ಬಾಬು ರಾಜೇಂದ್ರ ಪ್ರಸಾದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಜೀವನ: clean up, replaced: ಉಚ್ಛ → ಉಚ್ಚ using AWB
೨೪ ನೇ ಸಾಲು:
 
==ಜೀವನ==
೧೮೮೪ರ ಡಿಸೆಂಬರ್ ೩ನೇ ತಾರೀಖು ಬಿಹಾರದ ಜೇರಡ್ಡೆ ಎಂಬ ಹಳ್ಳಿಯಲ್ಲಿ ಪ್ರಸಾದರು ಜನಿಸಿದರು<ref>{{citeweb|url=http://pastpresidentsofindia.indiapress.org/raj.html|title=DR. RAJENDRA PRASAD|publisher=pastpresidentsofindia.indiapress.org|date=|accessdate=2015-03-05}}</ref>. ತಂದೆ ಮಹದೇವ ಸಹಾಯ್; ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು; ಅಲ್ಲದೆ ವೈದ್ಯರು. ತಾಯಿ ಕಮಲೇಶ್ವರಿ ದೇವಿ; ಸಂಪ್ರದಾಯಸ್ಥರು, ದೈವಭಕ್ತೆ, ಪ್ರತಿದಿನವೂ ರಾಮಾಯಣದ ಕತೆಗಳನ್ನು ಮಗನಿಗೆ ಹೇಳುವರು. ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳ ಕುಟುಂಬ. ಬಡವ – ಬಲ್ಲಿದ, ಹಿಂದೂ- ಮುಸ್ಲಿಂ ಮುಂತಾದ ಯಾವ ಭೇದ ಭಾವವೂ ಇಲ್ಲದ ಆಡಂಬರಹಿತವಾದ ಗ್ರಾಮೀಣ ಜನರ ಒಡನಾಟದಲ್ಲಿ ಬೆಳೆದ ಪ್ರಸಾದರು ಉಚ್ಛಉಚ್ಚ ಆದರ್ಶ, ನೈತಿಕ ನಡೆವಳಿಕೆ ಮತ್ತು ಋಜು ಸ್ವಭಾವವನ್ನು ಮೈಗೂಡಿಸಿಕೊಂಡರು. ಕೇವಲ ೧೨ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ವಿವಾಹವೂ ಆಯಿತು.
 
ಆಗಿನ ಪದ್ಧತಿಯಂತೆ, ಪ್ರಸಾದರ ಮೊದಲ ಶಿಕ್ಷಣ ಪರ್ಷಿಯನ್ ಭಾಷೆಯಲ್ಲಿ, ಒಬ್ಬ ಮುಸಲ್ಮಾನ್ ಮೌಲ್ವಿಯಿಂದ. ಪ್ರತಿಭಾಶಾಲಿಯಾಗಿದ್ದ ಪ್ರಸಾದರು ಶಾಲಾ ಕಾಲೇಜುಗಳಲ್ಲಿ ಅತ್ಯಂತ ಮೇಧಾವಿ ವಿದ್ಯಾರ್ಥಿ ಎನ್ನಿಸಿಕೊಂಡಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಿಂದ ಹಿಡಿದು ಬಿ.ಎ., ಎಂ.ಎ. ಹಾಗೂ ಕಾನೂನು ಪರೀಕ್ಷೆಗಳಲ್ಲಿ ಅವರಿಗೇ ಪ್ರಥಮಸ್ಥಾನ. ಚರ್ಚೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನಗಳು ಇವರಿಗೆ ಕಟ್ಟಿಟ್ಟದ್ದು.