ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಉಲ್ಲೇಖ ನೀಡುರುವುದು
೩೯ ನೇ ಸಾಲು:
*ವಲ್ಲಭಭಾಯ್ ಝವೇರಭಾಯ್ ಪಟೇಲ್ ಹುಟ್ಟಿದ್ದು [[ಗುಜರಾತ್|ಗುಜರಾತಿನ]] ನಡಿಯಾದ್ ಎಂಬಲ್ಲಿ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.
*ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, [[ವಿಠ್ಠಲಭಾಯ್ ಪಟೇಲ್|ವಿಠ್ಠಲಭಾಯಿ]] ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲರು ಶಾಲೆ ಸೇರಿದ್ದು ತಡವಾಗಿ. ಇವರ ಕುಟುಂಬದವರು ಅವರ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನಾಗಲೀ, ಅದಕ್ಕೆ ಬೆಂಬಲವನ್ನಾಗಲೀ ಕೊಟ್ಟಂತೆ ಕಾಣುವುದಿಲ್ಲ. ನಡಿಯಾದಿನಿಂದ, ಪೇಟ್ಲಾಡ್, ಹಾಗೂ ಮುಂದೆ ಬೋರ್ಸಾಡ್ ಎಂಬಲ್ಲಿ ಅವರ ವಿದ್ಯಾಭ್ಯಾಸ ಮುಂದುವರಿಯಿತು.
*ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ ೨೨ ವರ್ಷ ! ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಸ್ವತಃ ಪಟೇಲರಿಗೆ ಪ್ಲೀಡರ್ ಪರೀಕ್ಷೆ ಪಾಸು ಮಾಡಿ ವಕೀಲರಾಗಬೇಕೆಂದು ಅಪೇಕ್ಷೆಯಿತ್ತು. ಅದಕ್ಕಾಗಿ ಹಣ ಒಟ್ಟುಮಾಡಿ , ಮುಂದೆ ಬ್ಯಾರಿಸ್ಟರಾಗಲು [[ಇಂಗ್ಲೆಂಡ್|ಇಂಗ್ಲೆಂಡಿಗೆ]] ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ [[ವಿಠ್ಠಲಭಾಯ್ ಪಟೇಲ್|ವಿಠ್ಠಲಭಾಯಿ]] ವಕೀಲರಾಗಿ ಹೆಸರಾಗುತ್ತಿದ್ದರು.<ref>http://www.culturalindia.net/leaders/sardar-vallabhbhai-patel.html</ref>
 
==ಜೀವನ==