"ಬಾಗಲಕೋಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (ಪುಟ ಸಂಯೋಜನೆ (via JWB))
ಟ್ಯಾಗ್: 2017 source edit
* ಹಸ್ತಪ್ರತಿ, ಗ್ರಂಥ ಸಂಪಾದನೆ, ಚಿತ್ರಕಲೆ ಹಾಗೂ ಸಂಶೋಧನಾತ್ಮಕ ಲೇಖನಗಳನ್ನೊಳಗೊಂಡ ಸ್ವತಂತ್ರ ಕೃತಿಗಳೊಂದಿಗೆ ಡಾ.ಹಿರೇಮಠರು ಹದಿನೈದರಷ್ಟು ಸಂಪಾದನಾ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನದಲ್ಲಿ ಹೆಸರಾದವರು ಡಾ.ಪ್ರಕಾಶ ಖಾಡೆ. ತಂದೆ ಜಿ.ಬಿ.ಖಾಡೆ ಅವರು ಹಾಕಿಕೊಟ್ಟ ಜಾನಪದ ಅಧ್ಯಯನದ ಪರಂಪರೆಯನ್ನು ಮುಂದುವರೆಸಿದ್ದಾರೆ.
* ಅಳಿದು ಹೋಗುತ್ತಿರುವ ಜನಪದ ಸಾಹಿತ್ಯ ಕಲೆ ಮತ್ತು ಸಂಸ್ಕøತಿಯನ್ನು ತಮ್ಮ ಕೃತಿಗಳ ಮೂಲಕ ಕಟ್ಟಿಕೊಡುವ, ದಾಖಲಿಸುವ ಕಾಯಕವನ್ನು ನಿರಂತರವಾಗಿಟ್ಟುಕೊಂಡು ಬಂದಿದ್ದಾರೆ.ಕೃಷ್ಣಾ ತೀರದ ಮುಳುಗಡೆ ಪ್ರದೇಶದ ಹಳ್ಳಿಗಳಲ್ಲಿ ಸುತ್ತಾಡಿ ತಂದ ಒಗಟುಗಳನ್ನು ‘ಕೃಷ್ಣಾ ತೀರದ ಜನಪದ ಒಗಟುಗಳು’ ಸಂಕಲನ ಜನಪ್ರಿಯವಾಗಿದೆ.
* ಇವರ ‘ನೆಲಮೂಲ ಸಂಸ್ಕತಿ’ ಕೃತಿಯಲ್ಲಿ ಕನ್ನಡ ಲಾವಣಿ, ತತ್ವಪದ, ರಿವಾಯತ ಪದ, ಪಾರಿಜಾತ, ಆಟ್ಯಾ ಪಾಟ್ಯಾ, [[ಮಲ್ಲಕಂಬ]], ಗರದಿ ಗಮ್ಮತ್ತು, ಓಕಳಿ, ಕಂಬಳಿ, ಮಾಟ ಮಂತ್ರ ಮೋಡಿಯಾಟ, ಜೋಕುಮಾರ, ಜೋಗರಾಣಿ ಹೀಗೆ ವೈವಿಧ್ಯ ವಿಷಯಗಳನ್ನು ಹೊತ್ತ ಜನಪದ ಲೇಖನಗಳಿವೆ. 2005 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ’ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾದರು.
* ‘ಜನಪದ ಕೋಗಿಲೆ ಗೌರಮ್ಮ ಚಲವಾದಿ”, ‘ಜಾನಪದ ಲೋಕ’ ಹಾಗು ‘ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು’ ಇವರ ಜನಪದ ಕೃತಿಗಳು. ಕನ್ನಡ ಹಸ್ತಪ್ರತಿ ಶಾಸ್ತ್ರದಲ್ಲಿ ಡಾ.ವೀರೇಶ ಬಡಿಗೇರ ಖ್ಯಾತರಾಗಿದ್ದಾರೆ.ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರವಿಭಾಗದ ಪ್ರಾಧ್ಯಾಪಕರಾಗಿ ನಾಡಿನ ಅನೇಕ ಕಡೆ ಸುತ್ತಾಡಿ ಹಸ್ತಪ್ರತಿಗಳ ಸಂಗ್ರಹ ಅಧ್ಯಯನ ಕೈಕೊಂಡು ನಾಡಿನ ಪರಂಪರೆ ಅಮೂಲ್ಯ ಆಸ್ತಿಯನ್ನು ಕಾಯ್ದುಕೊಂಡು ಬರುವದರೊಂದಿಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಿದ್ದಾರೆ.
* ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು,ಕನ್ನಡ ಹಸ್ತಪ್ರತಿಗಳ ಬಹು ಪಠ್ಯೀಯ ನೆಲೆಗಳು,ಕನ್ನಡ ಮೋಡಿಲಿಪಿ ಸಂರಚನೆ ಮತ್ತು ಸಂವರ್ಧನೆ ಇವರ ಪ್ರಮುಖ ಕೃತಿಗಳು. ಇಂದಿಗೂ ತಮ್ಮ ರಚನೆಗಳಿಂದ ಕನ್ನಡ ಸಾರಸ್ವತ ಲೋಕ ಬೆಳಗುತ್ತಿರುವ ಈ ಸಾಧಕರಿಗೆ ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.
೮,೬೦೧

edits

"https://kn.wikipedia.org/wiki/ವಿಶೇಷ:MobileDiff/802914" ಇಂದ ಪಡೆಯಲ್ಪಟ್ಟಿದೆ