ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೧ ನೇ ಸಾಲು:
[[ಆಯುರ್ವೇದ]] ರೀತ್ಯಾ ಚಿಕಿತ್ಸೆ ಮಾಡಬೇಕಾದರೆ ಮತ್ತು ಪರಿಶೋಧನೆಮಾಡಬೇಕಾದರೆ ವ್ಯಾಧಿಗಳ ಲಕ್ಷಣಗಳು, ಅವುಗಳ ಆಶ್ರಯ ಸ್ಥಾನಗಳು ಮತ್ತು ರೋಗೋತ್ಪತ್ತಿಗೆ ಕಾರಣಗಳಾದ ತ್ರಿದೋಷಗಳು ([[ಭೂಮಿಯ ವಾಯುಮಂಡಲ|ವಾಯು]], ಪಿತ್ತ, ಕಫ), [[ಪಂಚಭೂತಗಳು]] (ಪೃಥ್ವಿ, ಅಪ್, ತೇಜಸ್ಸು, ವಾಯು, ಆಕಾಶ) ಷಡ್ರಸಗಳು (ಮಧುರ, ಹುಳಿ, ಉಪ್ಪು, ಖಾರ, ಕಹಿ, ಕಷಾಯ), ಸಪ್ತಧಾತುಗಳು (ರಸ, ರಕ್ತ, ಮಾಂಸ ಮೇದಸ್ಸು, ಅಸ್ಥಿ, ಮಜ್ಜ, [[ಶುಕ್ರ]]), ವೀರ್ಯಗಳು (ಶೀತ, ಉಷ್ಣ) ವಿಪಾಕ ಮತ್ತು ಪ್ರಭಾವಗಳನ್ನು ವೈದ್ಯನಾದವ ಅರಿತಿರಬೇಕು. ಈ ಪ್ರಕಾರ ವ್ಯಾಧಿಗಳನ್ನು ಚೆನ್ನಾಗಿ ತಿಳಿದುಕೊಂಡು ತಡಮಾಡದೆ ಚಿಕಿತ್ಸಿಸಬೇಕು. ಉಪೇಕ್ಷೆ ಮಾಡಿದರೆ ರೋಗ ದುಸ್ಸಾಧ್ಯ ಅಥವಾ ಅಸಾಧ್ಯವಾಗಿ ಪರಿಣಮಿಸಬಹುದು. ಶ್ರಮವಿಲ್ಲದೆ ವೃಕ್ಷವನ್ನು ಸಣ್ಣ ಸಸಿಯಾಗಿರುವಾಗಲೇ ಹೇಗೆ ಕೀಳಬಹುದೋ ಹಾಗೆ ವ್ಯಾಧಿಯ ಪ್ರಾರಂಭದಲ್ಲೇ ಚಿಕಿತ್ಸೆ ಮಾಡಬೇಕು. ಚಿಕಿತ್ಸೆ ಮಾಡಲು ರಸ, ಉಪರಸಗಳು, ಧಾತು, ಉಪಧಾತು ಮತ್ತು ವನಸ್ಪತಿಗಳ ಉಪಯೋಗಪಡಿಸಿಕೊಳ್ಳುವ ರೀತಿಗಳನ್ನೂ ಆಯುರ್ವೇದದಲ್ಲಿ ವಿವರಿಸಿದೆ. ಈ ವಿಷಯಗಳನ್ನೆಲ್ಲ ವೈದ್ಯ ತಿಳಿದಿರಬೇಕು ಮತ್ತು ಆ ದ್ರವ್ಯಗಳ ದೋಷ, ದೂಷ್ಯ ಮತ್ತು ವೈಷಮ್ಯ ಗುಣಗಳನ್ನೂ ತಿಳಿದಿರಬೇಕು.
 
ಸಮದೋಷಃ, ಸಮಾಗ್ನಿಶ್ಚ, ಸಮಧಾತು ಮಲಕ್ರಿಯಃ
೧೬ ನೇ ಸಾಲು:
 
==ಬೃಂಹಣ ಚಿಕಿತ್ಸೆಗೆ ಅರ್ಹರು==
ವ್ಯಾಧಿಯಿಂದ ಕ್ಷೀಣರಾದವರು, ತೀಕ್ಷ್ಣೌಷಧ ಸೇವನೆಯಿಂದ ಕೃಶರಾದವರು, ಅತಿ [[ಮದ್ಯದ ಗೀಳು|ಮದ್ಯಪಾನ]], ಸ್ತ್ರೀಸಂಗ ಶೋಕಗಳಿಂದ ಕೃಶರಾದವರು, ಹೆಚ್ಚು ಭಾರ ಹೊತ್ತು ಕೆಲಸ ಮಾಡುವವರು, ದೂರ ನಡೆಯುವವರು, ಉರಃಕ್ಷತದಿಂದ ಕೃಶರಾದವರು, ವಾತದೋಷಗಳಿಂದ ರೂಕ್ಷರಾಗಿರುವವರು, ದುರ್ಬಲರು, ಗರ್ಭಿಣಿಯರು, ಬಾಣಂತಿಯರು, ಬಾಲಕರು, ವೃದ್ಧರು--ಇವರುಗಳಿಗೆ ಬೃಂಹಣ ಚಿಕಿತ್ಸೆ ಮಾಡತಕ್ಕದ್ದು. ಗ್ರೀಷ್ಮ ಋತುವಿನಲ್ಲಿ ಈ ಚಿಕಿತ್ಸೆ ಮಾಡಿದರೆ ಬಹಳ ಗುಣವುಂಟಾಗುವುದು.
 
==ಲಂಘನ ಚಿಕಿತ್ಸೆಗೆ ಅರ್ಹರು==
೨೩ ನೇ ಸಾಲು:
ಬೃಂಹಣ ಚಿಕಿತ್ಸೆಗೆ ದೇವದಾರು, ತಗರ, ಚಂಗಲಕೋಷ್ಠ, ದಶಮೂಲ, ಬಲ, ಅತಿಬಲ ಮತ್ತು ವಿದಾರ್ಯಾದಿ ಔಷಧ ದ್ರವ್ಯಗಳನ್ನೂ ಮಾಂಸ, ಹಾಲು, ತುಪ್ಪ, ಮಧುರವಾದ ಜಿಡ್ಡಾದ ಪದಾರ್ಥಗಳು, ಅಭ್ಯಂಗಸ್ನಾನ, ಹೆಚ್ಚು ನಿದ್ರೆ ಬರಿಸುವ ವಿಧಾನಗಳನ್ನೂ, ಮಾನಸಿಕ ಮತ್ತು ಶಾರೀರಿಕ ಯೋಚನೆಗಳು ಇಲ್ಲದಂತೆ ಮಾಡುವ ವಿಧಾನಗಳನ್ನೂ ಮಾಡಬೇಕು. ಈ ಬೃಂಹಣ ಚಿಕಿತ್ಸೆಯಿಂದ ದೇಹಪುಷ್ಟಿ, ಶಕ್ತಿ ಉಂಟಾಗುತ್ತವೆ.
 
ತ್ರಿಕಟು, ತ್ರಿಫಲ, ಕಟುಕ ರೋಹಿಣಿ, [[ಬಜೆ]], [[ಒಂದೆಲಗ|ಬ್ರಾಹ್ಮಿ]], [[ಲವಣ]], [[ಜೀರಿಗೆ]], [[ವಾದಕ್ಕಿ]], [[ಚಿತ್ರಮೂಲ]], [[ಕೊತ್ತುಂಬರಿ|ಕೊತ್ತಂಬರಿ]], [[ಅರಿಸಿನ|ಅರಿಶಿಣ]], ಹೆಗ್ಗುಳ್ಳ, ನೆಲಗುಳ್ಳ, ಶಿಲಾಜಿತು ಎಂಬ ಔಷಧ ದ್ರವ್ಯಗಳೂ ಯವಧಾನ್ಯ, ಮಜ್ಜಿಗೆ, ಜೇನುತುಪ್ಪ ಮುಂತಾದ ಪದಾರ್ಥಗಳೂ ಲಂಘನಚಿಕಿತ್ಸೆಗೆ ಉಪಯುಕ್ತವಾದುವು. ಲಂಘನಚಿಕಿತ್ಸೆಯಿಂದ ಇಂದ್ರಿಯಗಳ ಶುದ್ಧಿ, ಮಲಮೂತ್ರಗಳ ಸರಿಯಾದ ವಿಸರ್ಜನೆ, ಶರೀರ ಲಾಘವ, [[ಹಸಿವು]] ಬಾಯಾರಿಕೆ ತೋರುವುವು. ಸರಿಯಾದ ಹೃದಯಕ್ರಿಯೆ, ಶುದ್ಧವಾಗಿ ತೇಗು ಬರುವುದು, ಉತ್ಸಾಹ ಉಂಟಾಗುವುದು, ತೂಕಡಿಕೆ ನಿವಾರಣೆಯಾಗುವುದು, ಹೃದ್ರೋಗ, ಕಾಮಾಲೆ, ಉಬ್ಬಸ, ಕಾಸ, ಗಳಗ್ರಹ ವ್ಯಾಧಿಗಳ ನಿವಾರಣೆಯೂ ಉಂಟಾಗುತ್ತವೆ. ಧಾರಣಾಶಕ್ತಿ, ಜ್ಞಾಪಕಶಕ್ತಿಗಳು ಉಂಟಾಗುತ್ತದೆ; ಮತ್ತು ಅಗ್ನಿದೀಪ್ತಿ ಉಂಟಾಗುತ್ತದೆ.
 
ಆಗಂತು ರೋಗಗಳಿಗೆ ಸದಸದ್ವಿವೇಕ, ಬುದ್ಧಿಯ ವಿರುದ್ಧ ಆಚರಣೆಯನ್ನು ತ್ಯಾಗ ಮಾಡುವುದು. ಇಂದ್ರಿಯಗಳ ವೈರಾಗ್ಯ, ದೇಶ ಕಾಲಗಳ, ಶಾಸ್ತ್ರ ಸ್ಮøತಿಗಳ, ಸಜ್ಜನರ ಆಚಾರಗಳನ್ನು ಅನುಸರಿಸುವುದು, [[ಗ್ರಹ|ಗ್ರಹಗಳ]] [[ಪೂಜೆ]], ಹಿರಿಯರು ಗುರುಗಳಲ್ಲಿ ಭಕ್ತಿ ಮತ್ತು ಪೂಜೆ--ಇವೇ ಮುಂತಾದ ರೀತಿಗಳಿಂದ ಮಾನಸಿಕ ಮತ್ತು ಆಗಂತುರೋಗಗಳನ್ನು ಚಿಕಿತ್ಸೆ ಮಾಡತಕ್ಕದ್ದು.
೮೧ ನೇ ಸಾಲು:
 
==ಶಸ್ತ್ರಕರ್ಮಾಭ್ಯಾಸ==
ಪೂರ್ವಕಾಲದಲ್ಲಿ ಶಸ್ತ್ರಕರ್ಮಾಭ್ಯಾಸವನ್ನು ಈಗಿನ ಹಾಗೆ ಮೃತದೇಹದ ಮೇಲೆ ಮಾಡುತ್ತಿರಲಿಲ್ಲ. ಫಲಗಳು, ಬಳ್ಳಿಗಳು, ಚರ್ಮಗಳ ಮೇಲೆ ಕತ್ತರಿಸುವುದು, ಸೀಳುವುದು, ಹೊಲೆಯುವುದು ಮುಂತಾದ ಕರ್ಮಗಳನ್ನು ಮಾಡಿಸಿ, ಶಿಷ್ಯನನ್ನು ಯೋಗ್ಯನನ್ನಾಗಿ ಮಾಡುತ್ತಿದ್ದರು. ಹೀಗೆ ಯೋಗ್ಯನನ್ನಾಗಿ ಮಾಡದಿರುವವನಿಗೆ ವೈದ್ಯವೃತ್ತಿಮಾಡಲು ರಾಜನ ಅಪ್ಪಣೆ ಸಿಕ್ಕುತ್ತಿರಲಿಲ್ಲ. ಸೋರೆಕಾಯಿ, ಕುಂಬಳಕಾಯಿ ಮುಂತಾದುವುಗಳಲ್ಲಿ ಕತ್ತರಿಸುವುದು, ಚರ್ಮದ ಚೀಲ, [[ಪ್ರಾಣಿ|ಪ್ರಾಣಿಗಳ]] ಮೂತ್ರಾಶಯಗಳಲ್ಲಿ ಸೀಳುವುದು, [[ರೋಮಕೂದಲು|ರೋಮದಿಂದ]] ಕೂಡಿದ [[ಚರ್ಮ|ಚರ್ಮದಲ್ಲಿ]] ಲೇಖನ (ಕೆರೆಯುವುದು), ಸತ್ತ ಪಶುಗಳ ರಕ್ತನಾಳಗಳಲ್ಲಿ ಸಿರಾಪ್ಯಧೆ (ರಕ್ತನಾಳ ಕತ್ತರಿಸುವುದು), ಸೂಕ್ಷ್ಮ ಮತ್ತು ದಪ್ಪ ಬಟ್ಟೆ ಅಥವಾ ಚರ್ಮಗಳಲ್ಲಿ ಹೊಲಿಯುವುದು-ಇವನ್ನು ಅಭ್ಯಾಸ ಮಾಡಿಸಲಾಗುತ್ತಿತ್ತು. ದೊಡ್ಡ ಮನುಷ್ಯಾಕಾರದ ಬೊಂಬೆಗಳಲ್ಲಿ ಬಂಧನಗಳನ್ನು (ಬ್ಯಾಂಡೇಜಿಂಗ್) ಮೃದುವಾದ ಮಾಂಸಖಂಡಗಳಲ್ಲಿ ಅಗ್ನಿ ಕರ್ಮ ಮತ್ತು ಕ್ಷಾರಕರ್ಮಗಳನ್ನು ಹೇಳಿಕೊಟ್ಟು ಮಾಡಿಸಲಾಗುತ್ತಿತ್ತು. ಹೀಗೆ ಶಸ್ತ್ರವೈದ್ಯ ರೋಗಗಳಲ್ಲಿ ಮಾಡಬೇಕಾದ ಸಕಲಕೆಲಸಗಳನ್ನು ಇತರ ಪದಾರ್ಥಗಳ ಮೇಲೆ ಮಾಡಿಸಿ ಯೋಗ್ಯನನ್ನಾಗಿ ಮಾಡಿ, ಅನಂತರ [[ಮನುಷ್ಯಮಾನವ|ಮನುಷ್ಯರ]] ಮೇಲೆ ಮಾಡಲು ರಾಜಾಜ್ಞೆ ದೊರಕಿಸುವ ಕ್ರಮ ರೂಢಿಯಲ್ಲಿ ಇದ್ದಿತು. ಶಾಸ್ತ್ರಜ್ಞಾನ ಮತ್ತು ಕರ್ಮನಿಪುಣತೆಗಳನ್ನು ಪಡೆದವನಿಗೆ ವೈದ್ಯನಾಗುವ ಅಧಿಕಾರವಿದ್ದು, [[ರಾಜಅರಸ|ರಾಜನಿಂದ]] ಅಂಥವನಿಗೆ ಮಾತ್ರ ಅಪ್ಪಣೆ ಸಿಕ್ಕುತ್ತಿದ್ದ ಆ ಕಾಲದಲ್ಲಿ ಶಸ್ತ್ರಕರ್ಮಾಭ್ಯಾಸ ಅತ್ಯುಚ್ಚಮಟ್ಟದಲ್ಲಿ ನಡೆಯುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.
 
==ಉಲ್ಲೇಖಗಳು==