ಒರಿಯಾ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಒರಿಯ ಸಾಹಿತ್ಯ''': ವಿಪುಲವಾಗಿ ಬೆಳೆದಿರುವ ಒರಿಯ [[ಸಾಹಿತ್ಯ]]ಚರಿತ್ರೆಯನ್ನು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಸಂಗ್ರಹವಾಗಿ ನಿರೂಪಿಸಿ ಅದರಲ್ಲಿನ ಪ್ರಧಾನ ಘಟ್ಟಗಳನ್ನು ಪರಿಚಯ ಮಾಡಿಕೊಡುವುದೇ ಈ ಲೇಖನದ ಉದ್ದೇಶ. 15ನೆಯ ಶತಮಾನಕ್ಕೂ ಹಿಂದೆ ಅಂದರೆ ಸಾರಳಾದಾಸನಿಗಿಂತ ಹಿಂದೆ ಒರಿಯ ಸಾಹಿತ್ಯದ ಸ್ವರೂಪ ಹೇಗಿತ್ತೆಂಬುದನ್ನು ಸ್ವಲ್ಪಮಟ್ಟಿಗಾದರೂ ಅರಿತುಕೊಳ್ಳಲು ಯಾವ ಐತಿಹಾಸಿಕ ಆಧಾರಗಳೂ ದೊರೆತಿಲ್ಲ. ಆದರೂ ಸಾರಳಾದಾಸನ ಕವಿತ್ವದಲ್ಲಿ ವ್ಯಕ್ತವಾಗುವ ಪರಿಣತಿಯನ್ನು ನೋಡಿದರೆ ಆತನಿಗಿಂತ ಹಿಂದೆಯೂ ಸಾಹಿತ್ಯ ಬಹಳ ಚೆನ್ನಾಗಿ ಬೆಳೆದಿರಬೇಕೆಂಬುದನ್ನು ಸಯುಕ್ತಿಕವಾಗಿ ಊಹಿಸಬಹುದು. ಚೌತಿಸಾಢಗ. ಢಮಾಳಿ, ದಾಕವಚನ ಮತ್ತು ಇತರ ಜಾನಪದ ಸಾಹಿತ್ಯ ಪ್ರಕಾರಗಳು ಅವನ ಕಾಲಕ್ಕೆ ಬಹು ಹಿಂದೆನಯೇ ರೂಪುಗೊಂಡು ವಿಕಾಸವಾಗಿದ್ದವೆನ್ನಬಹುದು. ಒರಿಯ ಕವಿತೆಯ ಹಳೆಯ ರೂಪವೊಂದನ್ನು ಪ್ರದರ್ಶಿಸುವ ಒಂದೇ ಒಂದು ಪ್ರಾಚೀನ ಗ್ರಂಥವೆಂದರೆ ಬೌದ್ಧಗಾನ ಓ ದೋಹ. ಎಂಬತ್ತನಾಲ್ಕು ಕವಿಗಳಿಂದ ರಚಿತವಾಗಿದ್ದು ಬೌದ್ಧಧರ್ಮಕ್ಕೆ ಸಂಬಂಧಿಸಿದ ಭಾವಗೀತೆಗಳು ಇಲ್ಲಿ ಸಂಕಲಿತವಾಗಿವೆ. ಇವರು ಬೌದ್ಧತಾಂತ್ರಿಕ ಪಂಥಕ್ಕೆ ಸೇರಿದವರು. ಈ ಭಾವಗೀತೆಗಳ ಕಾಲ 7-12ನೆಯ ಶತಮಾನದವರೆಗೆ ಹರಡಿದೆ. ಇಲ್ಲಿನ ಭಾಷೆ ಅಪಭ್ರಂಶದ ಒಂದು ಮೃದುರೂಪ. ಮಧ್ಯಯುಗದ ಮತ್ತು ಆಧುನಿಕ ಕಾಲದ ಭಾಷೆಗಿಂತ ತೀರ ಭಿನ್ನವಾದದ್ದು. ಇಲ್ಲಿನ ಗೀತೆಗಳನ್ನು ಹಳೆಯ ಬಂಗಾಳಿ ಮತ್ತು [[ಮೈಥಿಲಿ|ಮೈಥಿಲೀ]] ಭಾಷೆಗಳ ಭಾವಗೀತೆಗಳೆಂದು ಪಂಡಿತರು ಹೇಳುವುದುಂಟು. ಇವು ಪ್ರಾಚೀನ ಒರಿಯ ಭಾವಗೀತೆಗಳೇ ಎಂದು ಡಾ. ಕಾರ್ ಗುರುತಿಸಿದ್ದಾರೆ (1950). ಈ ಗ್ರಂಥದಷ್ಟೆ ಪ್ರಾಚೀನ ಭಾಷೆಯಲ್ಲಿ ರಚಿತವಾದ ಶಿಶುವೇದವೆಂಬ ಮತ್ತೊಂದು ಗ್ರಂಥ ಬೆಳಕಿಗೆ ಬಂದಿದೆ. ಐತಿಹಾಸಿಕ ಸಾಕ್ಷ್ಯಗಳ ಕೊರತೆಯಿಂದ ಇದರ ಕಾಲವನ್ನು ನಿಷ್ಕೃಷ್ಟವಾಗಿ ತಿಳಿಯಲಾಗಿಲ್ಲ. ಆದರೂ ಇದು ಬೌದ್ಧಗಾನ ಓ ದೋಹಕ್ಕಿಂತ ಈಚಿನದೆಂದೂ ಸಾರಳಾದಾಸನಿಗೆ ಪುರ್ವದ್ದೆಂದೂ ಸಾಮಾನ್ಯವಾಗಿ ಪರಿಗಣಿತವಾಗಿದೆ.
 
ಕೆಲವು ಗ್ರಂಥಗಳನ್ನು ಸಾರಳಾದಾಸನಿಗಿಂತ ಪುರ್ವದವೆಂದು ಹೇಳಲು ಸರಿಯಾದ ಐತಿಹಾಸಿಕ ಆಧಾರಗಳು ಇಲ್ಲವಾದ್ದರಿಂದ ಸದ್ಯಕ್ಕೆ ಇಷ್ಟು ಹೇಳಬಹುದು. ಆ ಕಾಲದಲ್ಲಿ ಸಂಸ್ಕೃತ ಸಾಹಿತ್ಯದ ಪ್ರಭಾವ ಒರಿಯದಲ್ಲಿ ಪ್ರಬಲವಾಗಿತ್ತಲ್ಲದೆ ಪ್ರಾಂತೀಯ ಸಾಹಿತ್ಯ ಜಾಗರೂಕತೆಯಿಂದ ತನ್ನ ಸ್ವರೂಪವನ್ನು ಪಡೆಯುತ್ತಿತ್ತು. ಮೇಲೆ ಹೇಳಿದ ಗ್ರಂಥಗಳು ಅಪಭ್ರಂಶದ ಕಾಲ ಮುಗಿಯುತ್ತಿದ್ದಂತೆ ಹುಟ್ಟಿದವೆನ್ನಬಹುದು.
"https://kn.wikipedia.org/wiki/ಒರಿಯಾ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ