ಮೋತಿಲಾಲ್ (ಹಿಂದೀ ಚಿತ್ರ ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎ಚಲನಚಿತ್ರರಂಗ: clean up, replaced: ಉಚ್ಛ → ಉಚ್ಚ using AWB
 
೨೦ ನೇ ಸಾಲು:
 
==ಚಲನಚಿತ್ರರಂಗ==
ಕಾಲೇಜ್ ಮುಗಿಸಿದ ನಂತರ ಅವರು ನೌಕಾಪಡೆಯನ್ನು ಸೇರಲು [[ಮುಂಬೈ]]ಗೆ ಬಂದರು. ಆದರೆ ಅನಾರೋಗ್ಯದ ನಿಮಿತ್ತ ಅವರು ಪ್ರವೇಶ ಪರೀಕ್ಷೆಗೆ ಕೂರಲಾಗಲಿಲ್ಲ. ಒಮ್ಮೆ ಅಲ್ಲಿಯ ಸಾಗರ್ ಸ್ಟೂಡಿಯೊದಲ್ಲಿ ಚಿತ್ರೀಕರಣವೊಂದನ್ನು ನೋಡಲು ಹೋಗಿದ್ದರು. ಆ ಚಿತ್ರದ ನಿರ್ದೇಶಕರಾಗಿದ್ದ ಕಾಳೀಪ್ರಸಾದ್ ಘೋಷರು ಉಚ್ಛಉಚ್ಚ ಸುಸಂಸ್ಕೃತ ಉಡುಪಿನಲ್ಲಿದ್ದ ಮೋತೀಲಾಲರನ್ನು ಗಮನಿಸಿ, ತಮ್ಮ ''ಶಹರ್ ಕಾ ಜಾದೂ'' (೧೯೩೪) ಚಿತ್ರದಲ್ಲಿ ನಾಯಕನ ಪಾತ್ರವನ್ನಿತ್ತರು. ಹೀಗೆ ಸಾಗರ್ ಫಿಲ್ಮ್ ಕಂಪೆನಿಯನ್ನು ಸೇರಿದಾಗ ಮೊತೀಲಾಲರ ವಯಸ್ಸು ೨೪. ೧೯೩೫ರಲ್ಲಿ ಸಬಿತಾದೇವಿಯೊಡನೆ ''ಡಾಕ್ಟರ್ ಮಾಧುರಿಕಾ'' ಮತ್ತು ೧೯೩೭ರಲ್ಲಿ ''ಕುಲವಧು'' ಚಿತ್ರಗಳ ನಂತರ ರಣಜೀತ್ ಸ್ಟೂಡಿಯೊವನ್ನು ಸೇರಿ ಅಲ್ಲಿ ''ಜಾಗಿರ್ದಾರ್''(೧೯೩೭), ''ಹಮ್, ತುಮ್ ಔರ್ ವಹ್ ''(೧೯೩೮), ''ಅರ್ಮಾನ್ ''(೧೯೪೨), ''ತಕ್ದೀರ್'' (೧೯೪೩) ಮತ್ತು ''ಕಲಿಯಾಂ'' (೧೯೪೪) ಚಿತ್ರಗಳಲ್ಲಿ ಅಭಿನಯಿಸಿದರು. ಆರ್ ಕೆ ನಾರಾಯಣರ ಕಾದಂಬರಿ ''ಮಿ ಸಂಪತ್ ''ಯನ್ನಾಧರಿಸಿ ಅದೇ ಹೆಸರಲ್ಲಿ ೧೯೫೨ರಲ್ಲಿ ಎಸ್ ಎಸ್ ವಾಸನ್ ನಿರ್ಮಿಸಿದ ನಯವಂಚಕನ ಪಾತ್ರ ಮೋತಿಲಾಲರಿಗೆ ಬಹುಖ್ಯಾತಿಯನ್ನು ತಂದಿತು. ೧೯೫೫ರಲ್ಲಿ ಬಿಮಲ್ ರಾಯ್ ನಿರ್ದೇಶನದ ''ದೇವದಾಸ್'' ಚಿತ್ರದ ಚುನ್ನೀಲಾಲ್ ಪಾತ್ರ ಅವರಿಗೆ ಫಿಲ್ಮ್ ಫೇರ್ ನ ಅತ್ಯುತ್ತಮ ಪೋಷಕ ನಟನ ಪ್ರಶಸ್ತಿಯನ್ನು ಕೊಟ್ಟಿತು. ೧೯೬೦ರ ''ಪಾರಖ್'' ಚಿತ್ರದಲ್ಲಿನ ಅಭಿನಯ ಅವರಿಗೆ ಎರಡನೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.
 
ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕ [[ಮುಕೇಶ್ - ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕ|ಮುಕೇಶ]]ರನ್ನು ೧೯೪೧ರಲ್ಲಿ ಪರಿಚಯಿಸಿದ ಮೋತೀಲಾಲರ ''ಮೂರ್ತಿ'' (೧೯೪೩)ಚಿತ್ರದಲ್ಲಿ ಮುಕೇಶರಿಗೆ ಪ್ರಥಮ ಬಾರಿಗೆ ಹಾಡುವ ಅವಕಾಶ ದೊರೆತಿತ್ತು. ೧೯೪೭ರ ''ಪಹಲೀ ನಜರ್'' ಚಿತ್ರದಲ್ಲಿ ಮುಕೇಶ್ ಹಾಡಿದ ''‘ದಿಲ್ ಜಲ್ತಾ ಹೈ ತೋ ಜಲ್ನೇ ದೇ...’'' ಹಾಡನ್ನೂ ಮೋತೀಲಾಲರ ಮೇಲೆಯೇ ಚಿತ್ರೀಕರಿಸಲಾಗಿದೆ.