ಕಸೂತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೫ ನೇ ಸಾಲು:
ಮೊಟ್ಟಮೊದಲಿಗೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಇತರ ಎಲ್ಲ ಕಲೆಗಳಂತೆ ಈ ಕಲೆಯ ಉಗಮವೂ ಆಗಿರಬಹುದು. ಎರಡು ದಾರಗಳ ತುದಿಗಳನ್ನು ಹೇಗೆ ಸೇರಿಸಬಹುದು, ಬಟ್ಟೆ ಹೊಲಿಯಲು ಸೂಜಿಯನ್ನು ಹೇಗೆ ಉಪಯೋಗಿಸಬಹುದು ಇತ್ಯಾದಿ ಪ್ರಯೋಗಗಳಿಂದ ಮನುಷ್ಯನ ಕಲಾಭಿರುಚಿ ಕ್ರಮೇಣ ಹೊಮ್ಮಿರಬಹುದು.
==ಮೂಲ==
ವಿವಿಧ ಜನಾಂಗಗಳಲ್ಲಿ ಕಸೂತಿ ಕೆಲಸ ವಿವಿಧ ರೀತಿಗಳಲ್ಲಿ ಪ್ರಾರಂಭವಾದುವು. [[ಉತ್ತರ ಅಮೇರಿಕ|ಉತ್ತರ ಅಮೆರಿಕ]]ದ<ref>http://www.needlepoint.org/Archives/01-01/berlinwork.php</ref> ಇಂಡಿಯನರು ಗರಿಯಿಂದ ಕುಶಲಕಲೆಗಾರಿಕೆ ಮಾಡುತ್ತಿದ್ದರು. ಆ ಪ್ರಕಾರ ಮೂಲನಿವಾಸಿಗಳು ನಾರುಬಟ್ಟೆಗಳ ಮೇಲೆ ಬಗೆಬಗೆಯಾದ ಚಿತ್ರಗಳನ್ನು ಹೆಣೆಯುತ್ತಿದ್ದರು. ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಆಯಾ [[ಸಂಸ್ಕೃತಿ]] ಮತ್ತು ಅಗತ್ಯವಸ್ತುಗಳ ಸೌಲಭ್ಯಗಳನ್ನಾಧರಿಸಿ ಕಸೂತಿ ಕಲೆಯ ವಿವಿಧ ನಮೂನೆಗಳನ್ನು ಕಾಣಬಹುದು.
 
'''ಭಾರತದಲ್ಲಿ''' : ಭಾರತದಲ್ಲಿ ಈ ಕಲೆಗೆ ಸಂಬಂಧಿಸಿದ ದೀರ್ಘವಾದ ಇತಿಹಾಸವನ್ನೇ ಕಾಣಬಹುದು. ಮೊಹೆಂಜೊದಾರೊದಲ್ಲಿ ಕ್ರಿ.ಪೂ. 3000 ದ್ದೆನ್ನಲಾದ ಕಂಚಿನ ಸೂಜಿಗಳನ್ನು ಬಹುಶಃ ಕಸೂತಿಗಾಗಿಯೇ ಉಪಯೋಗಿಸುತ್ತಿದ್ದಿರಬಹುದು. ಸಿಂಧೂನದಿಯ ನಾಗರಿಕತೆ ಹಾಗೂ ತತ್ಕಾಲೀನ ನಾಗರಿಕತೆಗಳ ಶೋಧನೆಯಲ್ಲಿ ಸಿಕ್ಕಿರುವ ಅನೇಕ ಉಡುಪುಗಳಲ್ಲಿ ಉತ್ಕೃಷ್ಟವಾದ ಕಸೂತಿಯ ನಮೂನೆಗಳಿವೆ. ಪ್ರಾಚೀನ ಭಾರತದ ಹಳ್ಳಿಹಳ್ಳಿಯಲ್ಲೂ ಈ ಕಲೆ ಪ್ರಚಲಿತವಾಗಿತ್ತು. ವಿವಿಧ ಪ್ರಾಂತ್ಯಗಳ ಜನ ವಿವಿಧ ರೀತಿಯ ಕಸೂತಿ ಮಾದರಿಗಳಿಗೆ ಮನಸೋತಿದ್ದರು. ಚಿಕ್ಕಚಿಕ್ಕ ಕನ್ನಡಿಗಳನ್ನು ಅಳವಡಿಸಿ ತಂತಿಯಾಕಾರದ ವಸ್ತುಗಳಿಂದ ಕಸೂತಿ ಮಾಡುತ್ತಿದ್ದ ಕಚ್ ಮತ್ತು ಕಾಠಿಯಾವಾಡಗಳಲ್ಲಿ ದೊರಕಿರುವ ಮಾದರಿಗಳು ಕಣ್ಣು ಸೆಳೆಯುವಂಥವಾಗಿದ್ದುವು. ಹದಿನಾರನೆಯ ಶತಮಾನದಿಂದೀಚೆಗೆ ಪರ್ಷಿಯನ್ನರ ಪ್ರಭಾವ ಭಾರತದ ಕಲೆ ಮತ್ತು ಜನಜೀವನದ ಮೇಲೆ ಬಿದ್ದಿತು. ಕಸೂತಿ ಕಲೆಯೂ ಈ ಪ್ರಭಾವಕ್ಕೆಹೊರತಾದುದೇನಾಗಿರಲಿಲ್ಲ. ಕಚ್ ಮತ್ತು ಕಾಠಿಯಾವಾಡದ ಕಸೂತಿಗಳಲ್ಲೂ ಇದು ಎದ್ದುಕಾಣುತ್ತದೆ.
"https://kn.wikipedia.org/wiki/ಕಸೂತಿ" ಇಂದ ಪಡೆಯಲ್ಪಟ್ಟಿದೆ