ರಸ(ಕಾವ್ಯಮೀಮಾಂಸೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೭ ನೇ ಸಾಲು:
ರಸಪ್ರತೀತಿ ಸಹೃದಯನಿಗೆ ಹೇಗಾಗುತ್ತದೆಂಬುದನ್ನು ಲೊಲ್ಲಟ, ಶಂಕುಕ, ಭಟ್ಟನಾಯಕ ಮತ್ತು ಅಭಿನವಗುಪ್ತರು ಕೂಲಂಕುಷವಾಗಿ ವಿವೇಚಿಸಿದ್ದಾರೆ. ಸ್ಥಾಯಿಭಾವದ ಉಲ್ಲೇಖ ಮೇಲಿನ ಸೂತ್ರದಲ್ಲಿ ಏಕೆ ಇಲ್ಲ ಎಂಬುದರ ಬಗೆಗೂ ವಿಶದವಾದ ಚರ್ಚೆ ನಡೆದಿದೆ. ಲೊಲ್ಲಟನ ಪ್ರಕಾರ ಭರತನ ಸೂತ್ರದಲ್ಲಿನ `ಸಂಯೋಗ ಎಂಬ ಶಬ್ದದ ಅರ್ಥ ಮಾಡುವಾಗ ಸ್ಥಾಯಿಗೆ ವಿಭಾವಗಳೊಂದಿಗೆ ``ಜನ್ಯಜನಕಭಾವ, ಅನುಭಾವಗಳೊಂದಿಗೆ ``ಗಮ್ಯಗಮಕಭಾವ, ಸಂಚಾರಿಭಾವಗಳೊಂದಿಗೆ ``ಪೋಷ್ಯಪೋಷಕಭಾವ ಗಳಿರುತ್ತವೆ. `ನಿಷ್ಪತ್ತಿ ಎಂದರೆ `ಉತ್ಪತ್ತಿ ಎಂದು ಅರ್ಥೈಸಬೇಕು. ಶಂಕುಕನ ಪ್ರಕಾರ ರಸಕ್ಕೂ ವಿಭಾವ, ಅನುಭಾವ, ಸಂಚಾರಿ ಭಾವಗಳಿಗೂ `ಗಮ್ಯಗಮಕ ಭಾವ. ನಿಷ್ಪತ್ತಿ ಎಂಬುದಕ್ಕೆ `ಅನುಮಿತಿ' ಎಂದು ಅರ್ಥೈಸಬೇಕು. ಭಟ್ಟನಾಯಕನು ವಿಭಾವಾದಿಗಳು ಸಾಧಾರಣೀಕೃತವಾಗಿ, ಸಾಮಾಜಿಕನು ರಸಾಸವಾದ ಪಡೆಯುತ್ತಾನೆ ಎಂದು ಪ್ರತಿಪಾದಿಸಿದ. ಅಭಿನವಗುಪ್ತ ಈ ಅಭಿಪ್ರಾಯಗಳನ್ನೆಲ್ಲ ಪರಿಶೀಲಿಸಿ, ಪರಾಮರ್ಶಿಸಿ ರಸಾನುಭವದ ಬಗೆಗೆ ಕೊನೆಯ ಮಾತನ್ನು ಹೇಳಿದ. ರಸವಾದುದು ಜ್ಞಾಪ್ಯ. ಅಂದರೆ `ಉತ್ಪತ್ತಿ ಅಥವಾ `ಅನುಮಾನ ದಿಂದ ತಿಳಿಸಿಕೊಡುವುದಾಗಿದೆ. `ಅಭಿವ್ಯಕ್ತ ವಾಗುವಂಥದು. ಸಾಮಾಜಿಕರ ಮನಸ್ಸಿನಲ್ಲಿ ರತ್ಯಾದಿಸ್ಥಾಯಿಭಾವಗಳು ಸುಪ್ತಾವಸ್ಥೆಯಲ್ಲಿರುತ್ತವೆ. ಇವು ವಿಭಾವಾದಿಗಳಿಂದ ಎಚ್ಚರಗೊಂಡು ರಸಾವಸ್ಥೆ ಪಡೆಯುತ್ತವೆ. ಇದೇ [[ರಸಾನುಭವ]].
 
ಹೀಗೆ `ರಸ ಪರಿಕಲ್ಪನೆ ಭರತನಿಂದ ನಿರೂಪಿತನಾಗಿ, ಮುಂದೆ [[ಭಾರತೀಯ ಕಾವ್ಯಮೀಮಾಂಸೆ]]ಯ ಇತಿಹಾಸ ರೂಪಕಂಡಂತೆ ವಿಕಾಸ ಹೊಂದುತ್ತ, ಕಾವ್ಯದ ಪರಮ ಪ್ರಯೋಜನ ರಸಾನುಭವ ಎಂಬ ಆತ್ಯಂತಿಕ ನಿಲುವನ್ನು ತಲುಪಿತು. ರಸಸಿದ್ಧಾಂತವು ಜಾಗತಿಕ ಕಾವ್ಯ ಮಿಮಾಂಸೆಗೆ ಭಾರತೀಯ ಕಾವ್ಯ ಮಿಮಾಂಸೆ ನೀಡಿದ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಕೊಡುಗೆಯಾಗಿದೆ.
 
 
"https://kn.wikipedia.org/wiki/ರಸ(ಕಾವ್ಯಮೀಮಾಂಸೆ)" ಇಂದ ಪಡೆಯಲ್ಪಟ್ಟಿದೆ