ಖನಿಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೧ ನೇ ಸಾಲು:
== ಖನಿಜಗಳು ==
ನೈಸರ್ಗಿಕವಾಗಿ ದೊರೆಯುವ, ಸಾಮಾನ್ಯವಾಗಿ ಸ್ಪಟಿಕ ರೂಪದಲ್ಲಿರುವ , ಅಜೈವಿಕ ಉಗಮದ ರಾಸಾಯನಿಕ ಸಂಯುಕ್ತ ವನ್ನು ಖನಿಜವೆಂದು ಕರೆಯುತ್ತಾರೆ. ಯಾವುದೇ ಒಂದು ಖನಿಜಕ್ಕೆ ನಿರ್ದಿಷ್ಟವಾದ ರಾಸಾಯನಿಕ ಸಂಘಟನೆ ಇರುತ್ತದೆ. ವಿವಿಧ ಬಗೆಯ ಖನಿಜಗಳು (minerals) ಅಥವಾ ಖನಿಜರೂಪಿಗಳು (mineraloids) ಸೇರಿಕೊಂಡಿರುವ ನೈಸರ್ಗಿಕ ವಸ್ತುವನ್ನು ಶಿಲೆ(rock) ಯೆಂದು ಪರಿಗಣಿಸಲಾಗುತ್ತದೆ. ಖನಿಜಗಳ ಅಧ್ಯಯನವನ್ನು ”ಖನಿಜವಿಜ್ಞಾನ” ಅಥವಾ “ಖನಿಜಶಾಸ್ತ್ರ “(mineralogy) ಎನ್ನುತ್ತಾರೆ.
ಪ್ರಪಂಚದಲ್ಲಿ [[wikipedia:Mineral|2017ರ ಮಾರ್ಚ್]] ತಿಂಗಳವರೆಗೆ 5300 ವಿಧ(ತಳಿ)ಗಳನ್ನು ಖನಿಜ [[wikipedia:Mineral|ಗುರುತಿಸಲಾಗಿದೆ]]. ಇವುಗಳಲ್ಲಿ 5230 ಖನಿಜ ವಿಧಗಳನ್ನು ಅಂತರಾಷ್ಟ್ರಿಯ ಖನಿಜವಿಜ್ಞಾನ ಸಂಘ ವು (IMA -ಇಂಟರ ನ್ಯಾಶನಲ್ ಮಿನರಲೊಜಿಕಲ್ ಅಸೋಸಿಯೇಶನ್ ) ಅಂಗೀಕರಿಸಿದೆ.
 
ಭೂಮಿಯ ಹೊರತೊಗಟೆ (crust) ಯಲ್ಲಿರುವ ಖನಿಜಗಳಲ್ಲಿ ಹೆಚ್ಚುಕಡಿಮೆ 90% ದಷ್ಟು ಸಿಲಿಕೇಟು ಖನಿಜಗಳಾಗಿವೆ. ಭೂಮಿಯ ರಾಸಾಯನಿಕಗುಣಶಾಸ್ತ್ರದ ಅನುಸಾರವಾಗಿ ವಿವಿಧ ಲಭ್ಯ ಖನಿಜ ವಿಧಗಳ ವೈವಿಧ್ಯತೆ ಮತ್ತು ವಿಪುಲತೆ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಆಮ್ಲಜನಕ ಎಂಬ ಮೂಲವಸ್ತುಗಳು ಭೂಮಿಯ ಹೊರತೊಗಟೆಯಲ್ಲಿ ಅಂದಾಜು 75 % ದಷ್ಟು ಇರುವ ಕಾರಣ, ಈ ಮೂಲವಸ್ತುಗಳನ್ನು ಹೊಂದಿರುವ ಸಿಲಿಕೇಟು ವಿಧದ ಖನಿಜಗಳು ವ್ಯಾಪಕವಾಗಿ ಕಂಡು ಬರುತ್ತವೆ.
"https://kn.wikipedia.org/wiki/ಖನಿಜ" ಇಂದ ಪಡೆಯಲ್ಪಟ್ಟಿದೆ