ಉಗ್ರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
{{wikify}}
ಉಗ್ರಾಣ: ಭವಿಷ್ಯದಲ್ಲಿ ಉಪಯೋಗಿಸುವ ಉದ್ದೇಶದಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ವ್ಯವಸ್ಥಿತವಾಗಿ ಶೇಖರಿಸಿಡುವ ಸ್ಥಳ, ಕೊಠಡಿ, [[ಕಟ್ಟಡ]] (ಸ್ಟೋರ್ಸ್‌, ಸ್ಟೋರ್-ರೂಂ, ಸ್ಟೋರ್-ಹೌಸ್).
ವ್ಯವಸಾಯೋತ್ಪನ್ನಗಳನ್ನೂ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ ಸರಕುಗಳನ್ನೂ ಕೆಡದಂತೆ ಭದ್ರವಾಗಿ ದಾಸ್ತಾನು ಮಾಡುವ ಕ್ರಮ ಇಂದಿನ ವಾಣಿಜ್ಯ ವ್ಯವಸ್ಥೆಯಲ್ಲಿ ಬಲು ಅಗತ್ಯ. ದಾಸ್ತಾನಾಗುವ ಸರಕುಗಳ ಉಗಮ, ಸ್ವರೂಪ, ಉಪಯೋಗ, ದಾಸ್ತಾನಿನ ಉದ್ದೇಶ ಮುಂತಾದವುಗಳ ದೃಷ್ಟಿಯಿಂದ ದಾಸ್ತಾನು ಕೇಂದ್ರಗಳನ್ನು ವಿಂಗಡಿಸುವುದು ಸಾಧ್ಯ. ರೈತರೂ ಜಮೀನಿನ ಒಡೆಯರೂ ಇತರರೂ ಮಾರಾಟಕ್ಕೂ ಸ್ವಂತ ಉಪಯೋಗಕ್ಕೂ ದವಸಧಾನ್ಯ ಸಂಗ್ರಹಿಸಿಡಲು (ಸಾಮಾನ್ಯವಾಗಿ ಖಾಸಗಿಯಾಗಿ) ಏರ್ಪಡಿಸಿಕೊಂಡ ವಿಶಿಷ್ಟ ರಚನೆಯೇ ಕಣಜ, ಪಣತ ಅಥವಾ ಹಗೇವು (ಗ್ರ್ಯಾನರಿ). ರೈತ, ವರ್ತಕ ಮುಂತಾದವರ ಉಪಯೋಗಕ್ಕಾಗಿ ಸರ್ಕಾರವಾಗಲಿ ಖಾಸಗಿಯವರಾಗಲಿ ಸಂಘ ಸಂಸ್ಥೆಗಳಾಗಲಿ ನಿರ್ಮಿಸಿ ನಿರ್ವಹಿಸುವ ಸಾರ್ವಜನಿಕ ಕೇಂದ್ರಗಳು ದಾಸ್ತಾನುಮಳಿಗೆಗಳೆನ್ನಿಸಿಕೊಳ್ಳುತ್ತವೆ. (ವೇರ್ ಹೌಸ್). ಗಿರಣಿ, ಕಾರ್ಖಾನೆ ಹಾಗೂ ವ್ಯಾಪಾರಿಗಳು ಮಾರಾಟದ ಸರಕನ್ನು ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡುವ ಆಲಯ ಅಥವಾ ಮಳಿಗೆಯೇ ಗಡಂಗು ಅಥವಾ ಗೋದಾಮು (ಗೋಡೌನ್, ವೇರ್ ಹೌಸ್). ನೇರ ಮಾರಾಟದ ಸಲುವಾಗಿ ವ್ಯಾಪಾರ ಸ್ಥಳದಲ್ಲೇ ಸರಕು ಶೇಖರಿಸಿಟ್ಟಿದ್ದರೆ ಅದು ಕೋಠಿ, ಮಂಡಿ ಅಥವಾ ಭಂಡಾರ (ಡಿಪೊ). ಕಾರ್ಖಾನೆಯವರು ಕೊಂಡ ಸರಕನ್ನು ಉಗ್ರಾಣಕ್ಕೆ ಸೇರಿಸುವ ಮುನ್ನ ಸ್ವೀಕರಿಸಿಡುವ ಸ್ಥಳವನ್ನೂ ಕೋಠಿಯೆಂದು ಕರೆಯುವ ವಾಡಿಕೆ ಇದೆ.
"https://kn.wikipedia.org/wiki/ಉಗ್ರಾಣ" ಇಂದ ಪಡೆಯಲ್ಪಟ್ಟಿದೆ