ಕನ್ನಡದಲ್ಲಿ ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಕನ್ನಡ ಜನಪದ ಸಾಹಿತ್ಯದ ಬಹು ಮುಖ್ಯ ಪ್ರಕಾರಗಳಲ್ಲೊಂದು. ಗಾದೆ ಎಂಬ ಪದ ಸಂಸ್ಕೃತದ ಗಾಥಾ ಎಂಬುದರ ನೇರ ತದ್ಭವವಾಗಿರಬಹುದು. ಇಲ್ಲವೆ ಪ್ರಾಕೃತದ ‘ಗಾಹೆ’ ಎಂಬ ಪದದ ರೂಪಾಂತರವಾಗಿರಬಹುದು. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಲೋಕೋಕ್ತಿ, ಪ್ರಾಚೀನೋಕ್ತಿ, ಸಾರೋಕ್ತಿ, ಉದ್ಧರಣೆ, ಹೇಳಿಕೆ, ವಿಧಿ, ನಿಯಮ, ಪ್ರಮಾಣ, ನಾಣ್ಣುಡಿ ಮುಂತಾದ ಪದಗಳು ಬಳಕೆಯಲ್ಲಿದ್ದರೂ ಗಾದೆ ಶಬ್ದವೇ ಹೆಚ್ಚು ಪ್ರಚಾರದಲ್ಲಿದೆ.
 
==ಗಾದೆಯ ಲಕ್ಷಣಗಳು==
ಗಾದೆಯ ಲಕ್ಷಣಗಳನ್ನು ಒಂದೇ ಮಾತಿನಲ್ಲಿ ಸೂತ್ರೀಕರಿಸಿ ಹೇಳುವುದು ಕಷ್ಟಸಾಧ್ಯವಾದ ಕೆಲಸ. ಏಕೆಂದರೆ ಗಾದೆಯ ವಸ್ತುವ್ಯಾಪ್ತಿ ಅನಂತವಾದುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಗಾದೆ ತನ್ನೊಳಗುಮಾಡಿಕೊಳ್ಳದ ವಿಷಯಗಳಿಲ್ಲ. ಅದು ಒಂದು ರೀತಿಯಲ್ಲಿ ಜನಸಾಮಾನ್ಯರ ವಿಶ್ವಕೋಶ. ಪರಂಪರಾನುಗತವಾಗಿ ಬರುವ ಜ್ಞಾನದಿಂದ ಯಾರೋ ಒಬ್ಬ ಅನುಭವಿ ವಿವೇಕಿ ನುಡಿದ ಸಾಮಯಿಕ ಸೂಳ್ನುಡಿ ಜನತೆಯ ಅಂಗೀಕಾರ ಮುದ್ರೆಯನ್ನು ಪಡೆದು, ಪರಿಮಿತ ವಲಯದಲ್ಲಿ ಮೊದಲು ಸಲುವಳಿ ಪಡೆಯುತ್ತದೆ. ಅನಂತರ ಅದರ ಸತ್ತ್ವಕ್ಕೂ ಸ್ವಾರಸ್ಯಕ್ಕೂ ಸತ್ಯತೆಗೂ ಮಾರುಹೋಗುವಂಥ ಇತರ ಜನರೂ ಅದನ್ನು ಬಳಸತೊಡಗುತ್ತಾರೆ. ಹೀಗಾಗಿ ಅದು ಒಂದು ಸಮಾಜದ ಸಾರ್ವಜನಿಕ ಸ್ವತ್ತಾಗಿ ಚಲಾವಣೆಯಾಗುತ್ತದೆ. ಸಂಕ್ಷಿಪ್ತತೆ ಅಥವಾ ಸಂಕೀರ್ಣತೆ, ವಿವೇಚನೆ, ತೀಕ್ಷ್ಣತೆ ಅಥವಾ ಒಗಚುತನ ಹಾಗೂ ಜನಪ್ರಿಯತೆ ಗಾದೆಯ ನಾಲ್ಕು ಪ್ರಮುಖ ಲಕ್ಷಣಗಳು. ಪ್ರತಿಯೊಂದು ಗಾದೆಯೂ ಒಂದು ರೀತಿಯಲ್ಲಿ ಬಿಡಿ ಕವಿತೆ. ಅದರಲ್ಲಿ ಛಂದೋಬದ್ಧತೆ, ಪ್ರಾಸಾನುಪ್ರಾಸ ಆಲಂಕಾರಿಕ ಅಬಿsವ್ಯಕ್ತಿ, ಕಾವ್ಯದ ಬಿಗುಪು, ಬಂಧುರತೆ, ಸೂಚ್ಯಭಾವ ವ್ಯಂಗ್ಯವೈಚಾರಿಕತೆಗಳು ಸಹಜವಾಗಿ ರೂಪುಗೊಂಡಿರುತ್ತವೆ. ಸಾಹಿತ್ಯದ ಸಮಸ್ತ ಚಟುವಟಿಕೆಗಳನ್ನೂ ಸೃಜನಾತ್ಮಕ ಶಕ್ತಿಯನ್ನೂ ಒಳಗೊಂಡಿರುವ ಗಾದೆಯ ಭಾಷೆ ಸಾಂಕೇತಿಕ. ಭಾವ ಬಹುಮಟ್ಟಿಗೆ ರೂಪಕ. ಇವುಗಳಲ್ಲದೆ ನಾಟಕೀಯತೆ ಹಾಗೂ ಸಮತೋಲ ಗುಣಗಳೂ ಗಾದೆಯಲ್ಲಿ ಗೋಚರಿಸುತ್ತವೆ. ಗಾದೆಗಳು ಮಾನವಸ್ವಭಾವಕ್ಕೆ ಒಡ್ಡಿದ ಪ್ರತೀಕಗಳಾಗಿವೆ; ಸಮಾಜದ ಪ್ರತಿಬಿಂಬಗಳಾಗಿವೆ; ಸಂಸ್ಕೃತಿಯ ಪ್ರತಿನಿದಿಗಳಾಗಿವೆ. ಏಕೆಂದರೆ ಅವುಗಳಲ್ಲಿ ಬದುಕಿನ ಎಲ್ಲ ಕ್ಷೇತ್ರಗಳ ಅನುಭವಗಳಿಗೂ ಅಬಿವ್ಯಕ್ತಿ ದೊರೆತಿದೆ. ರೀತಿನೀತಿ, ನಂಬಿಕೆ, ನಡಾವಳಿ, ಆಚಾರವಿಚಾರ ಗಳೆಲ್ಲವನ್ನೂ ಅವು ಒಳಗೊಂಡಿವೆ. ‘ಗಾದೆ ವೇದಕ್ಕೆ ಸಮ’ ಎಂಬ ಗಾದೆಯೇ ಅವುಗಳ ಅಗ್ಗಳಿಕೆಯನ್ನು ಎತ್ತಿ ಹೇಳುತ್ತದೆ. ‘ಊಟಕ್ಕೆ ಮೊದಲು ಉಪ್ಪಿನಕಾಯಿ; ಮಾತಿಗೆ ಮೊದಲು ಗಾದೆ’ ಎಂಬ ಗಾದೆಯೇ ಗಾದೆಗಳ ತೀವ್ರಾವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಗಾದೆಯಿಲ್ಲದ ಭಾಷೆಯಿಲ್ಲ; ಭಾಷೆಯಿಲ್ಲದ ಜನಾಂಗವಿಲ್ಲ. ಗಾದೆಗಳ ಮಹತ್ತ್ವವನ್ನು ಅರಿತುಕೊಂಡ; ಯಾವ ವ್ಯಕ್ತಿಯೂ ಅವುಗಳ ಸೌಂದರ್ಯ, ಸಾರ್ಥಕತೆ, ಜೀವಂತಿಕೆಗಳನ್ನು ಮೆಚ್ಚದಿರಲಾರ. ಗಾದೆ ಜೀವನಕ್ಕೆ ಕೇವಲ ವ್ಯಂಜಕ ಮನರಂಜಕ ಸೂಕ್ತಿ ಮಾತ್ರವಲ್ಲ; ಅದು ಸಾರ್ಥಕ ಜೀವನಸೂತ್ರ ಹಾಗೂ ವಿವೇಕದ ದಾರಿದೀಪ. ಗಾದೆ ಬೋದಿಸುವ ಸನ್ಮಾರ್ಗವಿಡಿದು ನಡೆದರೆ ಒಬ್ಬನ ಬಾಳು ಭವ್ಯವೂ ಬೆಲೆಯುಳ್ಳದ್ದೂ ಆಗುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಗಾದೆಗಳಿಗೆ ಎಂದಿನಿಂದಲೂ ಮಹತ್ತ್ವ ಸಲ್ಲುತ್ತ ಬಂದಿದೆ. ಗಾದೆಗಳು ವಿದ್ಯಾವಂತರಲ್ಲದ ಆದರೆ ಆಳವಾದ ಜೀವನಾನುಭವವನ್ನುಳ್ಳ ಜನಪದರಿಗೆ ತಮ್ಮ ಅಬಿಪ್ರಾಯಗಳನ್ನು ಮನಮುಟ್ಟುವಂತೆ ಹೇಳಲು ತುಂಬ ಸಹಕಾರಿಯಾಗಿವೆ.