ಚಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಚಿತ್ರ:Antarctic iceberg, 2001 -2.jpg|thumb|right|300px|ಸಾಮಾನ್ಯವಾಗಿ ಚಳಿಯೊಂದಿಗೆ ಸಂಬಂಧಿಸಲಾದ ಹಿಮ...
 
No edit summary
೧ ನೇ ಸಾಲು:
[[ಚಿತ್ರ:Antarctic iceberg, 2001 -2.jpg|thumb|right|300px|ಸಾಮಾನ್ಯವಾಗಿ ಚಳಿಯೊಂದಿಗೆ ಸಂಬಂಧಿಸಲಾದ ಹಿಮಗುಡ್ಡ]]
 
'''ಚಳಿ''' ವಿಶೇಷವಾಗಿ ವಾತಾವರಣದಲ್ಲಿ ಕಡಿಮೆ [[ತಾಪಮಾನ]]ದ ಇರುವಿಕೆ.<ref>{{cite web|last=Hansen|first=James E.|title=GISS Surface Temperature Analysis (GISTEMP)|url=http://data.giss.nasa.gov/gistemp/|work=[[National Aeronautic and Space Administration]]|publisher=[[Goddard Institute for Space Studies]]|accessdate=22 February 22, 2016|authorlink=James Hansen}}</ref> ಸಾಮಾನ್ಯ ಬಳಕೆಯಲ್ಲಿ, ಚಳಿಯು ಹಲವುವೇಳೆ ಒಂದು ವ್ಯಕ್ತಿನಿಷ್ಠ ಗ್ರಹಿಕೆ. ತಾಪಮಾನದ ಕೆಳ ಎಲ್ಲೆಯನ್ನು [[ನಿರಪೇಕ್ಷ ಶೂನ್ಯ]]ವೆಂದು ಕರೆಯಲಾಗುತ್ತದೆ, ಮತ್ತು ಒಂದು ಸಂಪೂರ್ಣ ಉಷ್ಣಬಲ ತಾಪಮಾನ ಮಾಪಕವಾದ ಕೆಲ್ವಿನ್ ಮಾಪಕದಲ್ಲಿ ಇದನ್ನು 0.00 ಕೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಸೆಲ್ಷಿಯಸ್ ಮಾಪಕದಲ್ಲಿ −273.15 °C ಮತ್ತು ಫ಼ಾರನ್‍ಹೈಟ್ ಮಾಪಕದಲ್ಲಿ −459.67 °F ಗೆ ಅನುರೂಪವಾಗಿದೆ.
 
[[ಉಷ್ಣ ಶಕ್ತಿ]]ಯು ಭೌತದ್ರವ್ಯದ ಕಣ ಘಟಕಗಳ ಯಾದೃಚ್ಛಿಕ ಚಲನೆಯ [[ಚಲನ ಶಕ್ತಿ]]ಯಾಗಿದೆ. ತಾಪಮಾನವು ಒಂದು ವಸ್ತು ಅಥವಾ ದ್ರವ್ಯದ ನಮೂನೆಯು ಹಿಡಿದಿಟ್ಟುಕೊಂಡಿರುವ ಉಷ್ಣ ಶಕ್ತಿಗೆ ಸಂಬಂಧಿಸಿರುವುದರಿಂದ, ಒಂದು ವಸ್ತು ಹೆಚ್ಚು ತಂಪಾಗಿದ್ದಾಗ ಕಡಿಮೆ ಉಷ್ಣ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಹೆಚ್ಚು ಬಿಸಿಯಾಗಿದ್ದಾಗ ಹೆಚ್ಚು ಉಷ್ಣ ಶಕ್ತಿಯನ್ನು ಹೊಂದಿರುತ್ತದೆ. ಒಂದು ವ್ಯವಸ್ಥೆಯನ್ನು ನಿರಪೇಕ್ಷ ಶೂನ್ಯಕ್ಕೆ ತಂಪಾಗಿಸುವುದು ಸಾಧ್ಯವಾಗಿದ್ದರೆ, ದ್ರವ್ಯದ ನಮೂನೆಯಲ್ಲಿನ ಕಣಗಳ ಎಲ್ಲ ಚಲನೆಯು ನಿಂತುಬಿಡುತ್ತದೆ ಮತ್ತು ಶಾಸ್ತ್ರೀಯ ಅರ್ಥದಲ್ಲಿ ಅವು ಸಂಪೂರ್ಣ ವಿಶ್ರಾಂತಿಯಲ್ಲಿರುತ್ತವೆ. ಆ ವಸ್ತುವು ಶೂನ್ಯ ಉಷ್ಣ ಶಕ್ತಿಯನ್ನು ಹೊಂದಿದೆ ಎಂದು ವಿವರಿಸಲಾಗುತ್ತದೆ. ಆದರೆ, ಸೂಕ್ಷ್ಮದರ್ಶಕೀಯವಾಗಿ ಕ್ವಾಂಟಮ್ ಯಂತ್ರಶಾಸ್ತ್ರದ ವಿವರಣೆಯಲ್ಲಿ, ಅನಿಶ್ಚಿತತೆ ತತ್ವದ ಕಾರಣ ಭೌತದ್ರವ್ಯವು ನಿರಪೇಕ್ಷ ಶೂನ್ಯದಲ್ಲಿ ಇನ್ನೂ ಶೂನ್ಯ ಬಿಂದು ಶಕ್ತಿಯನ್ನು ಹೊಂದಿರುತ್ತದೆ.
"https://kn.wikipedia.org/wiki/ಚಳಿ" ಇಂದ ಪಡೆಯಲ್ಪಟ್ಟಿದೆ