ಕವಿರಾಜಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧ ನೇ ಸಾಲು:
[[File:kavi_file2.jpg|thumb|right|220px|ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡದಕನ್ನಡ ಜನರ ವರ್ಣನೆ]]
'''ಕವಿರಾಜಮಾರ್ಗ''' [[ಕನ್ನಡ|ಕನ್ನಡದಲ್ಲಿ]] ಇದುವರೆಗೆ ಲಭ್ಯವಾಗಿರುವ [[ಗ್ರಂಥ|ಗ್ರಂಥಗಳಲ್ಲಿ]] ಅತ್ಯಂತ ಪ್ರಾಚೀನ. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ [[ಶ್ರೀವಿಜಯ|ಶ್ರೀವಿಜಯನೆಂಬುದು]] ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ [[ಅಮೋಘವರ್ಷ ನೃಪತುಂಗ ]] ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
==ಪರಿಚಯ==
* '''ಕವಿರಾಜಮಾರ್ಗ'''(ಕ್ರಿ.ಶ ೮೧೪-೮೭೭) ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ [[ಕವಿ|ಕವಿಗಳನ್ನು]] ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ [[ಕನ್ನಡ ಸಾಹಿತ್ಯ | ಕನ್ನಡ ಸಾಹಿತ್ಯವು]] ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ.
೩೨ ನೇ ಸಾಲು:
ಕ್ರಮದೋಳ್ ನೆಗಳ್ಚಿ ಗದ್ಯಾ
ಶ್ರಮ ಪದಗುರುತಾ ಪ್ರತೀತಿಯಂ ಕೆಯ್ಕೊಂಡರ್
 
ಮಿಗೆ ಕನ್ನಡಗಬ್ಬಂಗಳೊ
ಳಗಣಿತಗುಣಗಣ ಗದ್ಯಪದ್ಯ ಸಮ್ಮಿಶ್ರಿತಮಂ
ನಿಗಧಿಸುವರ್ ಗದ್ಯಕಥಾ ಪ್ರ
ಗೀತಿಯಂ ತಚ್ಚಿರಂತನಾಚಾರ್ಯರ್ಕಳ್
</pre>
 
"https://kn.wikipedia.org/wiki/ಕವಿರಾಜಮಾರ್ಗ" ಇಂದ ಪಡೆಯಲ್ಪಟ್ಟಿದೆ