ರಷ್ಯಾದ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕಿಸೋರ್ಸ ನಿಂದ ಮಾಹಿತಿ ಸೇರ್ಪಡೆ
ಚುNo edit summary
೧೯ ನೇ ಸಾಲು:
'''ರಷ್ಯಾದ ಭಾಷೆ''' ({{audio|Ru-russkiy jizyk.ogg|ಉಚ್ಛಾರ}} : {{lang|ru|русский язык}} ''ರುಸ್ಕೀ ಯಜ್ಯಿಕ್'') [[ಯುರೋಪ್]] ಖಂಡದಲ್ಲಿ ಅತ್ಯಂತ ಹೆಚ್ಚು ಜನ ಮಾತನಾಡುವ [[ಇಂಡೊ-ಯುರೋಪಿಯನ್ ಭಾಷೆಗಳು|ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ]] ಸೇರಿರುವ ಒಂದು [[ಸ್ಲಾವಿಕ್ ಭಾಷೆಗಳು|ಸ್ಲಾವಿಕ್ ಭಾಷೆ]].
 
ಇಂಡೋಯೂರೋಪಿಯನ್ ಭಾಷಾ ಪರಿವಾರದ ಸ್ಲಾವನಿಕ್ ವರ್ಗಕ್ಕೆ ಸೇರಿದ ಪೂರ್ವ ಸ್ಲಾವನಿಕ್ ಗುಂಪಿನ ಒಂದು ಪ್ರಮುಖ ಭಾಷೆ. 1979 ರ ಜನಗಣತಿಯ ಪ್ರಕಾರ ಇದು ಸು. 153.5 ಮಿಲಿಯನ್ ಜನರ ಮಾತೃಭಾಷೆ. ಇದು ಹಿಂದಿನ ಸೋವಿಯತ್ ಒಕ್ಕೂಟದ ಅಧಿಕೃತ ಭಾಷೆಯಾಗಿತ್ತು.
ರಷ್ಯನ್ ಭಾಷೆ -
ಇಂಡೋಯೂರೋಪಿಯನ್ ಭಾಷಾ ಪರಿವಾರದ ಸ್ಲಾವನಿಕ್ ವರ್ಗಕ್ಕೆ ಸೇರಿದ ಪೂರ್ವ ಸ್ಲಾವನಿಕ್ ಗುಂಪಿನ ಒಂದು ಪ್ರಮುಖ ಭಾಷೆ. 1979 ರ ಜನಗಣತಿಯ ಪ್ರಕಾರ ಇದು ಸು. 153.5 ಮಿಲಿಯನ್ ಜನರ ಮಾತೃಭಾಷೆ. ಇದು ಹಿಂದಿನ ಸೋವಿಯತ್ ಒಕ್ಕೂಟದ ಅಧಿಕೃತ ಭಾಷೆಯಾಗಿತ್ತು.
ರಷ್ಯನ್ ಭಾಷೆ ಇತರ ಸ್ಲಾವಿಕ್ ಭಾಷೆಗಳೊಂದಿಗೆ ಪರಸ್ಪರ ಸಂಬಂಧಹೊಂದಿದೆ. ಮುಖ್ಯವಾಗಿ ಪೋಲಿಷ್, ಜೆóಕ್, ಸ್ಲಾವಿಕ್, ಸ್ಲಾವೆನಿಯನ್, ಸರ್‍ಬೊ-ಕ್ರೋಷಿಯನ್, ಮ್ಯಾಸಿಡೋನಿಯನ್ ಹಾಗೂ ಬಲ್ಗೇರಿಯನ್ ಭಾಷೆಗಳೊಂದಿಗೆ ಆಂತರಿಕ ಸಂಬಂಧವನ್ನು ಹೊಂದಿದೆ.
Line ೨೬ ⟶ ೨೫:
ಮೂರು ಪ್ರಮುಖ ಉಪಭಾಷೆಗಳಿದ್ದು ಅವು ಉತ್ತರ, ಕೇಂದ್ರಿಯ ಹಾಗೂ ದಕ್ಷಿಣ ಉಪಭಾಷೆಗಳು. ಆಧುನಿಕ ಸಾಹಿತ್ಯದ ರಷ್ಯನ್ ಭಾಷಾರೂಪ ಕೇಂದ್ರಿಯ ಉಪಭಾಷಾ ಮತ್ತು ಮಾಸ್ಕೋ ಸುತ್ತಮುತ್ತಲಿನ ಆಡುಭಾಷಾ ರೂಪವನ್ನು ಹೆಚ್ಚಾಗಿ ಆಧರಿಸಿದೆ. ವೋಲ್ಗಾ ಬುಡಕಟ್ಟಿನವರು ಮಾತನಾಡುವ ಪ್ರಾಚೀನ ಬಲ್ಗೇರಿಯನ್ ಭಾಷೆ, ಚರ್ಚ್ ಹಾಗೂ ಸಾಹಿತ್ಯಕ ರಷ್ಯನ್ ಭಾಷೆ, ಹದಿನೇಳನೆಯ ಶತಮಾನದವರೆಗೂ ಬದಲಾಗದೆ ಹಾಗೆಯೇ ಉಳಿಯಿತು. ಇದರಿಂದ ರಷ್ಯನ್ ಭಾಷೆಯ ಆಕೃತಿಮಾತ್ಮಕ ಮತ್ತು ವಾಕ್ಯಾತ್ಮಕ ಬೆಳವಣಿಗೆಯನ್ನು ಐತಿಹಾಸಿಕವಾಗಿ ವಿವರಿಸುವುದು ಕಷ್ಟ.
 
ರಷ್ಯನ್ ವರ್ಣಮಾಲೆಯಲ್ಲಿ 33 ಅಕ್ಷರಗಳಿವೆ. ಅವುಗಳದು ಸಿರಿಲಿಕ್ ಅಕ್ಷರ ರೂಪ. ಈ ಭಾಷೆಯ ಬರವಣಿಗೆ ಹೆಚ್ಚಾಗಿ ಗ್ರೀಕ್ ಮತ್ತು ರೋಮನ್ ಭಾಷೆಯ ವರ್ಣಗಳನ್ನೇ ಅಧರಿಸಿದೆ. ಒಂದು ವರ್ಣಕ್ಕೆ ಒಂದು ಧ್ವನಿ ಎಂಬ ಸೂತ್ರ ಇದರದು. ವರ್ಣಗಳಾದ b,bi ಮತ್ತು b ಪದದ ಅಥವಾ ಅಕ್ಷರದ ಆದಿಯಲ್ಲಿ ಬರುವುದಿಲ್ಲ. ಆದರೆ ಈ ವರ್ಣಗಳು ಸಹಿ, ಶೀರ್ಷಿಕೆ ಹಾಗೂ ವಿಶೇಷ ಬಳಕೆಯಲ್ಲಿ ಪ್ರಾಧಾನ್ಯವನ್ನು ಪಡೆದಿವೆ. ಸಾಮಾನ್ಯವಾಗಿ ಹೆಚ್ಚಿನ ವ್ಯಂಜನಗಳು ಉಚ್ಚಾರಣೆಯಲ್ಲಿ ಎರಡು ಭಿನ್ನ ಮೌಲ್ಯವನ್ನು ಪಡೆದಿವೆ. ಮೊದಲನೆಯದು ಸಾಮಾನ್ಯ ಕಠಿಣ ಅಥವಾ ತಾಲೌವ್ಯೇತರ ಧ್ವನಿ ಮೌಲ್ಯ ಮತ್ತು ಎರಡನೆಯದು ಮೃದು ಅಥವಾ ತಾಲವ್ಯೀಕರಣ ಧ್ವನಿ ಮೌಲ್ಯ. ಈ ಭಾಷೆಯ ಕಾಗುಣಿತ ಇಂಗ್ಲಿಷ್ ಕಾಗುಣಿತದಂತಿದ್ದು, ಚಾರಿತ್ರಿಕ್ ಸೂತ್ರಗಳು ಒಟ್ಟಾಗಿ ಧ್ವನ್ಯಾತ್ಮಕತೆಯ ವಿಶೇಷ ಗುಣವಾಗಿದೆ. ಆದರೂ ಅವು ಹೆಚ್ಚು ಕಾಲ ಹಾಗೆಯೇ ಉಚ್ಚಾರಣೆಯಲ್ಲಿ ಉಳಿಯದಿದ್ದರೂ ಕೆಲವು ಪದಗಳು ಪ್ರಾಚೀನ ಕಾಗುಣಿತವನ್ನೇ ಇಂದಿಗೂ ಬಳಕೆಯಲ್ಲಿ ಉಳಿಸಿಕೊಂಡಿವೆ.
 
Line ೩೮ ⟶ ೩೭:
ರಷ್ಯನ್ ಭಾಷೆಯ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ಮುಖ್ಯ ಅಂಶಗಳೆಂದರೆ ಅನ್ವಯ ಮತ್ತು ಪದಕ್ರಮ. ವಾಕ್ಯದಲ್ಲಿನ ಪದಕ್ರಮದಲ್ಲಿ ಯಾವುದೇ ನಿರ್ಭಂಧವೂ ಇಲ್ಲ. ಇಂಗ್ಲಿಷ್ ಪದಕ್ರಮದಂತೆಯೇ ಇದರ ಪದಕ್ರಮವೂ ಇದೆ. ರಷ್ಯನ್ ಆಡು ಭಾಷೆ ಮತ್ತು ಬರೆಹಭಾಷೆಯ ಮೇಲೆ ಚರ್ಚ್ ಸವನಿಕ್ ಪ್ರಭಾವ ಗಾಢವಾಗಿದೆ. ಅಲ್ಲದೆ ಪ್ರಾದೇಶಿಕ ಉಪಭಾಷಾ ಸ್ವೀಕಾರವನ್ನೂ ಗಮನಿಸಿದ್ದೆ ಆದರೆ ಇಂಗ್ಲಿಷ್ ಪ್ರಭಾವ ಹೆಚ್ಚು. ಅಲ್ಲದೆ ಇತರ ಭಾಷೆಗಳಾದ ಫ್ರೆಂಚ್, ಜರ್ಮನ್, ಫಿನ್ನಿಷ್, ಪೋಲಿಷ್, ಮತ್ತು ಡಚ್ ಭಾಷಾರೂಪಗಳು ಸಾಕಷ್ಟು ಪ್ರಮಾಣದಲ್ಲಿ ಮಿಳಿತಗೊಂಡಿವೆ. ಹಾಗಾಗಿ ರಷ್ಯನ್ ಸಾಹಿತ್ಯದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಹೆಚ್ಚಾಗಿ ಗುರುತಿಸಬಹುದು. ರಷ್ಯನ್ ಭಾಷೆ ಇಂದಿನ ಆಗುಹೋಗುಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ತನ್ನ ಕಟ್ಟುನಿಟ್ಟಾದ ವ್ಯಾಕರಣ ನಿರ್ಬಂಧವನ್ನು, ಅಪರೂಪದ ವರ್ಣವ್ಯವಸ್ಥೆಯನ್ನು ಸರಳ ಹಾಗೂ ಸೂಕ್ತರೀತಿಯಲ್ಲಿ ಬದಲಾಯಿಸಿಕೊಂಡ ಆಧುನಿಕ ಭಾಷೆ. ಈ ಭಾಷೆಯ ಸಾಹಿತ್ಯ ಪ್ರಪಂಚ ಸಾಹಿತ್ಯದಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ.
==ಇದನ್ನೂ ನೋಡಿ==
(ಆರ್.ಸಿ.ಎಸ್.)
* [[ರಷ್ಯನ್ ಭಾಷೆ - ಸಾಹಿತ್ಯ]]
 
 
೫೧ ನೇ ಸಾಲು:
[[ವರ್ಗ:ರಷ್ಯ]]
[[ವರ್ಗ:ಭಾಷೆಗಳು]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಷ್ಯನ್ ಭಾಷೆ|ರಷ್ಯನ್ ಭಾಷೆ}}
"https://kn.wikipedia.org/wiki/ರಷ್ಯಾದ_ಭಾಷೆ" ಇಂದ ಪಡೆಯಲ್ಪಟ್ಟಿದೆ