ವಿಜಯಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦೯ ನೇ ಸಾಲು:
'''ವಿಜಯಪುರ'''ವು [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ '''ವಿಜಯಪುರ'''. ವಿಜಯಪುರ ನಗರವು [[ಬೆಂಗಳೂರು|ಬೆಂಗಳೂರಿನಿಂದ]] ಉತ್ತರ - ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ.
 
=='''ಚರಿತ್ರೆ'''==
[[File:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]]
ವಿಜಯಪುರದ ಪುರಾತನ ಹೆಸರು '''ಬಿಜ್ಜನಹಳ್ಳಿ'''. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
೧೫೫ ನೇ ಸಾಲು:
ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ '''ಆದಿಲ್ ಶಾಹಿ''' ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು '''ವಿಜಯಪುರ'''ವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ.
 
=='''ಚಾರಿತ್ರಿಕ ಘಟನೆಗಳು'''==
 
* 1650 - '''ವಿಶ್ವ ಪ್ರಖ್ಯಾತ ಗೋಲ ಗುಂಬಜ್''' ನಿರ್ಮಾಣ.
೧೮೯ ನೇ ಸಾಲು:
* 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ '''ವಿಜಯಪುರ ನಗರಸಭೆ'''ಯನ್ನು '''ವಿಜಯಪುರ ಮಹಾನಗರ ಪಾಲಿಕೆ'''ಯಾಗಿ ರಚನೆ.
 
=='''ಧಾರ್ಮಿಕ ಕೇಂದ್ರಗಳು'''==
[[Image:MCModi.jpg|thumb|right|250px|ಡಾ.ಎಂ. ಸಿ. ಮೋದಿ]]
 
೨೧೭ ನೇ ಸಾಲು:
* [[ಕನ್ನೂರ]] - '''ಗಣಪತರಾವ ಮಹಾರಜ'''ರು ಸ್ಥಾಪಿಸಿರುವ '''ಶಾಂತಿ ಕುಟೀರ ಆಶ್ರಮ'''ವಿದೆ.
 
=='''ಭೌಗೋಳಿಕ ಲಕ್ಷಣಗಳು'''==
 
ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು [[ಕಲಬುರಗಿ]] ಜಿಲ್ಲೆ (ಪುರ್ವಕ್ಕೆ), [[ರಾಯಚೂರು]] ಜಿಲ್ಲೆ (ದಕ್ಷಿಣಕ್ಕೆ), [[ಬಾಗಲಕೋಟೆ]] ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), [[ಬೆಳಗಾವಿ]] ಜಿಲ್ಲೆ (ಪಶ್ಚಿಮಕ್ಕೆ), [[ಮಹಾರಾಷ್ಟ್ರ]]ದ [[ಸಾಂಗಲಿ]] ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು [[ಸೋಲ್ಲಾಪುರ]] ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ.
೨೪೪ ನೇ ಸಾಲು:
ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ.
 
=='''ಹವಾಮಾನ'''==
 
* <big>ಬೇಸಿಗೆ-ಚಳಿಗಾಲ</big>- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ '''42.7''' ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9.5''' ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
೩೧೭ ನೇ ಸಾಲು:
|}
 
=='''ಮಳೆ ಮಾಪನ ಕೇಂದ್ರಗಳು'''==
 
ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ.
೩೨೭ ನೇ ಸಾಲು:
*<big>ಇಂಡಿ</big> - [[ಝಳಕಿ]], [[ಹೊರ್ತಿ]], [[ಚಡಚಣ]], [[ನಾದ ಕೆ. ಡಿ.]], [[ಅಗರಖೇಡ]]
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ವಿಜಯಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
 
=='''ಆಹಾರ'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಸಾಕ್ಷರತೆ'''==
 
ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ '''67%'''. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.
೪೦೬ ನೇ ಸಾಲು:
|}
 
=='''ಪ್ರವಾಸ'''==
 
[[File:North Karnataka Tourism map 10.11.2008.JPG|thumb|ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು]]
೫೯೯ ನೇ ಸಾಲು:
{{col-end}}
 
=='''ಜನಸಂಖ್ಯೆ'''==
 
ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು '''21 ಲಕ್ಷ'''ಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು '''3 ಲಕ್ಷ'''ಕ್ಕೂ ಅಧಿಕವಾಗಿದೆ. ಪ್ರತಿಶತ '''70%'''ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ.
೭೧೫ ನೇ ಸಾಲು:
|}
 
=='''ಧರ್ಮಗಳು'''==
 
{{bar box
೭೫೮ ನೇ ಸಾಲು:
|}
 
=='''ಭಾಷೆಗಳು'''==
 
ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ '''ಕನ್ನಡ'''. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು '''ಲಂಬಾಣಿ''' ಭಾಷೆಯನ್ನು ಮಾತನಾಡುತ್ತಾರೆ.
 
=='''ಪ್ರಮುಖ ವ್ಯಕ್ತಿಗಳು'''==
 
{{col-begin}}
೮೩೦ ನೇ ಸಾಲು:
{{col-end}}
 
=='''ಸಂಸ್ಕೃತಿ'''==
 
[[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]]
೮೩೭ ನೇ ಸಾಲು:
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ '''ಲಂಬಾಣಿ ಜನಾಂಗ'''ವು ವಿಶೇಷವಾಗಿದೆ.
 
=='''ಕಲೆ'''==
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
=='''ಹಣಕಾಸು'''==
 
ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ '''ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ'''ಯ ಕಚೇರಿಯಿದೆ.
 
=='''ಆರ್ಥಿಕತೆ'''==
 
ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
 
=='''ವ್ಯಾಪಾರ'''==
 
'''ವಿಜಯಪುರ''' ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ '''ಚಡಚಣ''' ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
 
=='''ಉದ್ಯೋಗ'''==
 
ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಬ್ಯಾಂಕುಗಳು'''==
 
[[ಚಿತ್ರ:Gv2 08072008.jpg|thumb|right|ಡಾ.ಜಿ.ವಿ.ಕುಲಕರ್ಣಿ]]
೯೯೭ ನೇ ಸಾಲು:
{{col-end}}
 
=='''ಆಡಳಿತ'''==
 
ವಿಜಯಪುರ ಜಿಲ್ಲೆಯೂ ಕರ್ನಾಟಕದ [[ಬೆಳಗಾವಿ]] ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.
 
=='''ವಿಜಯಪುರ ಜಿಲ್ಲೆಯ ತಾಲೂಕುಗಳು'''==
 
[[File:Bijapur-district-kn.svg|thumb|ವಿಜಯಪುರ ಜಿಲ್ಲೆಯ ನಕಾಶೆ]]
೧,೦೬೯ ನೇ ಸಾಲು:
* [[ಆಲಮೇಲ]]
 
=='''ಹಳ್ಳಿಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ.
೧,೮೦೬ ನೇ ಸಾಲು:
{{col-end}}
 
=='''ಗ್ರಾಮ ಪಂಚಾಯತಿಗಳು'''==
 
ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ.
೨,೦೮೧ ನೇ ಸಾಲು:
{{col-end}}
 
=='''ನೆಮ್ಮದಿ (ಹೋಬಳಿ) ಕೇಂದ್ರಗಳು''' ==
 
[[File:Bijapur tourist spots.JPG|thumb|ವಿಜಯಪುರ ಪ್ರವಾಸಿ ಸ್ಥಳಗಳು]]
೨,೧೦೬ ನೇ ಸಾಲು:
[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]].
 
=='''ನಾಡ ಕಚೇರಿಗಳು'''==
 
[[File:Hanumana yalagur.JPG|thumb|ಶ್ರೀ ಹನುಮಾನ ಮೂರ್ತಿ, ಯಲಗೂರ]]
೨,೧೨೯ ನೇ ಸಾಲು:
[[ದೇವರ ಹಿಪ್ಪರಗಿ]], [[ಆಲಮೇಲ]].
 
=='''ಕಂದಾಯ ಕಚೇರಿಗಳು'''==
[[File:India Karnataka Bijapur district.svg|thumb|ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ]]
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಕಂದಾಯ ಕಚೇರಿಗಳು'''</big>
೨,೧೫೧ ನೇ ಸಾಲು:
[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]].
 
=='''ತಾಲ್ಲೂಕು ಪಂಚಾಯತಿಗಳು'''==
 
ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು '''ತಾಲ್ಲೂಕು ಪಂಚಾಯತ''' ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
೨,೩೮೬ ನೇ ಸಾಲು:
{{col-end}}
 
=='''ಜಿಲ್ಲಾ ಪಂಚಾಯತ'''==
 
ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ '''ಜಿಲ್ಲಾ ಪಂಚಾಯತ''' ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ [[ಮನಗೂಳಿ]] ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ '''ಕಾರ್ಯನಿರ್ವಾಹಕ ಅಧಿಕಾರಿ ಗಳು''' ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ.
೨,೫೦೦ ನೇ ಸಾಲು:
{{col-end}}
 
=='''ಉಚಿತ ಪ್ರಸಾದನಿಲಯಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು 60 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ಉಚಿತ ಪ್ರಸಾದನಿಲಯ (ಹಾಸ್ಟೇಲ್ / ಬೋರ್ಡಿಂಗ್)ಗಳಿವೆ.
೨,೫೯೨ ನೇ ಸಾಲು:
ವಿಜಯಪುರ, [[ಬಸವನ ಬಾಗೇವಾಡಿ]], [[ಮುದ್ದೇಬಿಹಾಳ ]], [[ಇಂಡಿ]].
 
=='''ಗ್ರಂಥಾಲಯಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ.
೨,೬೧೦ ನೇ ಸಾಲು:
{{col-end}}
 
=='''ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ.
೨,೭೮೯ ನೇ ಸಾಲು:
{{col-end}}
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು'''==
 
ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ.
೩,೪೫೭ ನೇ ಸಾಲು:
<big>'''ಇಂಡಿ'''</big> - 586209 - [[ಇಂಡಿ]], ಇಂಡಿ ಬಜಾರ
 
=='''ದೂರವಾಣಿ ಕೈಪಿಡಿ'''==
 
<big>'''ಸಾರ್ವಜನಿಕ ಸಹಾಯವಾಣಿ'''</big>
೩,೬೦೦ ನೇ ಸಾಲು:
* ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 220297
 
=='''ಮೀನುಗಾರಿಕೆ ಸಹಕಾರ ಸಂಘಗಳು'''==
ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ
{{col-begin}}
೩,೬೨೯ ನೇ ಸಾಲು:
{{col-end}}
 
=='''ನೇಕಾರರ ಸಹಕಾರ ಸಂಘಗಳು'''==
ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ
{{col-begin}}
೩,೬೫೮ ನೇ ಸಾಲು:
{{col-end}}
 
=='''ಕಟ್ಟಡ ನಿರ್ಮಾಣ ಸಹಕಾರ ಸಂಘಗಳು'''==
ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ
{{col-begin}}
೩,೬೮೨ ನೇ ಸಾಲು:
{{col-end}}
 
=='''ನೀರು ಬಳಕೆದಾರರ ಸಹಕಾರ ಸಂಘಗಳು'''==
 
ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ
೩,೭೬೬ ನೇ ಸಾಲು:
{{col-end}}
 
=='''ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು'''==
 
ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ
೩,೮೦೫ ನೇ ಸಾಲು:
{{col-end}}
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು'''==
 
ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ
೪,೧೧೫ ನೇ ಸಾಲು:
{{col-end}}
 
=='''ಸರ್ಕಾರೇತರ ಸಂಸ್ಥೆಗಳು'''==
 
ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು '''ಸರ್ಕಾರೇತರ ಸಂಸ್ಥೆಗಳು'''(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ.
೪,೧೬೦ ನೇ ಸಾಲು:
{{col-end}}
 
=='''ನೀರಾವರಿ'''==
 
ಜಿಲ್ಲೆಯಲ್ಲಿ ಕೇವಲ '''15%''' ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ [[ಕೃಷ್ಣಾ]], [[ಭೀಮಾ]] ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ.
 
=='''ಕೆರೆಗಳು'''==
 
ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ.
೪,೪೧೬ ನೇ ಸಾಲು:
{{col-end}}
 
=='''ಆಣೆಕಟ್ಟುಗಳು'''==
 
* '''[[ಆಲಮಟ್ಟಿ ಆಣೆಕಟ್ಟು]] (ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ)''' - ಈ ಆಣೆಕಟ್ಟನ್ನು '''ಕೃಷ್ಣ ನದಿ'''ಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ.
* '''ನಾರಾಯಣಪುರ ಆಣೆಕಟ್ಟು(ಬಸವ ಸಾಗರ)''' - ಈ ಆಣೆಕಟ್ಟನ್ನು '''ಕೃಷ್ಣ ನದಿ'''ಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ.
 
=='''ಕಾಲುವೆಗಳು'''==
 
ಕೃಷ್ಣಾ ನದಿಯ [[ಆಲಮಟ್ಟಿ ಆಣೆಕಟ್ಟು]] ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ.
೪,೪೫೦ ನೇ ಸಾಲು:
{{col-end}}
 
=='''ಕೃಷಿ'''==
 
ಜಿಲ್ಲೆಯ ಪ್ರಮುಖ ಉದ್ಯೋಗವೇ '''ಕೃಷಿ'''ಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು '''75%''' ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ '''15%''' ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ '''85%''' ಭೂಮಿ ಮಳೆಯನ್ನೇ ಅವಲಂಭಿಸಿದೆ.
೪,೪೯೧ ನೇ ಸಾಲು:
|}
 
=='''ತೋಟಗಾರಿಕೆ'''==
 
ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.
 
=='''ಕೃಷಿ ಮಾರುಕಟ್ಟೆಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ.
೪,೫೩೩ ನೇ ಸಾಲು:
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಚಡಚಣ]]
 
=='''ರೈತ ಸಂಪರ್ಕ ಕೇಂದ್ರಗಳು'''==
 
[[File:Wind power inchageri bijapur.JPG|thumb|ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ]]
೪,೫೪೩ ನೇ ಸಾಲು:
* <big>ಇಂಡಿ</big> - ಬಳ್ಳೊಳ್ಳಿ, ಚಡಚಣ.
 
=='''ಬೀಜ ಉತ್ಪಾದಕ ಕಂಪನಿಗಳು'''==
 
* ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ.
* ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ.
 
=='''ಆಹಾರ ಸಂಸ್ಕರಣೆ ಘಟಕಗಳು'''==
[[File:Rock hill garden.JPG|thumb|ಆಲಮಟ್ಟಿ ರಾಕ್ ಉದ್ಯಾನ ವನ]]
* ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ
 
=='''ಮದ್ಯ ಘಟಕಗಳು'''==
 
* ನಿಸರ್ಗ ಮದ್ಯ ಘಟಕ, ವಿಜಯಪುರ
೪,೫೫೮ ನೇ ಸಾಲು:
* ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ
 
=='''ನರ್ಸರಿಗಳು'''==
[[File:Alamatti dam.JPG|thumb|ಆಲಮಟ್ಟಿ ಆಣೆಕಟ್ಟು]]
* ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ , ತಾ||ಜಿ|| ವಿಜಯಪುರ
೪,೫೬೯ ನೇ ಸಾಲು:
* ಸಂಕನಾಳ ನರ್ಸರಿ , ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ
 
=='''ಶೀತಲಿಕರಣ ಘಟಕಗಳು'''==
 
{{col-begin}}
೪,೫೮೫ ನೇ ಸಾಲು:
* ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ
 
=='''ಹಾಲು ಉತ್ಪಾದಕ ಘಟಕಗಳು'''==
 
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ '''ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ'''ವನ್ನು ಸ್ಥಾಪಿಸಲಾಗಿದೆ. [[ವಿಜಯಪುರ]] ಮತ್ತು [[ಬಾಗಲಕೋಟ]] ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], ವಿಜಯಪುರ. ಇದನ್ನು '''ವಿಜಯಪುರ ಡೈರಿ'''ಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
೪,೭೬೪ ನೇ ಸಾಲು:
{{col-end}}
 
=='''ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ'''==
'''ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ'''ದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ.
 
=='''ಬೆಳೆಗಳು'''==
 
<big>'''ಆಹಾರ ಬೆಳೆಗಳು'''</big>
೪,೭೮೧ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಸಸ್ಯಗಳು'''==
 
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
 
=='''ಪ್ರಾಣಿಗಳು'''==
 
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
 
ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು [[ಹುಬ್ಬಳ್ಳಿ]] ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ.
೪,೮೭೭ ನೇ ಸಾಲು:
{{col-end}}
 
=='''ಪಾಸ್ ಪೋರ್ಟ್ ಕೇಂದ್ರ'''==
 
ವಿಜಯಪುರ ಜಿಲ್ಲೆಯ ಪಾಸ್ ಪೋರ್ಟ್ ಸೇವಾ ಕೇಂದ್ರವು [[ಹುಬ್ಬಳ್ಳಿ]] ವಿಭಾಗದ ವಾಪ್ತಿಯಲ್ಲಿ ಬರುತ್ತದೆ.
೪,೮೮೭ ನೇ ಸಾಲು:
* [[ಬೆಂಗಳೂರು]]
 
=='''ನ್ಯಾಯಾಲಯಗಳು'''==
 
[[File:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]]
೪,೯೦೪ ನೇ ಸಾಲು:
* ತಾಲೂಕು ಸಿವಿಲ್ ನ್ಯಾಯಾಲಯ, [[ಮುದ್ದೇಬಿಹಾಳ]]
 
==''' ಪೋಲಿಸ್(ಆರಕ್ಷಕ) ಠಾಣೆಗಳು'''==
 
ವಿಜಯಪುರ ನಗರದಲ್ಲಿರುವ '''ಎಸ್.ಪಿ. ಆಫೀಸ್ ಕೇಂದ್ರ ಕಚೇರಿ'''ಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ.
೪,೯೬೪ ನೇ ಸಾಲು:
{{col-end}}
 
=='''ಅಗ್ನಿಶಾಮಕ ಠಾಣೆಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ.
೪,೯೭೩ ನೇ ಸಾಲು:
* ಅಗ್ನಿಶಾಮಕ ಠಾಣೆ, [[ಇಂಡಿ]]
 
=='''ನದಿಗಳು'''==
[[File:Sindagi bijapur.JPG|thumb|ಸಿಂದಗಿ]]
[[File:BBG bijapur.JPG|thumb|ಬಸವನ ಬಾಗೇವಾಡಿ]]
೫,೦೩೪ ನೇ ಸಾಲು:
ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆ ಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ '''ಜೋಳದ ಬೆಳೆ'''ಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. '''ಡೋಣಿ ಬೆಳೆದರೆ ಓಣಿಲ್ಲ ಜೋಳ'''ಯಂಎಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ '''ವಿಜಯಪುರ ಜೋಳ''' ಎಂದು ಪ್ರಸಿದ್ದವಾಗಿದೆ.
 
=='''ಕೈಗಾರಿಕೆಗಳು'''==
 
<big>'''ಸಕ್ಕರೆ ಕಾರ್ಖಾನೆಗಳು'''</big>
೫,೦೬೪ ನೇ ಸಾಲು:
* ಕೇಶವ ಸಿಮೆಂಟ್ ಮತ್ತು ಇನ್ಪ್ರಾಸ್ಟ್ರಕ್ಚರ್
 
=='''ಕೈಗಾರಿಕಾ ಪ್ರದೇಶಗಳು'''==
 
ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ.
೫,೦೯೨ ನೇ ಸಾಲು:
{{col-end}}
 
=='''ಆಸ್ಪತ್ರೆಗಳು'''==
 
ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ.
೫,೨೩೫ ನೇ ಸಾಲು:
{{col-end}}
 
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
 
ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
೫,೪೬೮ ನೇ ಸಾಲು:
{{col-end}}
 
=='''ಪಶು ಆಸ್ಪತ್ರೆಗಳು'''==
 
ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪ ತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ.
೫,೬೩೩ ನೇ ಸಾಲು:
{{col-end}}
 
=='''ಆಕಾಶವಾಣಿ ಕೇಂದ್ರ'''==
 
ವಿಜಯಪುರ ನಗರದ [[ಅಥಣಿ]] ರಸ್ತೆಯಲ್ಲಿ '''ಆಕಾಶವಾಣಿ''' ಕೇಂದ್ರವಿದೆ. '''101.8 ಮೆಗಾ ಹರ್ಟ್ಸ್ ತರಂಗಾಂತರ'''ದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು '''ಮಹಾತ್ಮ ಗಾಂಧಿ ವೃತ್ತ'''ದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.
೫,೬೪೧ ನೇ ಸಾಲು:
'''2x*3 ಕಿ.ವ್ಯಾ'''. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು '''80. ಕಿ.ಮೀ.''' ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.
 
=='''ವಾಹನ ಸಾರಿಗೆ'''==
ವಿಜಯಪುರ ಪಟ್ಟಣವು '''ನಗರ''' ಹಾಗೂ '''ಗ್ರಾಮೀಣ ಸಾರಿಗೆ''' ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ '''ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ'''ದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.
 
೫,೬೪೮ ನೇ ಸಾಲು:
ವಿಜಯಪುರದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ '''-''' <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ '''ಪ್ರಾದೇಶಿಕ ಸಾರಿಗೆ ಕಚೇರಿ'''ಯನ್ನು ಹೊಂದಿದೆ.
 
=='''ರೈಲು ಸಾರಿಗೆ'''==
 
'''ವಿಜಯಪುರದಿಂದ ಹೊರಡುವ ರೈಲುಗಳು'''
೫,೮೧೧ ನೇ ಸಾಲು:
{{col-end}}
 
=='''ವಿಮಾನಯಾನ ಸಾರಿಗೆ'''==
 
<big>'''ವಿಮಾನ ನಿಲ್ದಾಣ'''</big>
೫,೮೧೭ ನೇ ಸಾಲು:
'''ವಿಜಯಪುರ ವಿಮಾನ ನಿಲ್ದಾಣ'''ವು ಪಟ್ಟಣದಿಂದ 5ಕಿ.ಮೀ (ಮಧಬಾವಿ-ಭುರಣಾಪುರ ಗ್ರಾಮದ ಹತ್ತಿರ) ದೂರವಿದೆ. ಇದಕ್ಕಾಗಿ ರಾಜ್ಯ ಸರಕಾರವು '''725''' ಎಕರೆ ಭೂಮಿಯನ್ನು ಖರೀದಿಸಿದೆ.
 
=='''ಜಲಸಾರಿಗೆ'''==
 
<big>'''ಬಂದರು'''</big>
೫,೮೫೫ ನೇ ಸಾಲು:
<big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
 
=='''ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ'''==
 
ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
೫,೯೧೦ ನೇ ಸಾಲು:
|}
 
=='''ಸರಕಾರಿ ವಾಹನ ನಿಲ್ದಾಣಗಳು'''==
 
* <big>[[ಬಸವನ ಬಾಗೇವಾಡಿ ತಾಲ್ಲೂಕು]]</big> - [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ನಿಡಗುಂದಿ]], [[ಕೊಲ್ಹಾರ]]
೫,೯೧೮ ನೇ ಸಾಲು:
* <big>[[ಸಿಂದಗಿ ತಾಲ್ಲೂಕು]]</big> - [[ದೇವರ ಹಿಪ್ಪರಗಿ]], [[ಆಲಮೇಲ]], [[ಕಲಕೇರಿ]]
 
=='''ಸರಕಾರಿ ವಾಹನ ಘಟಕಗಳು'''==
 
* ಬಸವನ ಬಾಗೇವಾಡಿ
೫,೯೨೭ ನೇ ಸಾಲು:
* ತಾಳಿಕೋಟ
 
=='''ಸೇತುವೆಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ , ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ.
 
=='''ವಾಹನ ತರಬೇತಿ ಶಾಲೆಗಳು'''==
 
ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ.
೫,೯೩೯ ನೇ ಸಾಲು:
* ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ.
 
=='''ವಾಹನ ಮಾರಾಟ ಮಳಿಗೆಗಳು'''==
 
{{col-begin}}
೫,೯೯೨ ನೇ ಸಾಲು:
{{col-end}}
 
== '''ಕ್ರೀಡಾಂಗಣ'''==
 
ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ '''ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ'''ವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.
 
=='''ಕ್ರೀಡೆ'''==
 
ವಿಜಯಪುರ ಜಿಲ್ಲೆಯು '''ಸೈಕ್ಲಿಸ್ಟಗಳ ಕಣಜ'''. ಪ್ರಮುಖವಾಗಿ '''ಪ್ರೇಮಲತಾ ಸುರೇಬಾನ''', '''ಯಲಗುರೇಶ ಗಡ್ಡಿ''' , '''ಲಕ್ಕಪ್ಪ ಕುರಣಿ''', '''ಗೀತಾಂಜಲಿ ಜ್ಯೋತೆಪ್ಪನ್ನವರ''' ಮತ್ತು '''ನೀಲಮ್ಮ ಮಲ್ಲಿಗವಾಡ''' ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ '''ಕಿರಣ ಕಟ್ಟಿಮನಿ'''ಯವರು '''ಕರ್ನಾಟಕ ಪ್ರೀಮಿಯರ್ ಲೀಗ್'''ನ '''ವಿಜಯಪುರ ಬುಲ್ಸ್''' ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.
 
=='''ಚಿತ್ರ ಮಂದಿರಗಳು'''==
 
ವಿಜಯಪುರ ಜಿಲ್ಲೆಯಲ್ಲಿ ಸುಮಾರು '''25'''ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ '''7''' ಚಿತ್ರ ಮಂದಿರಗಳು ಇವೆ.
೬,೦೪೫ ನೇ ಸಾಲು:
{{col-end}}
 
=='''ರಾಜಕೀಯ'''==
 
ವಿಜಯಪುರ ಜಿಲ್ಲೆಯಿಂದ '''8 ಜನ''' ವಿಧಾನಸಭೆಗೆ (ಕೆಳಮನೆ), '''ಒಬ್ಬರು''' ಲೋಕಸಭೆಗೆ (ಸಂಸದರು) ಮತ್ತು '''5 ಜನ''' ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ.
೬,೨೧೪ ನೇ ಸಾಲು:
|}
 
=='''ನಗರಾಡಳಿತ'''==
 
ವಿಜಯಪುರ ನಗರವು '''ವಿಜಯಪುರ ಮಹಾನಗರ ಪಾಲಿಕೆ'''ಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ '''ವಿಜಯಪುರ ಅಭಿವೃಧ್ದಿ ಪ್ರಾಧಿಕಾರ'''ವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ.
೬,೪೨೨ ನೇ ಸಾಲು:
 
<big>'''ವಿಶ್ವವಿದ್ಯಾಲಯಗಳು'''</big>
* [[ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ
* [[ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ]] ([[ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]) (ಡೀಮ್ಡ್ ವಿಶ್ವವಿದ್ಯಾಲಯ)
 
೬,೬೩೧ ನೇ ಸಾಲು:
* ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ
* [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ
* [[ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ
 
<big>'''ಪದವಿ ಗಣಕಯಂತ್ರ ಅನ್ವಯಿಕ (ಬಿ. ಸಿ. ಎ.) ಮಹಾವಿದ್ಯಾಲಯಗಳು '''</big>
{{col-begin}}
{{col-break}}
* ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
* ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ
* ಸಿಕ್ಯಾಬ್ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ
೬,೬೫೩ ನೇ ಸಾಲು:
<big>'''ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ (ಎಂ. ಸಿ. ಎ.) ಮಹಾವಿದ್ಯಾಲಯಗಳು '''</big>
* [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ
* [[ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]]
 
<big>'''ವೈದ್ಯಕೀಯ ಮಹಾವಿದ್ಯಾಲಯಗಳು'''</big>
೬,೬೬೧ ನೇ ಸಾಲು:
<big>'''ಔಷಧ ಮಹಾವಿದ್ಯಾಲಯಗಳು'''</big>
* [[ಬಿ.ಎಲ್.ಡಿ.ಇ. ಔಷಧ ಮಹಾವಿದ್ಯಾಲಯ, ವಿಜಯಪುರ]]
* [[ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]]
 
<big>'''ಆರ್ಯುವೇದ ಮಹಾವಿದ್ಯಾಲಯಗಳು'''</big>
೬,೮೪೩ ನೇ ಸಾಲು:
{{col-begin}}
{{col-break}}
* [[ಕರ್ನಾಟಕ ರಾಜ್ಯಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]]
* ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ
* ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ
೭,೨೬೮ ನೇ ಸಾಲು:
{{col-end}}
 
=='''ಸಾಹಿತ್ಯ'''==
 
[[File:S S Maharaj.jpg|thumb|250px|right| ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ]]
 
ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ [[ಅಣ್ಣ ಬಸವಣ್ಣ]], [[ಅಭಿನವ ಪಂಪ ನಾಗಚಂದ್ರ]], [[ಕುಮಾರ ವಾಲ್ಮೀಕಿ]], [[ಅಗ್ಗಳ]], [[ಗೋಪಕವಿ]], [[ಕಾಖಂಡಕಿ ಮಹಿಪತಿದಾಸರು]], [[ರುಕ್ಮಾಂಗದ ಪಂಡಿತರು]], [[ಫ.ಗು.ಹಳಕಟ್ಟಿ]], [[ಬಂಥನಾಳ ಶಿವಯೋಗಿಗಳು]], [[ಶಿಂಪಿ ಲಿಂಗಣ್ಣ]], [[ಹಲಸಂಗಿ ಮಧುರ ಚೆನ್ನ]], [[ಹರ್ಡೇಕರ ಮಂಜಪ್ಪ]], [[ಕಾಪಸೆ ರೇವಪ್ಪ]], [[ಶ್ರೀರಂಗ]], [[ರಂ. ಶ್ರೀ. ಮುಗಳಿ]], [[ಮಲ್ಲಪ್ಪ ಚಾಂದಕವಟೆ]], [[ಶಿವಲಿಂಗಪ್ಪ ಯಡ್ರಾಮಿ]], [[ಪ್ರೊ. ಎ.ಎಸ್.ಹಿಪ್ಪರಗಿ]], [[ಡಾ.ಬಿ.ಬಿ.ಹೆಂಡಿ]], ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, [[ಎಮ್.ಎಮ್.ಕಲಬುರ್ಗಿ]], [[ಶಂ.ಗು.ಬಿರಾದಾರ]], ಶರಣಪ್ಪ ಕಂಚಾಣಿ, [[ಕುಮಾರ ಕಕ್ಕಯ್ಯ]], [[ಸಿ ಸು ಸಂಗಮೇಶ]], [[ಸಂಗಮನಾಥ ಹಂಡಿ]], [[ರಂಜಾನ ದರ್ಗಾ]], [[ಸ.ಜ.ನಾಗಲೋಟಿ ಮಠ]], [[ಎಚ್ ಬಿ ವಾಲೀಕಾರ]], [[ಆರ್. ಆರ್. ಹಂಚಿನಾಳ]], [[ಕೃಷ್ಣ ಕೊಲ್ಹಾರ ಕುಲಕರ್ಣಿ]], [[ಜಿ.ವಿ.ಕುಲಕರ್ಣಿ]], [[ಪಿ.ಬಿ.ಧುತ್ತರಗಿ]], [[ಬಸವರಾಜ ಡೋಣೂರ]], [[ಕೃಷ್ಣಮೂರ್ತಿ ಪುರಾಣಿಕ]], [[ರಾಮಚಂದ್ರ ಕೊಟ್ಟಲಗಿ]], [[ಕೆ.ಎನ್.ಸಾಳುಂಕೆ]], [[ಶಾಂತಾ ಇಮ್ರಾಪುರ]], ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, [[ಪ್ರೊ.ಎನ್.ಜಿ.ಕರೂರ]], ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, [[ಜಂಬುನಾಥ ಕಲ್ಯಾಣಿ]], [[ಡಾ. ವಿಜಾಯಾ ದೇವಿ]], [[ಪ್ರೊ.ಜಿ.ಬಿ.ಸಜ್ಜನ]] ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ.
 
ವಿಜಯಪುರ ಜಿಲ್ಲೆಯ [[ಇಂಡಿ]] ತಾಲೂಕಿನ [[ಹಲಸಂಗಿ]]ಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. '''ಗರತಿಯ ಹಾಡು'''(1931), '''ಜೀವನ ಸಂಗೀತ'''(1933)ಗಳಂತೆ ‘'''ಮಲ್ಲಿಗೆ ದಂಡೆ’'''(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ '''ಮಧುರಚೆನ್ನ''', '''ಪಿ.ಧೂಲಾ''', '''ಕಾಪಸೆ ರೇವಪ್ಪ''', '''ಸಿಂಪಿ ಲಿಂಗಣ್ಣ'''ನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ '''9 ನೇ ಕನ್ನಡ ಸಾಹಿತ್ಯ ಸಮ್ಮೇಳನ'''ದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.
೭,೩೦೪ ನೇ ಸಾಲು:
ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
 
=='''ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು'''==
 
ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ '''ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನ'''ವು '''ಸಿದ್ದಾಂತಿ ಶಿವಶಂಕರ ಶಾಸ್ತ್ರಿ'''ಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
೭,೩೫೩ ನೇ ಸಾಲು:
|}
 
=='''ವೃತ್ತ ಪತ್ರಿಕೆ'''==
ವಿಜಯಪುರ ಜಿಲ್ಲೆಯಲ್ಲಿ '''ವೈಭವ''' ಮತ್ತು '''ಉದಯ ಕರ್ನಾಟಕ''' ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು.
 
೭,೩೫೯ ನೇ ಸಾಲು:
* '''ಗುಮ್ಮಟ ನಗರಿ'''
 
=='''ಪ್ರಶಸ್ತಿ (ಪುರಸ್ಕಾರ)ಗಳು'''==
 
<big>'''ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು'''</big>
೭,೩೯೮ ನೇ ಸಾಲು:
* [[ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ]]
 
=='''ವಸ್ತು ಸಂಗ್ರಾಲಯಗಳು'''==
 
* '''ಪ್ರಾಚ್ಯ ವಸ್ತು ಸಂಗ್ರಾಲಯ''', ಗೊಳ್ ಗುಂಬಜ್ ಆವರಣ, ವಿಜಯಪುರ.
೭,೪೦೫ ನೇ ಸಾಲು:
* '''ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ'''
 
=='''ನಾಟ್ಯ (ನಾಟಕ) ಸಂಘಗಳು'''==
 
ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ನಾಟಕ ಸಂಘಗಳಿವೆ.
೭,೪೧೩ ನೇ ಸಾಲು:
* ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ.
 
=='''ವಿಜ್ಞಾನ'''==
 
[[ಭಾಸ್ಕರಾಚಾರ್ಯ]]ರು ವಿಜಯಪುರ ಜಿಲ್ಲೆಯ ಗಣಿತಜ್ಞರು.
೭,೪೩೩ ನೇ ಸಾಲು:
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.
 
=='''ತಂತ್ರಜ್ಞಾನ'''==
 
<big>'''ವಿಜಯಪುರ ಕೃಷಿ ಹವಾಮಾನ ಸೇವೆಗಳು'''</big>
೭,೪೪೨ ನೇ ಸಾಲು:
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ.
 
=='''ಹೋಟೆಲುಗಳು'''==
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 50ಕ್ಕೂ ಹೆಚ್ಚು ಹೋಟೆಲುಗಳಿವೆ.
{{col-begin}}
೭,೫೦೮ ನೇ ಸಾಲು:
{{col-end}}
 
=='''ಉಲ್ಲೇಖಗಳು'''==
 
<References/>
೭,೫೨೪ ನೇ ಸಾಲು:
}}
 
=='''ಬಾಹ್ಯ ಸಂಪರ್ಕಗಳು'''==
 
* [http://www.bijapur.nic.in ವಿಜಯಪುರ ಜಿಲ್ಲೆಯ ಅಧಿಕೃತ ಸರ್ಕಾರಿ ಅಂತರ್ಜಾಲ ತಾಣ]
"https://kn.wikipedia.org/wiki/ವಿಜಯಪುರ" ಇಂದ ಪಡೆಯಲ್ಪಟ್ಟಿದೆ