ಪಾರ್ಸಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚು ಮಾಹಿತಿ ಸೇರ್ಪಡೆ ಮತ್ತು ಪರಿವಿಡಿ ತಯಾರಿ
೧ ನೇ ಸಾಲು:
ಪಾರ್ಸಿ ಭಾಷೆ - ಪ್ರಾಚೀನ ಪರ್ಷಿಯದ ಈಗಿನ ಇರಾನಿನ ಒಂದು ಮುಖ್ಯ ಭಾಷೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ ಇರಾನಿಯನ್ ಶಾಖೆಗೆ ಇದು ಸೇರುತ್ತದೆ.
ಪಾರ್ಸಿ ಭಾಷೆ -
ಪ್ರಾಚೀನ ಪರ್ಷಿಯದ ಈಗಿನ ಇರಾನಿನ ಒಂದು ಮುಖ್ಯ ಭಾಷೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ ಇರಾನಿಯನ್ ಶಾಖೆಗೆ ಇದು ಸೇರುತ್ತದೆ.
 
== ಇತಿಹಾಸ ==
ಪ್ರಾಚೀನ ಪರ್ಷಿಯದಲ್ಲಿದ್ದು ಆ ಕಾಲದ ಅಧಿಕೃತ ಭಾಷೆಗಳಲ್ಲೊಂದಾಗಿತ್ತು. ಅಂದಿನ ದೊರೆಗಳು ತಮ್ಮ ಶಾಸನಗಳಲ್ಲಿದ್ದನ್ನು ಉಪಯೋಗಿಸಿದ್ದಾರೆ. ಅಕಮೆನಿಡೇ ವಂಶದ ಶಾಸನಗಳಿಂದಲೇ ಇದರ ಸ್ವರೂಪ ನಮಗೆ ತಿಳಿದುಬರುತ್ತದೆ. ಹಾಗೆ ನೋಡಿದರೆ ಪಹ್ಲವಿ ಇದರ ಒಂದು ಮಾರ್ಪಟ್ಟ ರೂಪ. ಅಲೆಕ್ಸಾಂಡರ್ ಮಹಾಶಯನ ಆಡಳಿತದಲ್ಲಿ ಸ್ಥಗಿತಗೊಂಡ ಈ ಭಾಷೆ ಮಧ್ಯಕಾಲೀನ ಸಸೇನಿಯನ್ ದೊರೆಗಳ ಕಾಲದಲ್ಲಿ ಪುನಃ ಅಧಿಕೃತ ಭಾಷೆಯಾಗಿ ಮುಂದುವರೆಯಿತು.
ಆಧುನಿಕ ಪಾರಸಿ ಈಗಿನ ಇರಾನಿ ಭಾಷೆಗಳಲ್ಲೆಲ್ಲ ಅತ್ಯಂತ ಪ್ರಮುಖವಾದ್ದು. ಈಗ ಇದು ತನ್ನ ಹಳೆಯ ಕುರುಹುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬೇರಾವು ಇಂಡೋ-ಯೂರೋಪಿಯನ್ ಭಾಷೆ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು ಮುಟ್ಟಿ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. ಇದರಲ್ಲಿ ಅರಬ್ಬಿ ಪದಗಳು ಈಗ ಹೇರಳವಾಗಿವೆ. ಲಿಪಿ ಅರಬ್ಬಿಯದಾಗಿದ್ದು ಕೊಂಚ ಮಟ್ಟಿಗೆ ಉರ್ದುವನ್ನು ಹೋಲುತ್ತದೆ.
 
== ಪ್ರಭಾವ ==
ಅರಬ್ಬಿ, ತುರ್ಕಿ ಹಾಗೂ ಉರ್ದು ಭಾಷೆಗಳ ಮೇಲೆ ಪಾರಸಿ ಹೆಚ್ಚಿನ ಪ್ರಭಾವ ಬೀರಿದೆ. ಆಫ್ಘಾನಿಸ್ತಾನದಲ್ಲಿದು ರಾಷ್ಟ್ರೀಯ ಸಾಹಿತ್ಯಕ ಭಾಷೆ.
 
== ಸಾಹಿತ್ಯ ರಚನೆ ==
ರೂದಖೀ ಮತ್ತು ದಖೀಖಿ (ಕ್ರಿ. ಶ. ಹತ್ತನೆಯ ಶತಮಾನ)-ಇವರು ಪುರಾತನ ಪ್ರೌಢ ಪಾರಸಿ ಸಾಹಿತ್ಯದ ಪ್ರಸಿದ್ಧ ಕವಿಗಳು. ಘಜ್ನಿ ಮಹಮೂದನ ಆಸ್ಥಾನದಲ್ಲಿದ್ದ ಪಿರ್ದೂಸಿ ಕವಿಯ ಷಹಾನಾಮ ಈ ಭಾಷೆಯಲ್ಲಿಯ ಮಹಾಕಾವ್ಯ. ಇರಾನಿನಲ್ಲೇ ಅಲ್ಲದೆ ಇತರ ದೇಶಗಳಲ್ಲೂ ಪಾರಸಿ ಸಾಹಿತ್ಯ ಬೆಳೆದುಬಂತು. ಭಾರತ ಪಾರಸಿ ಸಾಹಿತ್ಯಕ್ಕೆ ಎರಡನೆಯ ತವರು.
(ಕೆ.ಎನ್.ಎಸ್.)
 
"https://kn.wikipedia.org/wiki/ಪಾರ್ಸಿ_ಭಾಷೆ" ಇಂದ ಪಡೆಯಲ್ಪಟ್ಟಿದೆ