ಮರಾಠಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
ವಿಕಿಸೋರ್ಸ್ ನಿಂದ
೬೨ ನೇ ಸಾಲು:
 
 
ಮರಾಠೀ ಲಿಪಿ -
ಇದರ ಉಗಮ ನಾಗರಿ ಲಿಪಿಯಿಂದ ಆಗಿದೆ. ಅಶೋಕನ ಶಿಲಾಲೇಖದ ಬ್ರಾಹ್ಮೀ, ಸಾತವಾಹನ, ಕ್ಷಹರಾತ ಮೊದಲಾದವರ ಶಿಲಾಲೇಖಗಳಲ್ಲಿಯ ಬ್ರಾಹ್ಮೀ, ವಾಕಟಾಕರ ಕಾಲದ ಪೇಟಿಕಾ-ಶೀಷಕ ಹಾಗೂ ಉತ್ತರ ಬ್ರಾಹ್ಮೀ ಲಿಪಿಯ ನಾಗರೀ ರೂಪಗಳನ್ನು ಆಧರಿಸಿ ಈ ಲಿಪಿ ಜನ್ಮ ತಳೆಯಿತು. ಸುಮಾರು 10ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆ ಮತ್ತು ಬರೆಹ ಜನ್ಮ ತಾಳಿದವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಪಾದ ಪಕ್ಕದಲ್ಲಿರುವ ಶಿಲಾಲೇಖ ಬರೆಹ (ಸುಮಾರು 982) ಚಾವುಂಡರಾಜೇಂ ಕರವೀಯಲೇ ಎಂಬುದು ಮರಾಠೀ ಭಾಷೆಯ ಪ್ರಾಚೀನ ಬರೆಹವೆಂದು ನಂಬಲಾಗಿತ್ತು. ಈ ಶಿಲಾಲಿಪಿ 12ನೆಯ ಶತಮಾನದ್ದೆಂದು ಎಚ್. ಜಿ. ತುಳಪುಳ ಮತ್ತು ಎ.ಎಸ್. ಆಳ್ತೆಕರ್ ಅವರು ನಿರ್ಧರಿಸಿದ್ದಾರೆ. ಶಿಲಹಾರಕೇಶಿದೇವನ ಅಕ್ಷೀಗ್ರಾಮದ ಶಿಲಾಲೇಖವೇ(1012) ಪ್ರಾಚೀನಬರೆಹವೆಂದು ತುಳಪುಳೆ ಅಭಿಪ್ರಾಯ ಪಟ್ಟಿದ್ದಾರೆ. ಎಮ್ ಜಿ. ದೀಕ್ಷಿತ ಎಂಬುವರು ಇದರ ಕಾಲ 1210 ಎಂದಿದ್ದಾರೆ. 1060ರ ದಿವೇ ಅಗರ್ ತಾಮ್ರಪಟ್ಟಿಕೆಯೇ ಪುರಾತನ ಶಿಲಾಲೇಖ ಎಂಬುದಾಗಿ ಅಭಿಪ್ರಾಯ ಪಟ್ಟಿರುವವರೂ ಉಂಟು. ಮುಕುಂದರಾಜನ ವಿವೇಕ ಸಿಂಧು ಎಂಬುದು ಪ್ರಾಚೀನ ಉಪಲಬ್ಧ ಗ್ರಂಥ(12ನೆಯ ಶತಮಾನ). ಅನಂತರದ್ದು ಜ್ಞಾನೇಶ್ವರಿ (1290), ತರುವಾಯದ್ದು ಮಹಾನುಭಾವ ಸಾಹಿತ್ಯ(13ನೆಯ ಶತಮಾನ). ಈ ಲಿಪಿ ಬಳಕೆ ದೇವಗಿರಿಯ ಯಾದವರ ಕಾಲದಲ್ಲಿ ಪ್ರಾಚುರ್ಯಕ್ಕೆ ಬಂದಿತ್ತು. ಇದನ್ನು ಪೃಷ್ಠಮಾತ್ರಾ ಶಿರೋಮಾತ್ರಾ ಮತ್ತು ಮೋಡಿ ಎಂಬುದಾಗಿ ವರ್ಗೀಕರಿಸಲಾಗಿದೆ. ಮರಾಠೀ ಮೊತ್ತ ಮೊದಲ ಬರಹಗಳನ್ನು ಪೃಷ್ಠ ಮಾತ್ರಾಶಿರೋಮಾತ್ರಾ ಇಲ್ಲವೇ ಇವೆರಡು ಮಿಶ್ರಣ ರೂಪದಲ್ಲಿ ಬರೆಯಲಾಗಿದೆ. ಕನ್ನಡ ಲಿಪಿಯಲ್ಲೂ ಬರೆದಿರುವ ನಿರ್ದೇಶನ ಉಂಟು ಉದಾಹರಣೆಗೆ ಶಾ.ಶ. 1271ರ ಕ್ರಿಶ. 1349) ವಿಮ್ನಮಂತ್ತಿಯ ಖಾಟೇಗ್ರಾಮದ ಮರಾಠೀ ತಾಮ್ರಪಟ.
 
ಶತಮಾನಗಳು ಕಳೆದಂತೆ ಈ ಲಿಪಿಯ ಒಂದೊಂದು ಅಕ್ಷರವೂ ತನ್ನ ಸ್ವರೂಪದಲ್ಲಿ ವ್ಯತ್ಯಾಸ ಪಡೆದಿದೆ. ಆ, ಇ, ಏ, ಓ, ಗಮನಾರ್ಹ ಬೆಳವಣಿಗೆ ಪಡೆದ ಅಕ್ಷರಗಳು (ಇ) ಮತ್ತು ತ್ರಿಕೋನಾಕೃತಿಯ ಏ ಅಕ್ಷರ ಯಾವುದಾದರೂ ದಾಖಲೆಯಲ್ಲಿದ್ದಾರೆ ಅವು ಲಿಪಿಯ ಪ್ರಾಚೀನತೆಯನ್ನು ಸೂಚಿಸುತ್ತವೆ.
ಚ,ಛ,ಜ,ಣ,ಥ,ಧ,ಬ.ಭ,ರ,ಸ ಅಕ್ಷರಗಳ ಚಾಕ್ಷುಷರೂಪಗಳು ಪ್ರಸ್ತುತ ಬಳಕೆಯಲ್ಲಿರುವ ಲಿಪಿಗೆ ಹತ್ತಿರವೇ ಆದ ರೂಪಗಳನ್ನು ಪಡೆದಿದ್ದುವು,ಶ-ಸ,ಲ-ಳ, ಇವು ಉಚ್ಚಾರಣಾ ಸಾಮ್ಯದಿಂದ ಒಂದರ ಸ್ಥಳದಲ್ಲಿ ಇನ್ನೊಂದು ಸಹಜವಾಗಿ ಪ್ರಯೋಗವಾಗುತ್ತಿದ್ದುವು. ಚ-ವ, ಪ-ಯ, ಧ-ಬ, ಉ-ಡ, ಇವು ಚಾಕ್ಷುಷ ರೂಪಸಾದೃಶ್ಯ ಪಡೆದಿದ್ದುವು. ಅನುಸ್ವಾರವನ್ನು ಅರ್ಧಚಂದ್ರಾಕೃತಿಯಲ್ಲಿ ಬರೆಯಲಾಗುತ್ತಿತ್ತು.
 
ಕ್ರಿ.ಶ. ಸು. 14-15ನೆಯ ಶತಮಾನದಲ್ಲಿ ಮೋಡೀ ಲಿಪಿ ಬಳಕೆಗೆ ಬಂದಿರಬಹುದು. ಬಹುಮನೀ ಸುಲ್ತಾನ್ ಮುಜಾಹಿದ್ ದೊರೆಯ ಕಾಲದ(1375-78) ಒಂದು ತಾಮ್ರಪಟ ಸದ್ಯ ಪ್ರಾಚೀನ ದಾಖಲೆ. ಆಂಧ್ರಪ್ರದೇಶ ಸರ್ಕಾರದ ಪುರಾತತ್ತ್ವ
<poem>
ಅ ಆ ಇ ಈ ಉ
ಊ ಋ ಏ ಐ ಓ
ಔ ಅಂ ಆಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ
ಷ ಸ ಹ ಳ ಕ್ಷ
ಙÐ ಶ್ರ
</poem>
ಇಲಾಖೆಯಲ್ಲಿರುವ ಈ ದಾಖಲೆಯನ್ನು ಭುಸಾರೆ ಸಂಪಾದಿಸಿದ್ದಾರೆ. ಮೋಡೀಲಿಪಿಯನ್ನು ಹೇಮಾದ್ರಿ ಮಂತ್ರಿ (13ನೆಯ ಶತಮಾನ) ಬಳಕೆಯಲ್ಲಿ ತಂದನೆಂದು ಒಂದು ವದಂತಿ. ತ್ವರಿತವಾಗಿ ಬರೆಯಲು ಮೋಡೀ ಲಿಪಿಯನ್ನು ಬಳಸುತ್ತಿದ್ದುದರಿಂದ ಚಿರಸ್ಮಾರಕಗಳಾದ ಶಿಲಾಲೇಖಗಳಲ್ಲಿ ಅದನ್ನು ಬಳಸಲಿಲ್ಲವೆಂದು ತೋರುತ್ತದೆ. ಆದರೂ ಅದರ ಪ್ರಭಾವ ಬರೆವಣಿಗೆಯ ಮೇಲೆ ಸಾಕಷ್ಟು ಆಗಿದೆ. ಪಂಕ್ತಿಯ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ನಿಲ್ಲಿಸದೆ ಏಕಪ್ರಕಾರವಾಗಿ ಬರೆದುಕೊಂಡುಹೋಗುವ ಒಂದು ಕ್ಲಿಷ್ಟ ಬರೆವಣಿಗೆ ಮೋಡೀ ಲಿಪಿಯದು ಎನ್ನಬಹುದು.
(ಎಸ್.ಎಸ್.ಜೆ.ಎ.)
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
 
"https://kn.wikipedia.org/wiki/ಮರಾಠಿ" ಇಂದ ಪಡೆಯಲ್ಪಟ್ಟಿದೆ