ಅಂಜಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

clean up; + info using AWB
(clean up; + info using AWB)
| website =
}}
'''ಅಂಜಲಿ''' ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ. ೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಅಂಜಲಿ ಅಭಿನಯದ ಪ್ರಮುಖ ಚಿತ್ರಗಳೆಂದರೆ '''[[ಅನಂತನ ಅವಾಂತರ]]'''(೧೯೮೯), '''[[ನೀನು ನಕ್ಕರೆ ಹಾಲು ಸಕ್ಕರೆ]]'''(೧೯೯೧) ಮತ್ತು '''[[ತರ್ಲೆ ನನ್ಮಗ]]'''(೧೯೯೨)<ref name="ಅಂಜಲಿ೧">{{cite web|title=ಅಂಜಲಿ ಸುಧಾಕರ್|url=http://www.nettv4u.com/celebrity/kannada/movie-actress/anjali-sudhakar|publisher=ನೆಟ್ ಟಿವಿ ಫಾರ್ ಯು}}</ref><ref name="ಅಂಜಲಿ೨">{{cite web|title=ಅಂಜಲಿ|url=http://chiloka.com/celebrity/anjali-sudhakar|publisher=ಚಿಲೋಕ}}</ref>.
 
==ಆರಂಭಿಕ ಜೀವನ==
ಅಂಜಲಿ ಜನಿಸಿದ್ದು ರಾಮನಗರದ '''[[ಕನಕಪುರ]]'''ದಲ್ಲಿ ೧೯೭೨ರ ಮೇ ೨೨ರಂದು. ಇವರ ಮೂಲ ಹೆಸರು ಶಾಂತ. ನಿರ್ದೇಶಕ '''[[ಕಾಶಿನಾಥ್]]''' ಇವರ ಹೆಸರನ್ನು ಅಂಜಲಿ ಎಂದು ಬದಲಾಯಿಸಿದರು<ref name="ಅಂಜಲಿ೧"/><ref name="ಅಂಜಲಿ೨"/>.
 
==ವೃತ್ತಿ ಜೀವನ==
'''[[ಕಂಕಣ ಭಾಗ್ಯ]]'''(೧೯೮೮) ಚಿತ್ರದ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅಂಜಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಚಿತ್ರ '''[[ಕಾಶಿನಾಥ್]]''' ನಿರ್ದೇಶನದ '''[[ಅನಂತನ ಅವಾಂತರ]]'''(೧೯೮೯). ದಾಂಪತ್ಯ ಜೀವನದ ಸಮಸ್ಯೆಗಳ ಕುರಿತಾಗಿದ್ದ ಈ ಹಾಸ್ಯಪ್ರಧಾನ ಚಿತ್ರದಲ್ಲಿ '''[[ಕಾಶಿನಾಥ್]]''' ಅವರಿಗೆ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ಅಂಜಲಿ ಅವರಿಗೆ ದೊರೆತ ನಂತರದ ಪ್ರಮುಖ ಚಿತ್ರವೆಂದರೆ '''[[ನೀನು ನಕ್ಕರೆ ಹಾಲು ಸಕ್ಕರೆ]]'''(೧೯೯೧). ಐವರು ನಾಯಕಿಯರಿದ್ದ ಈ ಚಿತ್ರದಲ್ಲಿ '''[[ವಿಷ್ಣುವರ್ಧನ್]]''' ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. '''[[ಉಪೇಂದ್ರ]]''' ಚೊಚ್ಚಲ ನಿರ್ದೇಶನದ '''[[ತರ್ಲೆ ನನ್ಮಗ]]'''(೧೯೯೨) ಚಿತ್ರದಲ್ಲಿ '''[[ಜಗ್ಗೇಶ್]]''' ಅವರಿಗೆ ನಾಯಕಿಯಾಗಿ ಶಕ್ತ ಅಭಿನಯ ನೀಡಿದ ಅಂಜಲಿ '''[[ಶ್ರೀಧರ್]]''' ಅವರೊಂದಿಗೆ '''[[ಜನ ಮೆಚ್ಚಿದ ಮಗ]]'''(೧೯೯೩), '''[[ರಮೇಶ್ ಭಟ್]]''' ಅವರೊಂದಿಗೆ '''[[ಸಿಡಿದೆದ್ದ ಶಿವ]]'''(೧೯೯೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. '''[[ಮರ್ಡರ್]]'''(೧೯೯೪) ಚಿತ್ರದಲ್ಲಿ ಋಣಾತ್ಮಕ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಅಂಜಲಿ '''ಟೆನ್ನಿಸ್ ಕೃಷ್ಣ''' ಅಭಿನಯದ '''[[ಅಪ್ಪ ನಂಜಪ್ಪ ಮಗ ಗುಂಜಪ್ಪ]]'''(೧೯೯೪) ಚಿತ್ರದಲ್ಲಿ ನಾಯಕಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. '''[[ಅನಂತ್ ನಾಗ್]]''' ನಾಯಕರಾಗಿ ಅಭಿನಯಿಸಿದ '''[[ಗಣೇಶನ ಮದುವೆ]]'''(೧೯೯೦) ಮತ್ತು '''[[ಉಂಡು ಹೋದ ಕೊಂಡು ಹೋದ]]'''(೧೯೯೧) ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಚೊಕ್ಕದಾದ ಅಭಿನಯ ನೀಡಿದ್ದಾರೆ<ref name="ಅಂಜಲಿ೧"/>.
 
'''[[ವಿಷ್ಣುವರ್ಧನ್]]''', '''[[ಶ್ರೀಧರ್]]''', '''[[ಕಾಶಿನಾಥ್]]''', '''[[ಜಗ್ಗೇಶ್]]''' ಮುಂತಾದ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜಲಿ '''ದೊರೈ-ಭಗವಾನ್''', '''ಬಿ.ರಾಮಮೂರ್ತಿ''', '''ನಾಗತಿಹಳ್ಳಿ ಚಂದ್ರಶೇಖರ್''' ಮತ್ತು '''[[ಕಾಶಿನಾಥ್]]''' ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ<ref name="ಅಂಜಲಿ೧"/>.
 
==ವೈಯಕ್ತಿಕ ಜೀವನ==
೧೯೯೮ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ಅಂಜಲಿ ದುಬೈನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ<ref name="ಅಂಜಲಿ೨"/><ref>{{cite web|title=ಅಂಜಲಿ ಸುಧಾಕರ್|url=http://iwiki.in/anjali-sudhakar-biodata-karnataka-movies-wikipedia-photos-dubai-facebook-pics/|publisher=ಐ ವಿಕಿ}}</ref>.
==ಅಂಜಲಿ ಅಭಿನಯದ ಚಿತ್ರಗಳು==
{| class="wikitable sortable"
೪,೭೫೩

edits

"https://kn.wikipedia.org/wiki/ವಿಶೇಷ:MobileDiff/800587" ಇಂದ ಪಡೆಯಲ್ಪಟ್ಟಿದೆ