ಜಹಾಂಗೀರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೫ ನೇ ಸಾಲು:
==ಮಗನ ದಂಗೆ==
ಜಹಾಂಗೀರನ ಮೂರನೆಯ ಮಗ ಖುರ್ರಂ (ಷಾಹಜಹಾನ್) 1622ರಲ್ಲಿ ತಂದೆಯ ವಿರುದ್ಧ ದಂಗೆಯೆದ್ದ. ತನ್ನ ಸೇನಾಧಿಕಾರಿ ಮೊಹಬ್ಬತ್ ಖಾನನ ನೆರವಿನಿಂದ ಅವನನ್ನು ಅಡಗಿಸಲಾಯಿತು. ಆದರೆ ಮರುವರ್ಷ ಮೊಹಬ್ಬತ್‍ಖಾನನೇ ದಂಗೆಯೆದ್ದ. ಜಹಾಂಗೀರನೂ ಸ್ವಲ್ಪಕಾಲ ಸೆರೆಯಾಗಿದ್ದ. ಆದರೆ ನೂರಜಹಾನಳ ಯುಕ್ತಿಯಿಂದ ಜಹಾಂಗೀರ್ ಬಿಡುಗಡೆ ಹೊಂದಿದ. ಮೊಹಬ್ಬತ್‍ಖಾನ್ ಮಣಿಯಬೇಕಾಯಿತು. ಜಹಾಂಗೀರನ ಎರಡನೆಯ ಮಗ ಪರ್ವೀಜ್ 1626ರಲ್ಲಿ ತೀರಿಕೊಂಡ.
His deth in kasmir
==ಮರಣ==
 
1627ರಲ್ಲಿ ಜಹಾಂಗೀರ್ ಮರಣ ಹೊಂದಿದ.
==ಆಡಳಿತ==
ಜಹಾಂಗೀರ್ ಕಲಾಪ್ರಿಯ. ಅವನ ಆಶ್ರಯ ಪಡೆದ ಇಬ್ಬರು ಮುಸ್ಲಿಂ ಕಲಾವಿದರು ಅಬುಲ್ ಹಸನ್ ಮತ್ತು ಮನ್ಸೂರ್. ನ್ಯಾಯ ಪರಿಪಾಲನೆಯಲ್ಲಿ ಜಹಾಂಗೀರನಿಗೆ ವಿಶೇಷವಾದ ಆಸಕ್ತಿಯಿತ್ತು. ಪ್ರಜೆಗಳ ಕುಂದುಕೊರತೆಗಳನ್ನು ಸ್ವತಃ ಅರಿತು ನ್ಯಾಯದಾನ ಮಾಡುವ ಸಲುವಾಗಿ ಅವನು ಯಮುನಾನದೀ ತೀರದಲ್ಲಿ ನಿಲ್ಲಿಸಲಾದ ಒಂದು ಕಂಬಕ್ಕೂ ಆಗ್ರದ ಕೋಟೆಯೊಳಗಿನ ಷಾಬುರ್ಜಿ ಕಟ್ಟಡಕ್ಕೂ ನಡುವೆ ಒಂದು ನ್ಯಾಯಗಂಟೆಯನ್ನು ಸ್ಥಾಪಿಸಿದ. ಹನ್ನೆರಡು ವಿಧಿಗಳನ್ನು ನಿರೂಪಿಸಿ, ಎಲ್ಲರೂ ಅವನ್ನು ಪಾಲಿಸಬೇಕೆಂದು ಆಜ್ಞೆ ಮಾಡಿದ. ಮದ್ಯ ಮುಂತಾದ ಮಾದಕ ದ್ರವ್ಯಗಳ ಮಾರಾಟ, ಜಕಾತ್ ಎಂಬ ತೆರಿಗೆಯ ವಸೂಲಿ, ಅಪರಾಧಿಗಳ ಕಿವಿ-ಮೂಗುಗಳನ್ನು ಕೊಯ್ದು ಅವರ ಮನೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಿತ ದಿನಗಳಲ್ಲಿ ಪ್ರಾಣಿವಧೆ, ಬಲವಂತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು (ಘಸ್ಬಿ) -ಇವುಗಳನ್ನೆಲ್ಲ ನಿಷೇಧಿಸಿದ. ಹಾದಿಗಳ್ಳತನ ಮತ್ತು ಸುಲಿಗೆಗಳಾಗದಂತೆ ವ್ಯವಸ್ಥೆ ಮಾಡಿ, ಪ್ರಜೆಗಳಿಗಾಗಿ ಆಸ್ಪತ್ರೆಗಳನ್ನು ಕಟ್ಟಿಸಿ ವೈದ್ಯರನ್ನು ನೇಮಿಸಿದ. ಧಾರ್ಮಿಕ ದತ್ತಿಗಳನ್ನು, ಮನ್‍ಸಬ್ ಮತ್ತು ಜಾಗೀರ್‍ಗಳನ್ನು ಖಾಯಂಗೊಳಿಸಿದ. ಆದರೆ ಇವಾವುವೂ ನಿರೀಕ್ಷಿತ ಫಲಗಳನ್ನು ನೀಡಲಿಲ್ಲ.
"https://kn.wikipedia.org/wiki/ಜಹಾಂಗೀರ್" ಇಂದ ಪಡೆಯಲ್ಪಟ್ಟಿದೆ