ಅಂಡಾಶ್ಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
→‎ಸಂಯೋಜನೆ: clean up and re-categorisation per CFD using AWB
೬ ನೇ ಸಾಲು:
ಅನೇಕ ತರದ ಅಂಡಾಶ್ಮದಂಥ ಕಾಯಗಳು ಬೇರೆಬೇರೆ ತೆರನಾದ [[ಖನಿಜ]]ಗಳನ್ನು ಒಳಗೊಂಡಿರುವುವೆಂದೂ ಅವುಗಳು ಬೇರೆಬೇರೆ ರೀತಿಯಲ್ಲಿ ರಚಿತವಾಗಿವೆಯೆಂದೂ ವರದಿಯಾಗಿದೆ. ಕ್ಯಾಲ್ಸೈಟಿನ ಅಂಡಾಶ್ಮಗಳೇ ಸರ್ವಸಾಧಾರಣವಾಗಿರುವುವು. ಇವು [[ಸಾಗರ]] ನಿಕ್ಷೇಪಗಳಲ್ಲಿ ಸಿಕ್ಕುತ್ತವೆ. ಕೆಲವು ಜಾಗಗಳಲ್ಲಂತೂ ಅಲ್ಲಿನ ಸುಣ್ಣಕಲ್ಲುಗಳ ತುಂಬ ಇವೇ ತುಂಬಿಕೊಂಡಿವೆ. ಇತರ ವಸ್ತುಗಳಿಂದ ರಚಿತವಾದ ಕೆಲವು ಅಂಡಾಶ್ಮಗಳು ಅದರಲ್ಲೂ ಸಿಲಿಕಾಮಯ ಮತ್ತು ಡೋಲಮೆಟಿಕ್ [[ಅದಿರು]]ಗಳು, [[ಕ್ಯಾಲ್ಸಿಯಂ ಕಾರ್ಬೋನೇಟ್|ಕ್ಯಾಲ್ಸಿಯಂ ಕಾರ್ಬೊನೇಟಿನ]] ಸ್ಥಾನಪಲ್ಲಟದಿಂದ ಉಂಟಾದುವು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಮಿಕ್ಕವುಗಳ ಉತ್ಪತ್ತಿಯ ವಿಷಯ ಚರ್ಚಾಸ್ಪದವಾಗಿದೆ.
[[ಕ್ಯಾಲ್ಸಿಯಂ ಕಾರ್ಬೊನೇಟ್]] ಅಂಡಾಶ್ಮಗಳು ಸಾಮಾನ್ಯವಾಗಿ ತಮ್ಮ ಅಂತಃಕೇಂದ್ರದಲ್ಲಿ ಬಗೆಬಗೆಯ ಖನಿಜಗಳ ಕಣಗಳು, ಪಳೆಯುಳಿಕೆಗಳ ಚೂರುಗಳು, ಅಥವಾ ಇತರ ವಸ್ತುಗಳು_ಇವನ್ನು ಮೂಲದ್ರವ್ಯಗಳಾಗಿ ಹೊಂದಿವೆ. ಕೇಂದ್ರೀಯ ಮೂಲ ದ್ರವ್ಯಗಳು ಗಾತ್ರದಲ್ಲೂ ಆಕಾರದಲ್ಲೂ ವಿವಿಧತೆ ಉಂಟು. ಆದರೆ ಅವುಗಳ ಮೇಲೆ ಪದರಗಳು ಬೆಳೆದುಕೊಳ್ಳುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಗುಂಡಾದ ಆಕೃತಿಯನ್ನು ಪಡೆಯುತ್ತವೆ. ಈ ಆಕೃತಿಗಳು ಗಾತ್ರದಲ್ಲಿ ಒಂದೇ ಸಮವಾಗಿಲ್ಲ ಮತ್ತು ಬಣ್ಣ, ಅಪಾರಕತೆ ಮತ್ತು ಹರಳಿನ ರಚನೆಯಲ್ಲಿ ಒಂದಕ್ಕೊಂದಕ್ಕೆ ಸ್ವಲ್ಪ ವ್ಯತ್ಯಾಸವಿರುವುದರಿಂದ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಬಹುದು. ದಪ್ಪವಾಗಿರುವ ಅಂಥ ಕೆಲವು ಪದರಗಳಲ್ಲಿ ಕ್ಯಾಲ್ಸೈಟಿನ ನೇರವಾದ ಎಳೆಗಳಿರಬಹುದು. ಈ ಸೂಕ್ಷ್ಮ ಆಕೃತಿಗಳು ಮತ್ತೆ [[ಸ್ಫಟಿಕೀಕರಣ]]ಗೊಂಡು ಬದಲಾವಣೆ ಹೊಂದಿರಲೂಬಹುದು ಮತ್ತು ಕೆಲವು ಅಂಡಾಶ್ಮಗಳು ತಮ್ಮ ಏಕಕೇಂದ್ರೀಯ ಆಕಾರಗಳನ್ನು ಕಳೆದುಕೊಂಡಿರಲೂಬಹುದು.
ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪೂರ್ವದ ಕಾಲದಿಂದ ಆಧುನಿಕ ಕಾಲದವರೆಗಿನ ಶಿಲೆಗಳಲ್ಲಿರುವುದು ಕಂಡುಬಂದಿದೆ.
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶ್ಮಗಳು|ಅಂಡಾಶ್ಮಗಳು}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
Line ೧೨ ⟶ ೧೪:
[[ವರ್ಗ:ಭೂಗೋಳ ಶಾಸ್ತ್ರ]]
[[ವರ್ಗ:ಭೂಗರ್ಭ ಶಾಸ್ತ್ರ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಡಾಶ್ಮಗಳು|ಅಂಡಾಶ್ಮಗಳು}}
"https://kn.wikipedia.org/wiki/ಅಂಡಾಶ್ಮಗಳು" ಇಂದ ಪಡೆಯಲ್ಪಟ್ಟಿದೆ