ವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
{{ಚುಟುಕು}} ತೆಗೆದುಹಾಕಿದೆ |
ಚು ಕೊಂಡಿಗಳು |
||
೧೦ ನೇ ಸಾಲು:
== ವಾರದಲ್ಲಿ ಏಳು ದಿನಗಳು ಏಕೆ ==
ಪ್ರಾಚೀನ ನಾಗರಿಕತೆಯಲ್ಲಿ ಗಗನದೃಶ್ಯಗಳನ್ನು ಅವಲೋಕಿಸಿದ ಅಂದಿನ ಮಾನವ ಮೊದಲು ಭಯವಿಸ್ಮಿತನಾದ. ಮುಂದೆ ಕುತೂಹಲ ತಳೆದ. ಅನ್ವೇಷಕ ಪ್ರವೃತ್ತಿಯಿಂದ ಅವನ್ನು ವೀಕ್ಷಿಸಿದ. ಅವನಿಗೆ ಕಂಡ ನೋಟವಿದು: [[ಚಂದ್ರ]] ಅವನ ಗಡಿಯಾರ; 12 [[ಅಮಾವಾಸ್ಯೆ]] ಅಥವಾ [[ಹುಣ್ಣಿಮೆ]] ಸಂದಾಗ ಭೂಮಿಯಲ್ಲಿ
ಎರಡು ಕ್ರಮಾಗತ ಅಮಾವಾಸ್ಯೆಗಳ ನಡುವಿನ ಅವಧಿ ಸು. 30 ದಿವಸಗಳ ಒಂದು [[ತಿಂಗಳು]]. ತಿಂಗಳಿಗೆ ಎರಡು ಪಕ್ಷಗಳು : ಅಮಾವಾಸ್ಯೆಯಿಂದ ಹುಣ್ಣಿಮೆ ತನಕ
ವರ್ಷ, ತಿಂಗಳು ಮತ್ತು ಪಕ್ಷ ಎಂಬ ನೈಸರ್ಗಿಕ ಕಾಲಮಾನಕಗಳು ಈ ತೆರನಾಗಿ ರೂಢಿಗೆ ಬಂದುವು. ಆದರೆ ಇವು ವರ್ಷವನ್ನು ನಿಖರವಾಗಿ ಅಳೆಯುವುದಿಲ್ಲ ಎಂಬ ಸಂಗತಿ ಬೇಗನೆ ಪ್ರಕಟವಾಯಿತು. ಏಕೆಂದರೆ
ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ತನಕ ಸಲ್ಲುವ ಅವಧಿಯೇ ದಿವಸ. ನಾಗರಿಕತೆ ಅಭಿವರ್ಧಿಸಿದಂತೆ ಧಾರ್ಮಿಕಾಚರಣೆ, ಕೃಷಿಕಾರ್ಯ, ವಾಣಿಜ್ಯ, ವ್ಯವಹಾರ ಮುಂತಾದ ಹಲವು ಹನ್ನೊಂದು ಚಟುವಟಿಕೆಗಳಿಗೆ ಅನುಕೂಲವಾಗುವಂತೆ ದಿವಸಗಳ ನಿರ್ದಿಷ್ಟ ಗುಂಪನ್ನು ಪರಿಗಣಿಸುವುದು ಅಗತ್ಯವಾಯಿತು. ಉದಾಹರಣೆಗೆ ಪ್ರಾಚೀನ [[ಈಜಿಪ್ಟ್|ಈಜಿಪ್ಟಿನಲ್ಲಿ]] 10 ದಿವಸಗಳ ದಾಶಮಿಕವಾರ (ದಶಾಹ) ಬಳಕೆಯಲ್ಲಿತ್ತು. ವೈದಿಕರು ಅಮಾವಾಸ್ಯೆ, ಪೌರ್ಣಮೀ ಮತ್ತು ಇತರ ಕೆಲವು ತಿಥಿಗಳನ್ನು ಅನಧ್ಯಯನ ದಿನಗಳೆಂದು ಅಂಗೀಕರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಇವರದು ಪಾಕ್ಷಿಕವಾರ. ಹೀಗೆ ಕೆಲಸದ ದಿನಗಳು, ರಜಾದಿನಗಳು ಮತ್ತೆ ಕೆಲಸದ ದಿನಗಳು ಎಂಬ ಸ್ಥೂಲ ಚಕ್ರ ರೂಢಿಗೆ ಬಂತು. ಅಂದರೆ ಮಾನವ ತನ್ನ ಕೆಲಸದ ಅವಧಿಯನ್ನು ನಿಗದಿಗೊಳಿಸುವುದು ಅಗತ್ಯವಾಯಿತು. ವೈದಿಕರ ಪಾಕ್ಷಿಕವಾರವಾಗಲೀ ಈಜಿಪ್ಟಿನವರ ದಶಾಹವಾಗಲೀ ಆತನಿಗೆ ತುಸು ದೀರ್ಘವೆನ್ನಿಸಿರಬೇಕು. ಅದೇ ರೀತಿ [[ಚೀನಾ|ಚೀನೀಯರ]] ಪಾಂಚಮಿಕವಾರ ವ್ಯಾವಹಾರ್ಯವೆನಿಸಲಿಲ್ಲ. ಹೀಗೆ ನೂತನ ವಾರವೊಂದರ ಪ್ರವರ್ತನೆಗೆ ಕಾಲ ಪಕ್ವವಾಯಿತು. ಕ್ರಿಸ್ತಪೂರ್ವ 8ನೆಯ ಶತಮಾನದಲ್ಲಿ ಬ್ಯಾಬಿಲೋನಿಯದಲ್ಲಿದ್ದ [[ಕಾಲ್ಡೀಯನ್]] ಜ್ಯೋತಿಶ್ಶಾಸ್ತ್ರಜ್ಞರು 7 ದಿವಸಗಳ ವಾರವನ್ನೂ 24 ಗಂಟೆಗಳ ದಿವಸವನ್ನೂ ಬಳಕೆಗೆ ತಂದ ಮೊದಲಿಗರು.
==ಏಳು ದಿನಗಳಿಗೂ ಆಕಾಶಕಾಯಗಳಿಗೂ ನಡುವಿನ ಸಂಬಂಧ ==
ಪಕ್ಷಾರ್ಧದ ಅವಧಿ ಸು. 7 ದಿವಸಗಳಾಗಿದ್ದುದೂ ಆಕಾಶದಲ್ಲಿ 7 ಚರಕಾಯಗಳು ಗೋಚರವಾದುದೂ ಯೋಗಾಯೋಗ. ಸ್ಥಿರನಕ್ಷತ್ರ ಚಿತ್ರಗಳ ಮುನ್ನೆಲೆಯಲ್ಲಿ [[ಬುಧ]], [[ಶುಕ್ರ]], [[ಕುಜ]], [[ಗುರು]], [[ಶನಿ]] ಎಂಬ 5 ಗ್ರಹಗಳನ್ನೂ ಸೂರ್ಯ, ಚಂದ್ರ ಎಂಬ 2 ಗಗನ ದೀಪಗಳನ್ನೂ ಅವರು ಗುರುತಿಸಿದರು. ಈ 7 ಕಾಯಗಳ ಅಧಿಪತಿಗಳು ದೇವರುಗಳೆಂದೂ ಇವರು ಮಾನವನ ಭೂತವರ್ತಮಾನಭವಿಷ್ಯತ್ತುಗಳನ್ನು ನಿರ್ಣಯಿಸಬಲ್ಲ ಸರ್ವಶಕ್ತರೆಂದೂ ನಂಬಿದರು. ಅಂದಮೇಲೆ ಈ ದೇವರುಗಳನ್ನು ಪೂಜಿಸುವುದು ಮಾನವನ ಕರ್ತವ್ಯ. ಹೀಗೆ ಅವರು 7 ದಿವಸಗಳ ವಾರಚಕ್ರ (ಸಪ್ತಾಹ) ತೊಡಗಿ ಒಂದೊಂದು ದಿವಸಕ್ಕೆ ಒಂದೊಂದು ಕಾಯದ ಹೆಸರಿಟ್ಟರು. ಆದಿತ್ಯವಾರದ ಅಧಿಪತಿ ಸೂರ್ಯ, ಸೋಮವಾರದ ಅಧಿಪತಿ ಚಂದ್ರ ಇತ್ಯಾದಿ.
ಯಾವುದೇ ದಿವಸಕ್ಕೂ ಅದರ ಹೆಸರಿಗೆ ಕಾರಣವಾಗಿರುವ ಆಕಾಶಕಾಯಕ್ಕೂ ನಡುವೆ ಸ್ಪಷ್ಟವಾಗಿ ಗುರುತಿಸಬಹುದಾದ ಅಥವಾ ಅಳತೆ ಮಾಡಬಹುದಾದ ಯಾವ ಸಂಬಂಧವೂ ಇಲ್ಲ. ಇದೊಂದು ಪೂರ್ತಿ ಮಾನವಕಲ್ಪಿತ ಭಾವನಾತ್ಮಕ ಸಂಬಂಧ. ಇಂದು ಗುರುವಾರ ಎಂದಾಗ ಆಕಾಶದಲ್ಲಿ ಅದನ್ನು ಸಮರ್ಥಿಸುವ ಯಾವ ಘಟನೆಯೂ ಕಾಣಸಿಗದು. ಬಾನಿನಲ್ಲಿ ದಿವಸದ ಹೆಸರು ಪ್ರಕಟವಾಗುವುದಿಲ್ಲ.
೩೮ ನೇ ಸಾಲು:
ಈ ಅವಧಿಗಳಿಗೂ ಭೂಮಿಯಿಂದ ಕಾಯಗಳಿಗಿರುವ ದೂರಗಳಿಗೂ ನಡುವೆ ಏನಾದರೂ ಸಂಬಂಧವಿರಬಹುದೇ? ಇದೆ. ನಾವು ನೇರ ಹಾದಿಯಲ್ಲಿ ಅತಿವೇಗವಾಗಿ ಪಯಣಿಸುತ್ತಿರುವಾಗ ದೂರದ ವಸ್ತುಗಳು ಕಡಿಮೆ ವೇಗದಿಂದಲೂ ಹತ್ತಿರದ ವಸ್ತುಗಳು ಜಾಸ್ತಿ ವೇಗದಿಂದಲೂ ಎದುರು ದಿಶೆಯಲ್ಲಿ ಸರಿದಂತೆ ಭಾಸವಾಗುವುದು ಸರಿಯಷ್ಟೆ. ಆದ್ದರಿಂದ ಕಡಿಮೆ ವೇಗದವು ದೂರ ಇವೆಯೆಂದೂ ಜಾಸ್ತಿ ವೇಗದವು ಹತ್ತಿರ ಇವೆಯೆಂದೂ ತರ್ಕಿಸುವುದು ಸಾಧುವಾಗಿದೆ. ಈ ತರ್ಕವನ್ನು ಭೂಮಿ ಎಂಬ ವಾಹನಾರೂಢರಾದ ನಾವು ನಮಗೆ ಕಾಣುವ ಆಕಾಶಕ್ಕೆ ಅನ್ವಯಿಸಿದರೆ ದೊರೆಯುವ ಫಲಿತಾಂಶ ಏನು? ನಮ್ಮಿಂದ ಶನಿ ಅತಿ ದೂರದಲ್ಲಿದೆ; ಅಲ್ಲಿಂದ ಅವರೋಹೀ ಅಂತರಗಳಲ್ಲಿ ಅನುಕ್ರಮವಾಗಿ ಗುರು, ಕುಜ, ಶುಕ್ರ, ಬುಧ ಮತ್ತು ಚಂದ್ರ ಇವೆ. ಕಾಲ್ಡೀಯನರು ಈ ಸೂಕ್ಷ್ಮವನ್ನು ಗ್ರಹಿಸಿದ್ದ ಗಣಿತನಿಶಿತಮತಿಗಳಾಗಿದ್ದರು.
ಒಂದು ವರ್ಷದಲ್ಲಿ ಸುಮಾರಾಗಿ 24 ಪಕ್ಷಗಳಿವೆಯೆಂದು ಹಿಂದೆ ಹೇಳಿದೆ. ಈ 24 ಎಂಬ ಸಂಖ್ಯೆಯಿಂದ ಸ್ಫೂರ್ತಿ ಪಡೆದ ಅವರು ಎರಡು ಅನುಕ್ರಮ ಸೂರ್ಯೋದಯಗಳ ನಡುವಿನ ಅವಧಿಯಾದ ದಿವಸವನ್ನು ಗಣನೆಯ ಸೌಕರ್ಯಕ್ಕಾಗಿ 24 ಸಮಭಾಗಗಳಾಗಿ ವಿಂಗಡಿಸಿದರು. ಇವೇ 24 ಗಂಟೆಗಳು. ಈ ವಿಭಾಗೀಕರಣವೂ ಪೂರ್ತಿ ಮಾನವಕಲ್ಪಿತ. ಬಾನಿನಲ್ಲಿ ಗಂಟೆಯನ್ನು ನೇರವಾಗಿ ಪ್ರಕಟಿಸುವ ಗಡಿಯಾರ ಇಲ್ಲ. ದಿವಸದ ಒಂದೊಂದು ಗಂಟೆಗೆ ಅತಿ ದೂರದ ಶನಿಯಿಂದ ಅತಿ ಸಮೀಪದ ಚಂದ್ರನವರೆಗಿನ 7 ದೇವರುಗಳನ್ನು ಅದೇ ಕ್ರಮದಲ್ಲಿ ಅಧಿಪತಿಗಳೆಂದು ನೇಮಿಸಲಾಯಿತು.
ಹೀಗೆ ದಿವಸಗಳ ಅನುಕ್ರಮ ಈಗ ಪ್ರಚಲಿತವಿರುವಂತೆ ಆದಿತ್ಯವಾರದಿಂದ ಶನಿವಾರದ ತನಕ ಅದೇ ಧಾಟಿಯಲ್ಲಿ ಮೆರವಣಿಗೆ ಸಾಗುವುದರ ಹಿಂದೆ ಖಚಿತ ವೈಜ್ಞಾನಿಕ ಚಿಂತನೆ ಉಂಟು. ಈ ಚಿಂತನೆ ಆಕಾಶಕಾಯಗಳ ದೂರ ಅಥವಾ ಅವಧಿಗಳಿಂದ ಪ್ರಭಾವಿತವಾಗಿದೆ. ಕಾಯಗಳ ದೂರ ಅಥವಾ ಅವಧಿಗಳು ನಿರ್ದಿಷ್ಟಕ್ರಮದಲ್ಲಿಯೇ ಇರುವುದರಿಂದ ದಿವಸಗಳ ಅನುಕ್ರಮ ಈಗಿರುವಂತೆ ರೂಢಿಗೆ ಬಂದಿದೆ. ಆದರೆ ಆಯಾ ಕಾಯಕ್ಕೆ ಅದರ ಹೆಸರು ಹೊತ್ತಿರುವ ದಿವಸದ ಮೇಲೆ ಯಾವ ಪ್ರಭಾವವೂ ಇರುವುದಿಲ್ಲ.
==ದಿವಸದ ಹೆಸರಿಗೂ ವ್ಯಕ್ತಿಗೆ ಸಂಭವಿಸಬಹುದಾದ ಶುಭಾಶುಭಗಳಿಗೂ ನಡುವೆ ಸಂಬಂಧ==
ವಾಸ್ತವವಾಗಿ ದಿವಸದ ಹೆಸರಿಗೂ ವ್ಯಕ್ತಿಗೆ ಸಂಭವಿಸಬಹುದಾದ ಶುಭಾಶುಭಗಳಿಗೂ ನಡುವೆ ಯಾವ ಸಂಬಂಧವೂ ಇಲ್ಲ. ದಿವಸದ ಗಳಿಗೆಗೂ ಉದ್ದಿಷ್ಟಕಾರ್ಯಕ್ಕೆ ಒದಗಬಹುದಾದ ಜಯಾಪಜಯಗಳಿಗೂ ನಡುವೆ ಯಾವ ಸಂಬಂಧವೂ ಇಲ್ಲ. ಇಸವಿ ಸಂಖ್ಯೆ ಅಥವಾ ಸಂವತ್ಸರ ನಾಮಕ್ಕೂ ಸಂವತ್ಸರ ಫಲಕ್ಕೂ ಯಾವ ಸಂಬಂಧವೂ ಇಲ್ಲ. [[ರಾಹುಕಾಲ]], [[ಭರಣಿ]], [[ಕೃತ್ತಿಕಾ|ಕೃತ್ತಿಕೆ]], [[ಶೂನ್ಯಮಾಸ|ಶೂನ್ಯ ಮಾಸ]], [[ಗ್ರಹಣ]], [[ಮುಹೂರ್ತ]] ಮುಂತಾದವುಗಳ ಸುತ್ತ ಹೆಣೆದುಕೊಂಡಿರುವ ಅಳುಕು ಅಂಜಿಕೆಗಳಿಗೆ ಯಾವ ಭೌತ ಅಥವಾ
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಪ್ತಾಹ|ಸಪ್ತಾಹ}}
|