ಅಂಟಾರ್ಕ್ಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
clean up using AWB
೧೦ ನೇ ಸಾಲು:
[[File:Antarctica surface.jpg|thumb|left|ಅಂಟಾರ್ಕ್‍ಟಿಕದ ಎತ್ತರಗಳನ್ನು ಸೂಚಿಸುವ ನಕ್ಷೆ]]
[[File:Mount Erebus Aerial 2.jpg|thumb|[[ಎರೆಬಸ್ ಪರ್ವತ]],ಜೀವಂತ ಜ್ವಾಲಾಮುಖಿಯೊಂದಿಗೆ [[ರಾಸ್ ದ್ವೀಪ]]ದಲ್ಲಿ]]
ಇದು ಭೂಗೋಳದ ಅತ್ಯಂತ ಎತ್ತರದ ಖಂಡ. [[ಸಾಗರ]] ಮಟ್ಟದಿಂದ ಸರಾಸರಿ ಎತ್ತರ 2,300 ಮೀ. [[ಪ್ರಸ್ಥಭೂಮಿ]], ಪರ್ವತಸಾಲು, ಕಣಿವೆ ಕಂದರ, ಹಿಮನದಿಗಳಿದ್ದರೂ ಖಂಡದ ಶೇ. 95 ಭಾಗ ಹಿಮಾವೃತ, ಶೀತಲ ಖಂಡ, ಹಿಮದ [[ಮರುಭೂಮಿ]] ಶ್ವೇತಖಂಡ, ರೆಫ್ರಿಜಿರೇಟರ್ ಖಂಡ ಎಂಬ ವಿಶೇಷಣಗಳು ಈ ಖಂಡಕ್ಕುಂಟು. ಅತ್ಯಂತ ಸಮೀಪತಮ ನೆಲ ಭಾಗವೆಂದರೆ ಲ್ಯಾಟಿನ್ ಅಮೆರಿಕದ ದಕ್ಷಿಣದ ಕೊನೆಯ ತುದಿ ಕೇಪ್‍ಹಾರನ್. ಇದು 990 ಕಿ.ಮೀ. ದೂರದಲ್ಲಿದೆ. ವಿನ್ಸನ್ ಮ್ಯಾಸಿಫ್ ಎಂಬ ಭಾಗವೇ ಖಂಡದ ಅತಿ ಎತ್ತರದ ಭಾಗ (5,140 ಮೀ). ಇದು ಪೆಸಿಫಿಕ್ ಸಾಗರದ ಕಡೆಗಿರುವ ಪಶ್ಚಿಮ ಅಂಟಾರ್ಕ್‍ಟಿಕದಲ್ಲಿ ನೆಲೆಯಾಗಿದೆ. ಅಂಟಾರ್ಕ್‍ಟಿಕ್ ಖಂಡವನ್ನು ಟ್ರಾನ್ಸ್ ಅಂಟಾರ್ಕ್‍ಟಿಕ ಪರ್ವತ ಸಾಲು ಎರಡು ಪ್ರಮುಖ ಭೌಗೋಳಿಕ ಭಾಗಗಳಾಗಿ ವಿಭಜಿಸುತ್ತದೆ. ಈ ಪರ್ವತ ಸಾಲಿನಲ್ಲಿ ಜಲಜಶಿಲೆಗಳು ಹೆಚ್ಚು ಮೈದಳೆದಿವೆ. [[ಸರೀಸೃಪ]]ಗಳ [[ಪಳೆಯುಳಿಕೆ]]ಗಳು ಮತ್ತು [[ಸಸ್ಯ]] ಪಳೆಯುಳಿಕೆಗಳು ಇಲ್ಲಿ ಕಂಡುಬಂದಿವೆ. ಇದರ ಒಟ್ಟು ಉದ್ದ 3,000 ಕಿ.ಮೀ. ಖಂಡದ ಎರಡು ಭಾಗಗಳ ಪೈಕಿ ಪೂರ್ವ ಭಾಗ ವಿಸ್ತೀರ್ಣದಲ್ಲಿ ದೊಡ್ಡದು. ಪಶ್ಚಿಮ ಭಾಗಕ್ಕೆ ಹೋಲಿಸಿದಂತೆ ಇಲ್ಲಿಯ ಶಿಲೆಗಳು ಹಿರಿ ಪ್ರಾಯದವು. [[ದಕ್ಷಿಣ ಭಾರತ]]ದಲ್ಲಿ ವ್ಯಾಪಕವಾಗಿ ಕಂಡುಬರುವ ನೈಸ್-ಗ್ರಾನ್ಯುಲೈಟ್ ಶಿಲೆಗಳೇ ಇಲ್ಲೂ ದೊಡ್ಡ ಪ್ರಮಾಣದಲ್ಲಿ ಮೈದಳೆದಿವೆ. ಇವು 570 ದಶಲಕ್ಷ ವರ್ಷಗಳಿಗೂ ಹಿಂದಿನವು. ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಪ್ರಸ್ಥಭೂಮಿಯ ಎತ್ತರ 4,000 ಮೀ. ಭೌಗೋಳಿಕ ಧ್ರುವ ಮತ್ತು ಕಾಂತಧ್ರುವ ಎರಡು ಪ್ರಸ್ಥಭೂಮಿಯಲ್ಲೇ ಇವೆ. ಪಶ್ಚಿಮ ಅಂಟಾರ್ಕ್‍ಟಿಕ ಭಾಗ ಬಹುತೇಕ ಸಾಗರಮಟ್ಟದಿಂದ ಕೆಳಗೇ ಇದೆ. ಹಲವು ದ್ವೀಪಗಳ ಸಮೂಹವಿದು. 'ಮೌಂಟ್ ಎರಬಸ್' ಇಲ್ಲಿನ ಜೀವಂತ [[ಜ್ವಾಲಾಮುಖಿ]].
==ಹಿಮದ ವ್ಯಾಪ್ತಿ==
[[File:AA bedrock bedmap2.4960.tif|thumb|right|The bedrock topography of Antarctica, critical to understand dynamic motion of the continental ice sheets.]]
೫೮ ನೇ ಸಾಲು:
*ಅಂಟಾರ್ಕ್ಟಿಕಾದ ಪಶ್ಚಿಮ ಭಾಗದ ಕಡಲಂಚಿನುದ್ದಕ್ಕೂ ಅಸ್ತಿತ್ವದಲ್ಲಿರುವ ಹಿಮನದಿಗಳ ಪ್ರತಿ ಹತ್ತರಲ್ಲಿ ಒಂಬತ್ತು ಹಿಂದೆ ಸರಿಯುತ್ತಿವೆ. ಹನ್ನೆರಡು ವರ್ಷಗಳಿಂದ ಈಚೆಗೆ ಈ ಹಿಂಜರಿತದ ವೇಗ ಹೆಚ್ಚುತ್ತಲೂ ಇದೆ. ಉದಾಹರಣೆಗೆ ಜಾಗತಿಕವಾಗಿ ಸಾಗರ ಮಟ್ಟವನ್ನು ನಾಲ್ಕು ಅಡಿ ಹೆಚ್ಚಿಸಬಲ್ಲ ‘ಥ್ವೈಟ್‌್ಸ ಹಿಮನದಿ’ ಮತ್ತು ಸಾಗರ ಮಟ್ಟವನ್ನು ಇಪ್ಪತ್ತು ಅಡಿ ಏರಿಸಬಲ್ಲಷ್ಟು ಜಲದಾಸ್ತಾನಿನ ‘ಟೋಟ್ಟೆನ್‌ ಹಿಮನದಿ’ – ಈ ಪ್ರತಿಯೊಂದೂ ಲಕ್ಷಾಂತರ ಚದರ ಕಿ.ಮೀ. ವಿಸ್ತಾರ ಕಡಿಮೆಗೊಂಡಿವೆ.
* ಈ ಭೂಖಂಡದ ಸುಪ್ರಸಿದ್ಧ ‘ಲಾರ್ಸೆನ್‌ ಐಸ್‌ ಶೆಲ್ಫ್‌’ ಪ್ರಸ್ತುತ ಶೇಕಡ ನಲವತ್ತು ಭಾಗ ಕರಗಿದೆ. 220 ಮೀಟರ್‌ ದಪ್ಪದ ಆ ‘ಐಸ್‌ ಶೆಲ್ಫ್‌’ನ (ಹಾಗೆಂದರೆ ನೆಲದಿಂದ ಕಡಲಿಗೂ ಚಾಚಿ ಹರಡಿದ ಹಿಮಹಾಸು) 3250 ಚದರ ಕಿ.ಮೀ.ನಷ್ಟು ಭಾಗ ಕಣ್ಮರೆಯಾಗಿದೆ. ಹಾಗೆ ಏಳು ಪ್ರಮುಖ ಐಸ್‌ ಶೇಲ್ಫ್‌ಗಳ ಒಟ್ಟು ಸಮೀಪ 13500 ಚದರ ಕಿ.ಮೀ. ವಿಸ್ತಾರದ ಹಿಮ ಕರಗಿ ನೀರಾಗಿ ಕಡಲಿಗಿಳಿದಿದೆ.
* ಅಂಟಾರ್ಕ್ಟಿಕಾದ ಹಿಮಹಾಸುಗಳು, ಹಿಮನದಿಗಳು ಮತ್ತು ಹಿಮಚಾಚುಗಳನ್ನು ಅಭ್ಯಸಿಸುತ್ತಿರುವ ತಜ್ಞರು ವಿವರಿಸುವಂತೆ ಇವುಗಳ ಕರಗುವ ಕುಸಿಯುವ ಕುಗ್ಗುವ ವೇಗ ಮುಂದಿನ ಹತ್ತು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಕರಗುವ ಅಂಟಾರ್ಕ್ಟಿಕಾದಿಂದ ಸಾಗರ ಮಟ್ಟ ಏರಿ ಜಗದಾದ್ಯಂತ ನೆಲ–ಕಡಲುಗಳ ಸಕಲ ಜೀವಾವಾರಗಳೂ ಇಡೀ ಭೂ ಜೀವಜಾಲವೂ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶವಿದೆ.<ref>http://www.prajavani.net/article/ಆತಂಕಗಳ-ನೆರಳಲ್ಲಿ-ಅಂಟಾರ್ಕ್ಟಿಕಾ(<ಗೂಗಲ್)</ref>
==ಬಾಹ್ಯ ಸಂಪರ್ಕಗಳು==
{{Sister project links|voy=Antarctica|n=Portal:Antarctica|m=no|mw=no}}
೮೨ ನೇ ಸಾಲು:
==ಉಲ್ಲೇಖ==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಟಾರ್ಕ್ಟಿಕ್}}
 
[[ವರ್ಗ:ಖಂಡಗಳು]]
[[ವರ್ಗ:ಭೂಗೋಳ]]
"https://kn.wikipedia.org/wiki/ಅಂಟಾರ್ಕ್ಟಿಕ" ಇಂದ ಪಡೆಯಲ್ಪಟ್ಟಿದೆ