ಫ್ರೆಂಚ್ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕಿಕರಣ
ಟ್ಯಾಗ್: 2017 source edit
ಚುNo edit summary
ಟ್ಯಾಗ್: 2017 source edit
೬೨ ನೇ ಸಾಲು:
ರಾಜಾಶ್ರಯದ ಸಂಕೋಲೆಯನ್ನು ಕಡಿದೊಗೆದುದೇ 18ನೆಯ ಶತಕದ ಫ್ರೆಂಚ್ ಸಾಹಿತ್ಯದ ಬಹು ದೊಡ್ಡ ಸಾಧನೆ. ದೊರೆ 14ನೆಯ ಲೂಯಿಯ ಸಾವಿನೊಂದಿಗೆ ಬಹುಕಾಲದ ಒಂದು ಪರಂಪರೆಯ ಯುಗ ಮುಗಿಯಿತು. ಸಾಹಿತ್ಯದಲ್ಲಿ ಮಹತ್ತರವಾದ ಪ್ರಗತಿಯೇನೂ ಕಂಡುಬರದಿದ್ದರೂ ಸ್ವೋಪಜ್ಞ ಚೇತನ, ವೈಜ್ಞಾನಿಕ, ವೈಚಾರಿಕ ಸಂಶೋಧನೆ. ಗ್ರಂಥರಚನೆಗಳಲ್ಲಿ ಹರಿಯತೊಡಗಿದುವು. ಸಾಮಾಜಿಕ ಮತ್ತು ಐತಿಹಾಸಿಕ ಬದಲಾವಣೆಗಳಿಗೆ ದಾರಿಕಂಡಿತು. ಫ್ರಾಂಕೊ ವಾಲ್ಟೇರ್ (1624-1778) ಮತ್ತು ಜೀನ್ ಜಾಕ್ವೆಸ್ ರೂಸೊ (1712-78) ಇವರ ಕೃತಿಗಳು ಫ್ರಾನ್ಸಿನ ಅಂದಿನ ಸಾಮಾಜಿಕ ರಾಜಕೀಯ ದುಸ್ಥಿತಿಯನ್ನು ವಿಡಂಬಿಸಿ, ಜನತೆಯನ್ನು ಮಹಾಕ್ರಾಂತಿಗೆ ಪ್ರಚೋದಿಸಿದುವು, ಹೊಸ ಸಮಾಜದ ನಿರ್ಮಾಣದ ರೂಪ-ರೇಖೆಗಳನ್ನು ಸೂಚಿಸಿದುವು. ಲಿಸ್ಭೆಜ್, ಮಾರಿವ್ಯಾ ಮತ್ತು ಪ್ರೆವೋಸ್ಟ್ ಕಾದಂಬರಿ ಜಗತ್ತಿನಲ್ಲೂ ರೂಸೊ, ಲೆಬ್ರುನ್ ಪಿಂಡಾರೆ ಕಾವ್ಯಕ್ಷೇತ್ರದಲ್ಲೂ ಆ ಕಾಲಕ್ಕೆ ಹೆಸರಾದವರು. ಆಂದ್ರೆ ಚೆನಿಯರ್ (1762-94 ಭಾವಗೀತೆಗಳಲ್ಲಿ ಗ್ರೀಕ್ ಕ್ಲ್ಯಾಸಿಕಲ್ ಮಾದರಿಗಳ ಸೊಗಸನ್ನು ಹೊರಹೊಮ್ಮಿಸಿದ.
 
==೧೯ ನೆಯ ಶತಮಾನಶತಮಾನದಿಂದ ಈಚೆ==
19ನೆಯ ಶತಕದಲ್ಲಿ ಹಲವಾರು ನೂತನ ಸಾಹಿತ್ಯ ಪಂಥಗಳು ಆರಂಭವಾದುವು. ಅವುಗಳಲ್ಲಿ ಮೊದಲನೆಯದು ರೊಮ್ಯಾಂಟಿಕ್ ಕಾವ್ಯಮಾರ್ಗ. ವ್ಯಕ್ತಿ ವಿಶಿಷ್ಟತೆಗೆ ಮನ್ನಣೆ ಕೊಡುವುದೆ ಈ ಪಂಥದ ಮುಖ್ಯ ಧ್ಯೇಯ. ಫ್ರಾಂಕೊ ಡಿ ಷಾಟುಬ್ರಿಯಾಂಡ್ (1768-1848) ಈ ಪಂಥದ ಪ್ರವರ್ತಕ. ಆಲ್ಪಾನ್ಸ್ ಡಿ ಲಾಮಾರ್ಟಿನ್ ಇದನ್ನು ಬೆಳೆಸಿದ. ವಿಕ್ಟರ್ ಹ್ಯೂಗೊ ರೊಮ್ಯಾಂಟಿಕ್ ಸಾಹಿತಿಗಳಲ್ಲಿ ಅದ್ವಿತೀಯ. ಈತನ ಕವನಗಳಲ್ಲಿನ ಶಬ್ದಸಂಪತ್ತಿನ. ವಿವಿಧ ಛಂದೋ ಪ್ರಯೋಗಗಳು ಗಣನೀಯವಾಗಿವೆ. ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲೆತ್ನಿಸಿ ವಿಫಲನಾದ. ಈತನ ಲೆಮಿಸೆರಬಲೆ, ಹಂಚ್ ಬ್ಯಾಕ್ ಆಫ್ ನಾತರ್‍ದಾಮ್ ಸುಪ್ರಸಿದ್ಧ ಕಾದಂಬರಿಗಳು.
 
೭೮ ನೇ ಸಾಲು:
 
1870ರಿಂದೀಚೆಗೆ ಫ್ರೆಂಚ್ ಸಾಹಿತ್ಯ ಮೊದಲಿಗಿಂತ ಹೆಚ್ಚು ಸಂಕೀರ್ಣವಾಗಿ ವಿಪುಲವಾಗಿ ಬೆಳೆದಿದೆ. ಕಾದಂಬರಿಗಳ ವೈವಿಧ್ಯ ಹಾಗೂ ಶಾಖೋಪಶಾಖೆಗಳಾಗಿ ಬೆಳೆದು ಬಂದ ಪ್ರಯೋಗಗಳಂತೂ ಯಾವ ವರ್ಗೀಕರಣಕ್ಕೂ ಸಿಕ್ಕುವುದಿಲ್ಲ. ಕವಿಯೂ ಆಗಿದ್ದ ಜೂಲ್ಸ್ ರೊಮೇನನ ಲೆ ಹೋಮೆ ಡಿ ಬಾನ್ ವೊಲೊಂಟೆ 27 ಸಂಪುಟಗಳ ಬೃಹತ್ ಕಾದಂಬರಿ. ಈತನ ನಾಕ್ (1923) ಎಂಬ ಹೆಸರಿನ ವೈದ್ಯವೃತ್ತಿಯನ್ನು ವಿಡಂಬಿಸುವ ಸಾಮಾಜಿಕ ಕಾದಂಬರಿ ಬಹು ಯಶಸ್ವಿಯಾಯಿತು. ಆಂದ್ರೆ ಷೀಡ್ ಪ್ರಭಾವ 20ನೆಯ ಶತಕದ ಪೂರ್ವಾರ್ಧವನ್ನೆಲ್ಲ ವ್ಯಾಪಿಸಿತು. ಪಿಯರೆ ಹಂಪ್ ಎಂಬ ಕಾದಂಬರಿಕಾರ ನಾಯಕ ಅಥವಾ ಕೇಂದ್ರ ವ್ಯಕ್ತಿಯೇ ಇಲ್ಲದ ಕಾದಂಬರಿಯ ಪ್ರಯೋಗ ಮಾಡಿದೆ. ಇಲ್ಲಿ ಕೈಗಾರಿಕಾ ಕ್ಷೇತ್ರ ಹಿನ್ನೆಲೆ, ಮಾನವೀಯ ಮೌಲ್ಯಗಳಿಗೆ ಮಾತ್ರ ಪ್ರಾಮುಖ್ಯತೆ. ಜೀನ್ ರಿಚರ್ಡ ಬ್ಲೋಷ್, ಯೂಜಿನ್ ಮಾಂಟ್‍ಪೋರ್ಟ, ಜೋಲಾನ ಮಾದರಿಯನ್ನೇ ಅನುಸರಿಸಿದರು. ಜೀನ್ ಷ್ಲೂಂಬೆರ್ಗರ್‍ನ (1877) ಸೇಂಟ್ ಸ್ಯಾಟರ್ನಿನ್ ಈ ಕಾಲದ ಶ್ರೇಷ್ಠ ಕಾದಂಬರಿಗಳಲ್ಲೊಂದು.
 
== ವಿಮರ್ಶಾ ಕ್ಷೇತ್ರ ==
ವಿಮರ್ಶಾ ಕ್ಷೇತ್ರದಲ್ಲಂತೂ ಫ್ರಾನ್ಸನ್ನು ಮೀರಿಸುವ ದೇಶ ಈ ಶತಕದಲ್ಲಿ ಮತ್ತೊಂದಿರಲಿಲ್ಲ. ಬಾಯ್ಲೋನಿಂದ ರೆಮಿ ಡಿ ಗೌರ್ಮಾಂಟ್‍ವರೆಗೆ ಬಂದ ಎಲ್ಲ ವಿಮರ್ಶಕರೂ ಈಚಿನ ಕಿರಿಯ ತರುಣ ವಿಮರ್ಶಕರೂ ವಿರ್ಮಶೆಯ ಸರ್ವಾಂಗೀಣ ಬೆಳವಣಿಗೆಯನ್ನು ಹಂತ ಹಂತವಾಗಿ ಸಾಧಿಸುತ್ತ ಬಂದಿದ್ದಾರೆ. ಅತ್ಯುತ್ಕøಷ್ಟವೂ ಸೃಜನಾತ್ಮಕವೂ ಆದ ಫ್ರೆಂಚ್ ವಿಮರ್ಶೆಯ ಪ್ರಭಾವದಿಂದ ಸಾಹಿತ್ಯದ ಎಲ್ಲ ಪ್ರಕಾರಗಳೂ ಸರಿಯಾದ ರೀತಿಯಲ್ಲಿ ಬೆಳೆದುವು. ಸೇಂಟ್ ಬವ್, ರೆನಾನ್, ಟೇಯ್ನ್, ಷೆರರ್, ಸಾರ್ಸಿ-ಈ ಶ್ರೇಷ್ಠ ವಿಮರ್ಶಕರ ಪರಂಪರೆಗೆ ಈಗಲೂ ಚ್ಯುತಿ ಇಲ್ಲ. ಎಮಿಲ್ ಫಾಗ್ವೆಟ್, ಫರ್ಡಿನೆಂಡ್ ಬ್ರನೆಟಿಯೆರ್, ಜೂಲ್ಸ್‍ಲ್ಸ್ ಮೇಯ್ಟರ್, ರೆಮಿ ಡಿ ಗೌರ್ಮಾಂಟ್, ಚಾಲ್ರ್ಸ ಪೆಗೈ, ಲಿಯೋನ್ ಡಾಡೆಟ್, ಚಾಲ್ರ್ಸ ಮೌರ್ರಾಸ್ ವಿಮರ್ಶಾ ಸಾಹಿತ್ಯದ ಅಧ್ವರ್ಯುರುಗಳು. ಎಮಿಲ್ Z್ಫರ್ಟಿಯರ್, ಅಲೇನ್, ಹೆನ್ರಿ ಬ್ರಿಮಂಡ್, ಜೂಲಿಯನ್ ಬೆಂಡಾ ಪ್ರಸಿದ್ಧ ಸಾಹಿತ್ಯ ಪ್ರಬಂಧಕಾರರು. ಬ್ರನೆಟಿಯೆರ್, ಫಾಗ್ವೆಟ್, ಅನಾತೋಲ್ ಫ್ರಾನ್ಸ್, ಕಿರಿಯ ಪ್ರಾಯದಲ್ಲೇ ಗತಿಸಿದ ಮಾರ್ಸೆಲ್ ಷ್ವೋಬ್, ಎಮಿಲ್ ಹೆನೆಕ್ವಿನ್ ವಿಮರ್ಶಾಸಾಹಿತ್ಯವನ್ನು ಹೊಸ ಹೊಸ ದೃಷ್ಟಿಕೋನಗಳ ವಿಚಾರಧಾರೆಗಳಿಂದ ಶ್ರೀಮಂತಗೊಳಿಸಿದುದು ಮಾತ್ರವಲ್ಲ ಪ್ರೆಂಚ್ ಮತ್ತು ಇತರ ಸಮಕಾಲೀನ ಐರೋಪ್ಯ ಸಾಹಿತ್ಯಗಳ ಸಾಧನೆ. ಸಿದ್ಧಿಗಳ ಮೌಲ್ಯ ನಿರ್ಣಯವನ್ನೂ ಸಮರ್ಪಕವಾಗಿ ಮಾಡಿದರು. ಹೀಗಾಗಿ ವಿಮರ್ಶೆಯಲ್ಲಿ ಇಡೀ ವಿಶ್ವ ಸಾಹಿತ್ಯವೇ ಫ್ರೆಂಚ್ ವಿಮರ್ಶಾತತ್ವಗಳಿಗೆ ಋಣಿ.
 
==೨೦ ನೆಯ ಶತಮಾನ==
ಕೊಲೆಟ್ಟೆ 20ನೆಯ ಶತಕದ ಪೂರ್ವಾರ್ಧದ ಅತ್ಯಂತ ಜನಪ್ರಿಯ ಕಾದಂಬರಿಕಾರ. ಆಲ್ಬರ್ಟ ಕಾಮು ಒಬ್ಬ ಪ್ರಭಾವಶಾಲಿ ಬರಹಗಾರ. ಈತನ ಎಲ್ಲ ಕಾದಂಬರಿಗಳ ಪಲ್ಲವಿ. ವ್ಯಕ್ತಿಯ ಸಮಸ್ಯೆ ಮತ್ತು ಆಗುಹೋಗುಗಳೆಲ್ಲ ಹೇಗೆ ಸಮಾಜ ವ್ಯವಸ್ಥೆಯ ಒಂದು ಅವಿಭಾಜ್ಯ ಭಾಗವಾಗಿರುತ್ತವೆ ಎಂಬುದನ್ನು ತೋರಿಸುವುದೇ. ಈತನ ಕಾಲಿಗುಲ ಹಾಗೂ ಇತರ ಕೃತಿಗಳು 1965ರ ಈಚಿನ ಕನ್ನಡ ಲೇಖಕರ ಮೇಲೂ ಹೆಚ್ಚಿನ ಪರಿಣಾಮ ಬೀರಿವೆ. 1956ರಲ್ಲಿ ಪ್ರಕಟವಾದ ಲಾ ಷೂಟ್ ಮಾನವನ ಕೋಟಲೆ-ಸಂಕಷ್ಟಗಳನ್ನು ಕುರಿತ ಕಾದಂಬರಿ. ಆಂದ್ರೆ ಷೀಡ್ ಇನ್ನೊಬ್ಬ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರ. ಈತನ ಮನೋವೈಜ್ಞಾನಿಕ ಕಾದಂಬರಿಗಳು ಮತ್ತು ಈ ಕಾಲದ ವಿಮರ್ಶಾ ಮಾನದಂಡವನ್ನೇ ನಿರ್ಮಿಸಿದ ಸಾಹಿತ್ಯ ವಿಮರ್ಶಾ ಲೇಖನಗಳು ಫ್ರೆಂಚ್ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆಗಳು. ಈತ ಮೊದಲು ಮಲ್ಲಾರ್ಮೆ. ವೇಲರಿ. ಮೆಟರ್‍ಲಿಂಕ್‍ರಿಂದ ಪ್ರಭಾವಿತನಾಗಿ ಸಂಕೇತ ವಿಧಾನದ ಕೃತಿಕಾರನಾಗಿದ್ದ.
 
Line ೧೨೪ ⟶ ೧೧೯:
ಎರಡನೆಯ ಮಹಾಯುದ್ಧದ ನಂತರ ಶೆನೆ ಷಾರ್ (ಅhಚಿಡಿ), ಜೂಲ್ಸ್ ಸುಪರ್‍ವೀಲೆ, ನೈಸ್ ಬಾನಿಫಾಯ್ ಮೊದಲಾದ ಕವಿಗಳು ಸಾಂಪ್ರದಾಯಿಕ ವಸ್ತುಗಳಿಗೆ ಮತ್ತು ಪ್ರಕಾರಗಳಿಗೆ ಅಂಟಿಕೊಂಡರು. ಆದರೆ ಹಲವರು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಫಿಲಸ್ ಜಕೊತೆಯ್ ಕವನಗಳಿಗೆ ಜಪಾನಿನ ಹೈಕು ಪ್ರಕಾರವೇ ಸ್ಫೂರ್ತಿ. ಮಾಸಿಲಿನ್ ಪ್ಲೆನೆ ಮುಂತಾದವರು ಹೊಸದೊಂದು ಪಂಥವನ್ನು ಪ್ರಾರಂಭಿಸಿದ್ದಾರೆ. ಕಾವ್ಯದ ಕಾವ್ಯಾಂಶ ಇವರಿಗೆ ಬೇಕಿಲ್ಲ, ಭಾಷೆಯು ಸಂವಹನ ಮಾಡುವ ಅರ್ಥದಲ್ಲಿ ಇವರಿಗೆ ಆಸಕ್ತಿ ಇಲ್ಲ. ಭಾಷೆಯನ್ನು ಸಂಜ್ಞೆಗಳ ವ್ಯವಸ್ಥೆಯಾಗಿ ಇವರು ಕಾಣುತ್ತಾರೆ. 20ನೆ ಶತಮಾನದ ಉತ್ತರಾರ್ಧದಲ್ಲಿ ಶ್ರೇಷ್ಠ ಕವಿ ಯಾರೂ ಮೂಡಿ ಬರಲಿಲ್ಲ.
 
== ವಿಮರ್ಶಾ ಕ್ಷೇತ್ರ ==
ವಿಮರ್ಶಾ ಕ್ಷೇತ್ರದಲ್ಲಂತೂ ಫ್ರಾನ್ಸನ್ನು ಮೀರಿಸುವ ದೇಶ ಈ ಶತಕದಲ್ಲಿ ಮತ್ತೊಂದಿರಲಿಲ್ಲ. ಬಾಯ್ಲೋನಿಂದ ರೆಮಿ ಡಿ ಗೌರ್ಮಾಂಟ್‍ವರೆಗೆ ಬಂದ ಎಲ್ಲ ವಿಮರ್ಶಕರೂ ಈಚಿನ ಕಿರಿಯ ತರುಣ ವಿಮರ್ಶಕರೂ ವಿರ್ಮಶೆಯ ಸರ್ವಾಂಗೀಣ ಬೆಳವಣಿಗೆಯನ್ನು ಹಂತ ಹಂತವಾಗಿ ಸಾಧಿಸುತ್ತ ಬಂದಿದ್ದಾರೆ. ಅತ್ಯುತ್ಕøಷ್ಟವೂ ಸೃಜನಾತ್ಮಕವೂ ಆದ ಫ್ರೆಂಚ್ ವಿಮರ್ಶೆಯ ಪ್ರಭಾವದಿಂದ ಸಾಹಿತ್ಯದ ಎಲ್ಲ ಪ್ರಕಾರಗಳೂ ಸರಿಯಾದ ರೀತಿಯಲ್ಲಿ ಬೆಳೆದುವು. ಸೇಂಟ್ ಬವ್, ರೆನಾನ್, ಟೇಯ್ನ್, ಷೆರರ್, ಸಾರ್ಸಿ-ಈ ಶ್ರೇಷ್ಠ ವಿಮರ್ಶಕರ ಪರಂಪರೆಗೆ ಈಗಲೂ ಚ್ಯುತಿ ಇಲ್ಲ. ಎಮಿಲ್ ಫಾಗ್ವೆಟ್, ಫರ್ಡಿನೆಂಡ್ ಬ್ರನೆಟಿಯೆರ್, ಜೂಲ್ಸ್‍ಲ್ಸ್ ಮೇಯ್ಟರ್, ರೆಮಿ ಡಿ ಗೌರ್ಮಾಂಟ್, ಚಾಲ್ರ್ಸ ಪೆಗೈ, ಲಿಯೋನ್ ಡಾಡೆಟ್, ಚಾಲ್ರ್ಸ ಮೌರ್ರಾಸ್ ವಿಮರ್ಶಾ ಸಾಹಿತ್ಯದ ಅಧ್ವರ್ಯುರುಗಳು. ಎಮಿಲ್ Z್ಫರ್ಟಿಯರ್, ಅಲೇನ್, ಹೆನ್ರಿ ಬ್ರಿಮಂಡ್, ಜೂಲಿಯನ್ ಬೆಂಡಾ ಪ್ರಸಿದ್ಧ ಸಾಹಿತ್ಯ ಪ್ರಬಂಧಕಾರರು. ಬ್ರನೆಟಿಯೆರ್, ಫಾಗ್ವೆಟ್, ಅನಾತೋಲ್ ಫ್ರಾನ್ಸ್, ಕಿರಿಯ ಪ್ರಾಯದಲ್ಲೇ ಗತಿಸಿದ ಮಾರ್ಸೆಲ್ ಷ್ವೋಬ್, ಎಮಿಲ್ ಹೆನೆಕ್ವಿನ್ ವಿಮರ್ಶಾಸಾಹಿತ್ಯವನ್ನು ಹೊಸ ಹೊಸ ದೃಷ್ಟಿಕೋನಗಳ ವಿಚಾರಧಾರೆಗಳಿಂದ ಶ್ರೀಮಂತಗೊಳಿಸಿದುದು ಮಾತ್ರವಲ್ಲ ಪ್ರೆಂಚ್ ಮತ್ತು ಇತರ ಸಮಕಾಲೀನ ಐರೋಪ್ಯ ಸಾಹಿತ್ಯಗಳ ಸಾಧನೆ. ಸಿದ್ಧಿಗಳ ಮೌಲ್ಯ ನಿರ್ಣಯವನ್ನೂ ಸಮರ್ಪಕವಾಗಿ ಮಾಡಿದರು. ಹೀಗಾಗಿ ವಿಮರ್ಶೆಯಲ್ಲಿ ಇಡೀ ವಿಶ್ವ ಸಾಹಿತ್ಯವೇ ಫ್ರೆಂಚ್ ವಿಮರ್ಶಾತತ್ವಗಳಿಗೆ ಋಣಿ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಫ್ರೆಂಚ್_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ