ಕದಂಬ ರಾಜವಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
''''''ಕದಂಬ'''''' ವಂಶವು ಕನ್ನಡದ ಮೊಟ್ಟ ಮೊದಲ [[ರಾಜ]] ವಂಶ. [[ಕನ್ನಡ|ಕನ್ನಡದಲ್ಲಿ]] ದೊರೆತಿರುವ ಮೊಟ್ಟಮೊದಲ ಶಾಸನವಾದ [[ಹಲ್ಮಿಡಿ ಶಾಸನ]]ವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.<ref name="ಮೊಟ್ಟ ಮೊದಲ" />
 
ಕದಂಬರು (ಕ್ರಿ.ಶ.೩೪೫-೫೨೫) ಇಂದಿನ [[ಉತ್ತರ ಕನ್ನಡ]] ಜಲ್ಲೆಯಜಿಲ್ಲೆಯ [[ಬನವಾಸಿ|ಬನವಾಸಿಯಿಂದ]] ಆಳುತ್ತಿದ್ದ [[ಕರ್ನಾಟಕ|ಕರ್ನಾಟಕದ]] ಒಂದು ಪುರಾತನ ರಾಜವಂಶ. ಮುಂದೆ [[ಚಾಲುಕ್ಯ]] ಮತ್ತು [[ರಾಷ್ಟ್ರಕೂಟ]] ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ [[ಗೋವಾ]] ಮತ್ತು[[ಹಾನಗಲ್]] ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ [[ಕರ್ನಾಟಕ|ಕರ್ನಾಟಕದ]] ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ [[ಮೌರ್ಯ ಸಾಮ್ರಾಜ್ಯ|ಮೌರ್ಯರು]], [[ಶಾತವಾಹನರು]] ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. [[ಕನ್ನಡ|ಕನ್ನಡವನ್ನು]] ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, [[ಕರ್ನಾಟಕ|ಕರ್ನಾಟಕದ]] ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ.
ಕ್ರಿ.ಶ. ೩೪೫ರಲ್ಲಿ [[ಮಯೂರವರ್ಮ|ಮಯೂರವರ್ಮನಿಂದ]] ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ [[ಕಾಕುಸ್ಥವರ್ಮ|ಕಾಕುಸ್ಥವರ್ಮನು]] ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ [[ತಲಕಾಡು]] ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.<ref name="ಮೊಟ್ಟ ಮೊದಲ">{{cite news|title=ಕನ್ನಡದ ಮೊಟ್ಟ ಮೊದಲ ರಾಜ ವಂಶ ಲಿಕದಂಬಳಿ|url=http://kannadamma.net/?p=77517}}</ref>
 
"https://kn.wikipedia.org/wiki/ಕದಂಬ_ರಾಜವಂಶ" ಇಂದ ಪಡೆಯಲ್ಪಟ್ಟಿದೆ