ಖನಿಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೦ ನೇ ಸಾಲು:
 
== ಖನಿಜಗಳು ==
ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು[[:en:mineral|ಖನಿಜ]]ವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ. ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.
 
ಪ್ರಪಂಚದಲ್ಲಿ [[wikipedia:en:Mineral|2017ರ ಮಾರ್ಚ್]] ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ ಗುರುತಿಸಲಾಗಿದೆ. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.
 
ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.
"https://kn.wikipedia.org/wiki/ಖನಿಜ" ಇಂದ ಪಡೆಯಲ್ಪಟ್ಟಿದೆ