ಬರ್ಮೀ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚು ಉಲ್ಲೇಖ ನೀಡಿರುವುದು
೧ ನೇ ಸಾಲು:
ಬರ್ಮೀ ಭಾಷೆ - ಬರ್ಮ ಒಕ್ಕೂಟದ ಅಧಿಕೃತ ಭಾಷೆ. ಆ ನಾಡಿನ 23 ದಶಲಕ್ಷ ಪ್ರಜೆಗಳ ಪೈಕಿ 2/3 ರಷ್ಟು ಜನರ ಮಾತೃಭಾಷೆ. ಲಿಖಿತ ಸಾಹಿತ್ಯ ಹದಿನೈದನೆಯ ಶತಮಾನದಿಂದ ದೊರೆಯುತ್ತದೆಯಾದರೂ ಹನ್ನೊಂದನೆಯ ಶತಮಾನದಷ್ಟು ಹಿಂದಕ್ಕೆ ಹೋಗುವ ಶಿಲಾಶಾಸನಗಳೂ ದೊರೆತಿವೆ. ಈ ಭಾಷೆಯಲ್ಲಿ ಮೂರು ಬಗೆಯ ಶೈಲಿಗಳನ್ನು ಸ್ಪಷ್ಟವಾಗಿ ಗುರುತಿಸಬಹುದು; ಅಭಿಜಾತ ಶೈಲಿ, ಬರವಣಿಗೆಯಲ್ಲಿರುವ ಗದ್ಯ (ಪಾಲಿ ವ್ಯಾಕರಣ ಮತ್ತು ವಾಕ್ಯರಚನೆಯಿಂದ ಬಹಳವಾಗಿ ಪ್ರಭಾವಗೊಂಡಿದೆ) ಮತ್ತು ಆಡುಭಾಷೆ. ಇವುಗಳಲ್ಲಿ ಪದಕೋಶದ ದೃಷ್ಟಿಗಿಂತಲೂ ವಾಕ್ಯರಚನೆ ಮತ್ತು ವ್ಯಾಕರಣಾಂಶಗಳ ದೃಷ್ಟಿಯಿಂದ ಭಿನ್ನತೆ ಕಂಡುಬರುತ್ತದೆ.<ref>http://www.thefreedictionary.com/Barmi</ref>
 
ಬರ್ಮೀ ಲಿಪಿ ಉಗಮಿಸಿದ್ದು ದಕ್ಷಿಣ ಭಾರತೀಯ ಮೂಲದಿಂದ. ಬಹಳವಾಗಿ ವೃತ್ತಗಳು ಮತ್ತು ವೃತ್ತಭಾಗಗಳು ಕಂಡುಬರುವ ಈ ಲಿಪಿಯನ್ನು ಎಡದಿಂದ ಬಲಕ್ಕೆ ಬರೆಯುತ್ತಾರೆ. ಇದರ ಸಾಂಪ್ರದಾಯಿಕ ಕಾಗುಣಿತ ಪದ್ಧತಿ ತೌಲನಿಕ ಭಾಷಾಶಾಸ್ತ್ರೀಯ ಅಧ್ಯಯನಕ್ಕೆ ದಾರಿಮಾಡಿಕೊಡುತ್ತದೆ. ಬರ್ಮೀ ಭಾಷೆ ಸೈನೋಟೆಬೆಟನ್ ಭಾಷಾವರ್ಗಕ್ಕೆ ಸೇರಿದ ಟೆಬೆಟೊ-ಬರ್ಮೀ ಉಪವರ್ಗದ ಒಂದು ಭಾಷೆ. ಮೂಲಭೂತವಾಗಿ ಇದು ಏಕಾಕ್ಷರ ಭಾಷೆ. ಅಂದರೆ ನಿರ್ದಿಷ್ಟವಾಗಿ ಒಂದು ಅಕ್ಷರದ ಆಕೃತಿಮಾನಗಳು ಇದರಲ್ಲುಂಟು. ಇದು ಒಂದು ತಾನಭಾಷೆ (ಟೋನ್ ಲ್ಯಾಂಗ್ವೇಜ್) ಸಹ ಹೌದು. ಒಂದು ನಿಮ್ನ-ಸ್ವರಾಘಾತ ಮತ್ತು ಮೂರು ಉಚ್ಚ-ಸ್ವರಾಘಾತ ಮಾದರಿಯ ಅಕ್ಷರಗಳು ಇದರಲ್ಲಿ ಕಂಡುಬರುತ್ತವೆ.
೯ ನೇ ಸಾಲು:
ಬರ್ಮ ಒಕ್ಕೊಟದಲ್ಲಿ ಮಾತನಾಡುವ ಇತರ ಭಾಷೆಗಳೆಂದರೆ ಶಾನ್ (7%), ಕಾರೆನ್ (8%) ಮಾನ್ (2%) ಚಿನ್ ಮತ್ತು ಜಿಂಗ್‍ಪಾ.
 
== ಉಲ್ಲೇಖ ==
<references />
 
{{wikisource|ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ|ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಬರ್ಮೀ_ಭಾಷೆ" ಇಂದ ಪಡೆಯಲ್ಪಟ್ಟಿದೆ