಸಿಸ್ಟ್ ವಿರೋಧಿ ಮಾಕ್ರ್ಸಿಸ್ಟ್ ಸಾಹಿತಿಗಳು ಹೆಚ್ಚುತ್ತಿರುವುದು ಒಂದು ಲಕ್ಷಣವಾದರೆ, ಆಂದ್ರೆ ಮಾಲ್‍ರಾನಂಥ ಕಾದಂಬರಿಕಾರರು ಕಮ್ಯೂನಿಸಮ್ ತತ್ತ್ವಗಳಲ್ಲಿ ಭ್ರಮನಿರಸನ ಹೊಂದಿ ಮತ್ತೆ ಪ್ರಜಾಸತ್ತೆಯ ಕಡೆ ವಾಲುವುದು ಇನ್ನೊಂದು ಲಕ್ಷಣ. ಮಾಲ್‍ರಾನ ಮ್ಯಾನ್ಸ್‍ಫೇಟ್ ಎಂಬ ಕೃತಿ ಚೀನಿ ಅಂತಃಕಲಹವನ್ನು ಕುರಿತ, ಸತ್ಯ, ಸತ್ತ್ವೆರಡೂ ಹುರಿಗೊಂಡು ಮೂಡಿದ ಕಾದಂಬರಿ.
 
20ನೆಯ ಶತಕದ ಫ್ರೆಂಚ್ ನಾಟಕರಂಗದಲ್ಲಿ ಸಾಕಷ್ಟು ರಭಸದ ಚಟುವಟಿಕೆಗಳು ಕಂಡು ಬಂದರೂ ಗುಣಮಟ್ಟದಲ್ಲಿ ಕಾವ್ಯದಲ್ಲಿ ಅದಕ್ಕಿಂತ ಹೆಚ್ಚಾಗಿ ಕಾದಂಬರಿಯಲ್ಲಿ ಪಡೆದ ಉತ್ಕøಷ್ಟತೆಯನ್ನು ಫ್ರೆಂಚ್ ಸಾಹಿತಿಗಳು ನಾಟಕದಲ್ಲಿ ಸಾಧಿಸಲಿಲ್ಲ. ಅದಕ್ಕೆ ಕಾರಣ ಪ್ರತಿಭಾವಂತ ನಾಟಕಕಾರರೇ ಇಲ್ಲದಿದ್ದುದು ಒಂದು. ನಾಟಕ ಕ್ಷೇತ್ರದಲ್ಲೂ ಸುಪ್ರಸಿದ್ಧರಾದ ಕ್ಲಾಡೆಲ್, ಜೂಲ್ಸ್ ರೋಮೇನ್ಸ್, ಬ್ಲಾಖ್ ರೋಮೇನ್ ರೋಲಾ, ಗೇಬ್ರಿಯಲ್ ಮಾರ್ಸೆಲ್, ಮಂತರ್, ಲ್ಯಾಂಟ್, ಗಿರಡು, ಕಾಕ್ಟ್ಯೂ, ಸೂಪರ್ ವಿಯೆಲ್ಲೆ, ಸಾತರ್್ೃ ಮತ್ತು ಕಾಮು ಮೂಲಭೂತವಾಗಿ ಕಾವ್ಯ, ಕಾದಂಬರಿ ಮಾಧ್ಯಮಗಳಲ್ಲಿ ಸಮರ್ಥರಾದವರು. ನಾಟಕ ಕಲೆಗೆ ಒಗ್ಗದ, ಪೋಷಕವಾಗದ ಕಾವ್ಯದ, ಕಾದಂಬರಿಯ ಅಂಶಗಳನ್ನು ಬೆರೆಸಿ ನಾಟಕ ಅದರ ಸಹಜ ಧರ್ಮದಂತೆ ಪ್ರದರ್ಶನ ಕಲೆಯಾಗುವುದನ್ನು ಹಾಳು ಮಾಡಿ ಕೇವಲ ಶ್ರವ್ಯ ನಾಟಕವಾಗಿ ಉಳಿಯುವಂತೆ ಮಾಡಿದುದು ಇವರು ಎಸಗಿದ ದೊಡ್ಡ ತಪ್ಪು. ಕಾದಂಬರಿಯಲ್ಲಿ ಇಲ್ಲವೆ ಪ್ರಬಂಧಗಳಲ್ಲಿ, ಕಾವ್ಯದಲ್ಲಿ ಶ್ರೇಷ್ಠವಾಗಿ ಕಾಣಬಹುದಾದ ಅಂಶ ಅದು ಎಷ್ಟೇ ಚೆನ್ನಾಗಿದ್ದರೂ ನಾಟಕಕ್ಕೆ ಮಾರಕವಾಗುವ ಸಂಭವವುಂಟು. ನಾಟಕಕ್ಕೆ ಅತಿಕ್ರಮ ಪ್ರವೇಶ ಮಾಡಿದ ಈ ಕಾದಂಬರಿಕಾರರು, ಕವಿಗಳು ಉತ್ತಮ ನಾಟಕಕಾರರೂ ಆಗಿದ್ದಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು, ಅವರ ಪ್ರಭಾವ ಅತ್ಯಂತ ಪ್ರಬಲವಾಗಿದ್ದದ್ದರಿಂದ, ನಾಟಕವೇ ಸಹಜ ಮಾಧ್ಯಮವಾಗಿದ್ದ ನಾಟಕಕಾರರೂ ಅದೇ ಪ್ರಭಾವಕ್ಕೊಳಗಾಗಿ ಅಂಥವೇ ತಪ್ಪುಗಳನ್ನು ಮಾಡಿದರು. ಎಡ್ಮಂಡ್ ರೋಸ್ಟ್ಯಾಂಡ್, ಫ್ರಾಂಕೊಂಡಿ ಕ್ಯುರೆಲ್ ಮತ್ತು ಟ್ರಸ್ಟ್ಯಾನ್ ಬರ್ನಾಟ್ ಈ ಶತಕದ ಫ್ರೆಂಚ್ ನಾಟಕರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ ಅವರ ಖ್ಯಾತಿ ಬಹುಕಾಲ ಉಳಿಯಲಿಲ್ಲ. ಜೀನ್ ಅನೌಯಿಲ್ (1910-), ಮಾರ್ಸೆಲ್ ಪ್ಯಾಗ್ನೊಲ್, ಹೆನ್ರಿರೆನೆಲಿನೊರ್ ಮ್ಯಾಂಡ್, ಸ್ಟೀವ್ ಪ್ಯಾಸ್ಯೂರ್, ಸಾಚಾ ಗಿಟ್ರೆ 1930ರಿಂದೀಚೆಯ ಪ್ರಸಿದ್ಧ ನಾಟಕಕಾರರು.
೧೧೫ ನೇ ಸಾಲು:
 
1950ರ ದಶಕದಲ್ಲಿ ಒಂದು ಬಗೆಯ ಗೊಂದಲದ ವಾತಾವರಣವೇ ಕಾಣುತ್ತದೆ. ಹೊಸ ಹೊಸ ಸಾಹಿತ್ಯ ಪ್ರಯೋಗಗಳನ್ನು ದಾರಿಗಳನ್ನೂ ಹುಡುಕುವ ಉತ್ಸಾಹದಲ್ಲಿ ಕೆಲವರಿದ್ದರೆ, ಇನ್ನು ಕೆಲವರು ಆಧ್ಯಾತ್ಮಿಕ ಮೌಲ್ಯಗಳ ಕಡೆ ತಿರುಗುವ, ಮತ್ತೆ ಕೆಲವರು ಆಧ್ಯಾತ್ಮಿಕ ಹಾಗೂ ರಾಜಕೀಯ ಎರಡರಿಂದಲೂ ಸಾಹಿತ್ಯವನ್ನು ಮುಕ್ತಗೊಳಿಸುವ ಹವಣಿಕೆಯಲ್ಲಿರುವುದು ಕಂಡುಬರುತ್ತದೆ.
)
(ಕೆ.ಬಿ.ಪಿ.)
 
ಎರಡನೆಯ ಮಹಾಯುದ್ಧದ ನಂತರ ಶೆನೆ ಷಾರ್ (ಅhಚಿಡಿ), ಜೂಲ್ಸ್ ಸುಪರ್‍ವೀಲೆ, ನೈಸ್ ಬಾನಿಫಾಯ್ ಮೊದಲಾದ ಕವಿಗಳು ಸಾಂಪ್ರದಾಯಿಕ ವಸ್ತುಗಳಿಗೆ ಮತ್ತು ಪ್ರಕಾರಗಳಿಗೆ ಅಂಟಿಕೊಂಡರು. ಆದರೆ ಹಲವರು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಫಿಲಸ್ ಜಕೊತೆಯ್ ಕವನಗಳಿಗೆ ಜಪಾನಿನ ಹೈಕು ಪ್ರಕಾರವೇ ಸ್ಫೂರ್ತಿ. ಮಾಸಿಲಿನ್ ಪ್ಲೆನೆ ಮುಂತಾದವರು ಹೊಸದೊಂದು ಪಂಥವನ್ನು ಪ್ರಾರಂಭಿಸಿದ್ದಾರೆ. ಕಾವ್ಯದ ಕಾವ್ಯಾಂಶ ಇವರಿಗೆ ಬೇಕಿಲ್ಲ, ಭಾಷೆಯು ಸಂವಹನ ಮಾಡುವ ಅರ್ಥದಲ್ಲಿ ಇವರಿಗೆ ಆಸಕ್ತಿ ಇಲ್ಲ. ಭಾಷೆಯನ್ನು ಸಂಜ್ಞೆಗಳ ವ್ಯವಸ್ಥೆಯಾಗಿ ಇವರು ಕಾಣುತ್ತಾರೆ. 20ನೆ ಶತಮಾನದ ಉತ್ತರಾರ್ಧದಲ್ಲಿ ಶ್ರೇಷ್ಠ ಕವಿ ಯಾರೂ ಮೂಡಿ ಬರಲಿಲ್ಲ.
"https://kn.wikipedia.org/wiki/ಫ್ರೆಂಚ್_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ