"ಬಾಗಲಕೋಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Adding {{ಕರ್ನಾಟಕದ_ಜಿಲ್ಲೆಗಳು}} using AWB
(ಲೇಖನವನ್ನು ಪರಿಷ್ಕರಿಸಲಾಗಿದೆ)
ಚು (Adding {{ಕರ್ನಾಟಕದ_ಜಿಲ್ಲೆಗಳು}} using AWB)
=='''ಇತಿಹಾಸ'''==
* ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. * ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.
* ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. [[ಆಲಮಟ್ಟಿ ಅಣೆಕಟ್ಟು | ಆಲಮಟ್ಟಿ ಅಣೆಕಟ್ಟಿನ]] ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ.
 
== ನವನವೀನ ನಗರವಾಗಿ ಬಾಗಲಕೋಟೆ==
 
=='''ಶಿಕ್ಷಣ'''==
* [[ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ]], [[ಬಾಗಲಕೋಟ]]
* [[ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ]], [[ಬಾಗಲಕೋಟ]]
 
=='''ತಾಲೂಕುಗಳು'''==
* ಬಹುಮುಖಿಯಾಗಿ ವಿದ್ವತ್ ವಲಯವನ್ನು ಕಟ್ಟಿದ ನಮ್ಮ ಸಂಶೋಧಕರ ಶ್ರಮ ಮತ್ತು ಕಾಯಕ ಶ್ರದ್ಧೆಯನ್ನು ಈ ಪ್ರಬಂಧದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು. ಡಾ. ಎ. ಟಿ. ಪಾಟೀಲ ಅವರು ‘ಶ್ರೀ ಪ್ರಸನ್ನವೆಂಕಟದಾಸರು ಮತ್ತು ಅವರ ಕೃತಿಗಳು’ ಕುರಿತು ಸಂಶೋಧನೆ ಕೈಕೊಂಡರು.
* ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್. ಎಸ್. ಪಂಚಮುಖಿ ಅವರ ಮಾರ್ಗದರ್ಶನದಲ್ಲಿ 11-03-1947 ರಲ್ಲಿ ಸಂಶೋಧನಾ ಕಾರ್ಯ ಆರಂಭಿಸಿದರು. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು.
* ಪ್ರಸ್ತುತ ಪ್ರಬಂಧದಲ್ಲಿ ವೈಷ್ಣವ ಭಕ್ತಿಯ ಬೆಳವಣಿಗೆ, ಉತ್ತರ ಭಾರತದಲ್ಲಿ ಭಕ್ತಿ ಪಂಥ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಕ್ತಿ ಪಂಥದ ಜೊತೆಗೆ ಪ್ರಸನ್ನ ವೆಂಕಟದಾಸರ ಕಾಲ ನಿರ್ಣಯ, ಜೀವನ ಚರಿತ್ರೆ, ಕೃತಿ ವಿಮರ್ಶೆ, ಆ ಕಾಲದ ರಾಜಕಿಯ, ಸಾಮಾಜಿಕ ಜೀವನದೊಂದಿಗೆ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಭಾವನಾ ಪ್ರಧಾನವಾದ ಅಥವಾ ಪೂರ್ವಗ್ರಹ ಪ್ರತಿಕ್ಷಿಪ್ತವಾದ ಗ್ರಂಥಗಳು ಬರುವ ಹೊತ್ತಿನಲ್ಲಿ ಆ ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕಂತಿಕ ಇತಿಹಾಸವನ್ನು ಕಟ್ಟಿಕೊಟ್ಟ ಈ ಪ್ರಬಂಧವು ತುಂಬಾ ಖ್ಯಾತಿಯನ್ನು ತಂದುಕೊಟ್ಟಿತು.
 
=='ಜಾನಪದದಲ್ಲೂ ಮೊದಲು'''==
* ಕರ್ನಾಟಕ ವಿಶ್ವವಿದ್ಯಾಲಯದಿಂದ 1955 ರಲ್ಲಿ ಪಿಎಚ್.ಡಿ. ಪದವಿಗಾಗಿ ಮಾನ್ಯ ಮಾಡಿದ ಡಾ. ಬಿ.ಎಸ್.ಗದ್ದಗಿಮಠ ಅವರ ಕನ್ನಡ ಜನಪದ ಗೀತೆಗಳು ಪ್ರಬಂಧವು ಕನ್ನಡ ಜಾನಪದ ಲೋಕದ ಮೊಟ್ಟ ಮೊದಲ ಸಂಶೋಧನಾ ಪ್ರಬಂಧವಾಗಿದೆ. ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ, ಜನಸಾಮಾನ್ಯರ ಸಂಪ್ರದಾಯ, ಸಂಸ್ಕøತಿಗಳಲ್ಲಿ ಒಂದಾಗಿ, ಹಳ್ಳಿ ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತಿದ್ದ ಜಾನಪದ ಗೀತೆ ರತ್ನಗಳನ್ನು ಸ್ವತಃ ಸಂಗ್ರಹಿಸಿ, ಸಂಪಾದಿಸಿ, ಸಂಶೋಧನೆ ಕೈಕೊಂಡ ಡಾ. ಬಿ. ಎಸ್. ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದ ಈ ಜಿಲ್ಲೆಯ ಮೇರು ನಿಧಿ.
* ಜನಪದ ಗೀತ ಸಾಹಿತ್ಯದ ಪ್ರಕಾರಗಳಾದ ಸ್ತುತಿ ಪದಗಳು, ಸುಗ್ಗಿ ಹಾಡುಗಳು, ಹಂತಿ ಹಾಡುಗಳು, ಮಕ್ಕಳ ಹಾಡುಗಳ ವಿಶ್ಲೇಷಣೆಯೊಂದಿಗೆ ಹಳ್ಳಿಗರ ಹಬ್ಬಗಳ ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳ ಒಟ್ಟು ನೋಟವನ್ನು ಹಳ್ಳಿಗರ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅನುಬಂಧದಲ್ಲಿ ಡಾ. ಗದ್ದಗಿಮಠರು ಸಂಗ್ರಹಿಸಿದ ಹಂತಿಯ ಹಾಡುಗಳಲ್ಲಿ ಹನ್ನೇರಡು ಶರಣರ ಜೀವನ ಚಿತ್ರಣವಿದೆ. ಕರ್ನಾಟಕ ವಿಶ್ವ ವಿದ್ಯಾಲಯ 1963 ರಲ್ಲಿ ಈ ಪ್ರಬಂಧವನ್ನು ಪ್ರಕಟಿಸಿದೆ. ಮೇಲೆ ದಾಖಲಿಸಿದ ಈ ಎರಡೂ ಪ್ರಬಂಧಗಳು ಕನ್ನಡ ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೊದಲ ಸಂಶೋಧನಾ ಪ್ರಬಂಧಗಳಾಗಿವೆ.
 
=='''ವೈವಿಧ್ಯತೆ '''==
 
*[[ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ)]]
 
 
=='''ಹೊರಗಿನ ಸಂಪರ್ಕ'''==
[http://www.bagalkot.nic.in ಬಾಗಲಕೋಟ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ]
 
<br {{clear="all">}}
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ:ಬಾಗಲಕೋಟ ಜಿಲ್ಲೆ|*]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
 
{{ಕರ್ನಾಟಕದ_ಜಿಲ್ಲೆಗಳು}}
೪,೭೫೩

edits

"https://kn.wikipedia.org/wiki/ವಿಶೇಷ:MobileDiff/797090" ಇಂದ ಪಡೆಯಲ್ಪಟ್ಟಿದೆ