ಭೂತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಚಿತ್ರ ಸೇರ್ಪಡೆ
ಟ್ಯಾಗ್: 2017 source edit
೬೦ ನೇ ಸಾಲು:
'''ಭೂತಾನ್ ರಾಜ್ಯ''' [[ದಕ್ಷಿಣ ಏಷ್ಯಾ]]ದ ದೇಶವಾಗಿದ್ದು [[ಭಾರತ]] ಮತ್ತು [[ಚೀನಿ ಜನರ ಗಣರಾಜ್ಯ]]ದ [[ಟಿಬೆಟ್]] ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. [[ಥಿಂಫು]] ದೇಶದ ರಾಜಧಾನಿಯಾಗಿದ್ದು ಅತ್ಯಂತ ದೊಡ್ಡ ನಗರವೂ ಆಗಿದೆ. ಭೂತಾನ್ ಪ್ರಪಂಚದ ಅತಿ ಬೇರ್ಪಟ್ಟ ದೇಶಗಳಲ್ಲೊಂದು. ಸಾಂಪ್ರದಾಯಿಕ ಟಿಬೆಟನ್ [[ಬೌದ್ಧ ಧರ್ಮ]] ಹಾಗೂ ಸಂಸ್ಕೃತಿಗಳನ್ನು ಕಾಪಾಡಲು ಸರ್ಕಾರ ವಿದೇಶಿ ಪ್ರಭಾವ ಮತ್ತು ಪ್ರವಾಸಿಗಳನ್ನು ದೂರವಿಟ್ಟಿದೆ. ಅಧಿಕೃತ ಭಾಷೆ '''ತ್ಸೊಂಗ್‌ಖಾ'''. ಭೂತಾನ್ ದೇಶವನ್ನು ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಉಳಿದ ಕೊನೆ ಸ್ಥಳ ಎಂದು ಪರಿಗಣಿತವಾಗಿದೆ. ಭೂತಾನ್ ದೇಶಕ್ಕೆ [[೧೯೦೭]]ರಿಂದ ರಾಜ ಪ್ರಭುತ್ವವಿದೆ. ಈಗಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಸಾಂವಿಧಾನಿಕ ಸರಕಾರದ ಕಡೆ ವಾಲುತ್ತಿದ್ದಾರೆ. ಭೂತಾನ್ [[ಏಷ್ಯಾ]] ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ.
 
ಭೂತಾನ ಪೂರ್ವ ಹಿಮಾಲಯ[[ಹಿಮಾಲ]]ಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ಸ್ವತಂತ್ರ ರಾಜ್ಯ. ಉ.ಅ. 26° 30 - 28°30 ಪೂ.ರೇ. 8°45'-92°25' ನಡುವೆ ಹಬ್ಬಿದೆ.
 
ಉತ್ತರದಲ್ಲಿ ಟಿಬೆಟ್, ದಕ್ಷಿಣದಲ್ಲಿ ಭಾರತದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಲ]] ರಾಜ್ಯದ ಜಲಪೈಗುರಿ ಜಿಲ್ಲೆ ಹಾಗೂ [[ಅಸ್ಸಾಂ|ಅಸ್ಸಾಮಿನ]] ಗೋಲಾಪಾರಾ, ಕಾಮರೂಪ ಮತ್ತು ದರಾಂಗ್ ಜಿಲ್ಲೆಗಳು, ಪಶ್ಚಿಮದಲ್ಲಿ ಟಿಬೆಟ್, [[ಸಿಕ್ಕಿಂ|ಸಿಕ್ಕಿಮ್]], ನೈಋತ್ಯದಲ್ಲಿ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆ ಮತ್ತು ಪೂರ್ವದಲ್ಲಿ [[ಅರುಣಾಚಲ ಪ್ರದೇಶದಪ್ರದೇಶ]]ದ ಪಶ್ಚಿಮ ಕಾಮೆಂಗ್ ಜಿಲ್ಲೆ ಸುತ್ತುವರಿದಿದೆ.
 
ವಿಸ್ತೀರ್ಣ 46,600 ಚಕಿಮೀ. ಜನಸಂಖ್ಯೆ ಸುಮಾರು 1,247,000 (1983). ರಾಜಧಾನಿ ಥಿಂಪೂ.
೮೩ ನೇ ಸಾಲು:
 
== ಮೇಲ್ಮೈ ಲಕ್ಷಣ ==
[[File:Cloud-hidden, whereabouts unknown (Paro, Bhutan).jpg|thumb|250px|The [[dzong architecture|Dzong]] in the [[Paro valley]], built in 1646.]]
[[File:Tashigang Dzong 111120.jpg|thumb|250px|[[Trashigang Dzong]], built in 1659.]]
 
ಭೂತಾನವನ್ನು ಉನ್ನತ ಹಿಮಾಲಯ ಪರ್ವತ ಶ್ರೇಣಿಗಳು, ಒಳ ಹಿಮಾಲಯ ಪ್ರದೇಶ ಮತ್ತು ಡ್ಯೂಯರ್ಸ್ ಬಯಲು ಸಿಮೆ ಎಂಬುದಾಗಿ ಮೂರು ಭೌಗೋಳಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಉತ್ತರ ಭಾಗ ಉನ್ನತ ಹಿಮಾಲಯ ಪರ್ವತ ಶ್ರೇಣಿಗಳಿಂದ ಕೂಡಿದೆ. ಇಲ್ಲಿಯ ಹಿಮಾಚ್ಛಾದಿಯ ಶಿಖರಗಳು 7300 ಮೀಟರುಗಳಿಗಿಂತಲೂ ಎತ್ತರವಾಗಿವೆ. ಕಣಿವೆಗಳು 3650 ಮೀ ಗಳಿಂದ 5475 ಮಿ ಗಳಷ್ಟು ಎತ್ತರದಲ್ಲಿದೆ. ಟಿಬೆಟ್ ಪ್ರಸ್ಥಭೂಮಿ ಅಂಚಿನ ಕುಲ್ಹಗಾಂಗ್ರಿ ಮತ್ತು ಜೋಮೋಲ್ಹಾರಿ ಪರ್ವತಗಳು ಭೂತಾನವನ್ನು ಟಿಬೆಟ್ಟಿನಿಂದ ಪ್ರತ್ಯೇಕಿಸಿವೆ. ಈ ಪರ್ವತಗಳ ಇಳಿಜಾರಿನಲ್ಲಿ ಹುಲ್ಲುಗಾವಲುಗಳಿವೆ. ಇವು ಬೇಸಗೆಯಲ್ಲಿ ಯಾಕ್, ದನಕರುಗಳು ಮತ್ತು ಕುರಿಗಳ ಮೇವಿನ ಪ್ರದೇಶಗಳು, ಈ ಭಾಗದಲ್ಲಿ ಜನವಸತಿ ಕಡಿಮೆ. ಒಳ ಹಿಮಾಲಯ ಪ್ರದೇಶವೇ ಭೂತಾನದ ಮಧ್ಯಭಾಗ. ಇಲ್ಲಿಯ ಪರ್ವತಗಳು ಭೂತಾನದ ಪ್ರಮುಖ ನದಿ ಹಾಗೂ ಕಣಿವೆಗಳನ್ನು ಪ್ರತ್ಯೇಕಿಸುವ ಜಲವಿಭಾಜಕಗಳು. ಬ್ಲಾಕ್ ಮೌಂಟೆನ್‍ರೇಜ್ ಸಂಕೊಷ್ ಮತ್ತು ಮಾನಸ್ ನದಿಗಳನ್ನು ಪ್ರತ್ಯೇಕಿಸುತ್ತದೆ. ಒಳ ಹಿಮಾಲಯ ಪ್ರದೇಶದಲ್ಲಿ ಅನೇಕ ಫಲವತ್ತಾದ ಕಣಿವೆಗಳಿದ್ದು ಅವುಗಳಲ್ಲಿ ಪ್ರಮುಖವಾದವು ಥಿಂಪು, ಪಾರೋ, ಪುನಾಖಾ ಮತ್ತು ವಾಂಗ್‍ಡಿಪೋಡ್ರಾಂಗ್. ಇಲ್ಲಿ ವರ್ಷಕ್ಕೆ ಸರಾಸರಿ 106 ರಿಂದ 121 ಸೆಂಮೀ ಮಳೆ ಆಗುತ್ತದೆ. ಬತ್ತ ಮುಖ್ಯ ಬೆಳೆ. ಜನಸಾಂದ್ರತೆ ಹೆಚ್ಚು. ಒಳ ಹಿಮಾಲಯ ಪ್ರದೇಶದ ದಕ್ಷಿಣಕ್ಕೆ ಇಕ್ಕಟ್ಟಾದ ಡ್ಯುಯರ್ಸ್ ಬಯಲಿದೆ. ಇದು ಸರಾಸರಿ 12.88-16 ಮೀ ಅಗಲವಿದ್ದು ಭೂತಾನಿನ ದಕ್ಷಿಣಗಡಿಯುದ್ದಕ್ಕೂ ಹಬ್ಬಿದೆ. ಇಲ್ಲಿ ಉಷ್ಣವಲಯದ ಮಾನ್‍ಸೂನ್ ಹವೆ ಇದ್ದು ವರ್ಷಕ್ಕೆ ಸರಾಸರಿ 506-762 ಸೆಂಮೀ ಮಳೆ ಆಗುತ್ತದೆ. ಇಲ್ಲಿ ದಟ್ಟವಾದ ಕಾಡುಗಳಿದ್ದು ಆನೆ, ಹುಲಿ, ಜಿಂಕೆ ಮೊದಲಾದ ಕಾಡುಪ್ರಾಣಿಗಳಿವೆ. ಇಲ್ಲಿಯ ವಾತಾವರಣದಿಂದಾಗಿ ಜನವಸತಿ ಹೆಚ್ಚಿಲ್ಲ. ಡ್ಯೂಯರ್ಸ್‍ನ ಉತ್ತರಭಾಗದಲ್ಲಿ ಕಡಿದಾದ ಇಳಿಜಾರು ಪ್ರದೇಶವಿದೆ. ಪರ್ವತಗಳ ತಪ್ಪಲುಗಳಲ್ಲಿ ಕೆಲವು ಸಣ್ಣ ಹಳ್ಳಿಗಳಿವೆ. ಇದರ ದಕ್ಷಿಣಭಾಗ ಸವನ್ನಾ ಹುಲ್ಲುಗಾವಲು ಮತ್ತು ಬಿದಿರು ಕಾಡುಗಳಿಂದ ಕೂಡಿದ್ದು ಕೆಲವು ಭಾಗಗಳಲ್ಲಿ ಕಾಡುಕಡಿದು ಬತ್ತದ ವ್ಯವಸಾಯ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕೆಲವು ಪಟ್ಟಣ ಮತ್ತು ವ್ಯಾಪಾರ ಕೇಂದ್ರಗಳಿದ್ದು ಜನಸಾಂದ್ರತೆ ಹೆಚ್ಚಿದೆ. ಮಧ್ಯ ಭೂತಾನಿನಿಂದ ಭಾರತಕ್ಕೆ ಹೋಗುವ ನದಿ, ಕಣಿವೆಗಳ ಮಾರ್ಗಗಳು ಈ ಕೇಂದ್ರಗಳ ಮೂಲಕ ಹಾದು ಹೋಗುತ್ತದೆ.
 
<gallery mode=packed caption="Landscape of Bhutan">
File:082 - Gangkar Puensum - 7,570m (Dochula pass) (4677022812).jpg|[[Gangkar Puensum]], the highest mountain in Bhutan
File:Himalayan Landscape.jpg|Sub-alpine Himalayan landscape
File:Himalayan peak from Bumthang.jpg|A Himalayan peak from [[Bumthang (town)|Bumthang]]
File:Jigme Dorji National Park, Bhutan.JPG|[[Jigme Dorji National Park]]
File:HaaValley.jpg|The [[Haa District|Haa Valley]] in Western Bhutan
</gallery>
== ವಾಯುಗುಣ ==
ಉನ್ನತ ಹಿಮಾಲಯ ಪ್ರದೇಶಗಳಲ್ಲಿ ಸಾಧಾರಣವಾಗಿ ಒಣಹವೆ ಇರುತ್ತದೆ. ಮಳೆ ಕಡಿಮೆ. ಮಧ್ಯ ಭೂತಾನಿನಲ್ಲಿ ಪುನಾಖಾ, ವಾಂಗ್‍ಡಿಫೋಡ್ರಾಂಗ್ ಮುಂತಾದ ಕೆಳಗಿನ ಭಾಗಗಳಲ್ಲಿ ಸಾಧಾರಣ ಉಷ್ಣತೆಯಿದ್ದು ಎತ್ತರಕ್ಕೆ ಹೋದಂತೆಲ್ಲಾ ಚಳಿ ಅತ್ಯಂತ ಹೆಚ್ಚಿರುತ್ತದೆ. ಡ್ಯೂಯರ್ಸ್ ಬಯಲಿನಲ್ಲಿ ಬಿಸಿ ಹೆಚ್ಚಾಗಿದ್ದು ತೇವಾಂಶವೂ ಹೆಚ್ಚಿರುತ್ತದೆ. ದೇಶದ ಸರಾಸರಿ ಉಷ್ಣತೆ ಜನವರಿಯಲ್ಲಿ 44ಲಿಅ. ಜುಲೈಯಲ್ಲಿ 17ಲಿಅ. ದೇಶದ ಒಟ್ಟು ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 150-300 ಸೆಂಮೀ. ಉನ್ನತ ಹಿಮಾಲಯ ಪ್ರದೇಶ ಹಿವಾಚ್ಛಾದಿತವಾಗಿರುತ್ತದೆ.
"https://kn.wikipedia.org/wiki/ಭೂತಾನ್" ಇಂದ ಪಡೆಯಲ್ಪಟ್ಟಿದೆ