ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Zarnowiec2.JPGರ ಬದಲು ಚಿತ್ರ Elektrownia_Wodna_Żarnowiec_(2).jpg ಹಾಕಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೩ ನೇ ಸಾಲು:
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆಯಾಗಿದೆ.<ref>http://www.sugarindustry.com/</ref> ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ [[ಕಬ್ಬು]] ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
 
=='''ಕೈಗಾರಿಕಾ ನೀತಿ'''==
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನೀತಿಯನ್ನು '[[ಕೈಗಾರಿಕಾ ನೀತಿ]]'(Industrial policy) ಎಂದು ಕರೆಯಲಾಗುತ್ತದೆ.<ref>Graham, Otis L. (1994). Losing Time: The Industrial Policy Debate. Cambridge, MA: Harvard University Press. ISBN 978-0-674-53935-8.</ref> ಕೈಗಾರಿಕಾ ಪ್ರಗತಿಯ ಬಗೆಗೆ ಸರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತ ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರವು ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು, ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆಧಾರದ ಮೇಲೆ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು ಮೊದಲಾದ ಅಂಶಗಳು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು. ಹಣ ಸಂಬಂಧಿ ನೀತಿ, ಕೋಶೀಯ ನೀತಿ, ಕಾರ್ಮಿಕ ನೀತಿ, ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಮುಂತಾದ ವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
==='''ಕೈಗಾರಿಕಾ ನೀತಿಯ ಅವಶ್ಯಕತೆ'''===
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ