ಪುರುಷಸಂಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
'''ಪುರುಷಸಂಯೋಗ''' ಎಂಬುದು ಯೇಸುಕ್ರಿಸ್ತನ ಮಾನವೀಯ ಹಾಗೂ ದೈವಿಕ ಸ್ವಭಾವಗಳು ಒಬ್ಬನೇ ಪುರುಷನಲ್ಲಿ ಸಂಯೋಗವಾಗುವುದನ್ನು ಸೂಚಿಸುವ ಪಾರಿಭಾಷಿಕ ಶಬ್ದವು. ಯೇಸುಕ್ರಿಸ್ತನ ಮಾನವತ್ವ ಹಾಗೂ ದೇವತ್ವ ಹೇಗೆ ಒಂದಾಗುತ್ತವೆಂದು ವಿವರಿಸುವ ಈ ಸಿದ್ಧಾಂತವನ್ನು ಕ್ರಿ.ಶ. ೪೩೧ರಲ್ಲಿ ಮಾನ್ಯಮಾಡಿ ಮದಲನೆಯ ಎಫೆಸೊಸ್ ಸಭೆಯು ಅದರ ಮುಖ್ಯತೆಯನ್ನು ಪ್ರತಿಪಾದಿಸಿತು.
ಪುರುಷಸಂಯೋಗ ಸಿದ್ಧಾಂತದ
ಕ್ರಿ.ಶ. ೪೫೧ರಲ್ಲಿ ಖಲ್ಕೇದೋನ್ ಸಭೆಯು ಪುರುಷಸಂಯೋಗ ಸಿದ್ಧಾಂತವನ್ನು ಹೀಗೆ ಸ್ಪಷ್ಟೀಕರಿಸಿತು: <blockquote>ಪವಿತ್ರ ಪಿತೃಗಳನ್ನು ಅನುಸರಿಸಿ ನಾವೆಲ್ಲರು ಒಪ್ಪಿಕೊಳ್ಳಲು ಒಮತ್ತವಾಗಿ ಬೋಧಿಸುತ್ತೇವೆ, ದೇವರ ಪುತ್ರನು ಹಾಗೂ ನಮ್ಮ ಪ್ರಭುವಾದ ಯೇಸುಕ್ರಿಸ್ತನು ಒಬ್ಬನೇ; ಈತನೇ ದೇವತ್ವದಲ್ಲಿ ಪರಿಪೂರ್ಣನಾಗಿಯೂ ಮಾನತ್ವದಲ್ಲಿ ಪರಿಪೂರ್ಣನಾಗಿಯೂ ಇದ್ದಾನೆ; ನಿಜವಾದ ದೇವರೂ ಮೈ ಮತ್ತು ವಿವೇಕಯುಕ್ತ ಆತ್ಮವುಳ್ಳ ನಿಜವಾದ ಮಾನವನೂ ಆಗಿದ್ದಾನೆ; ದೇವತ್ವದ ಸಂಬಂಧವಾಗಿ ಪಿತೃವಿಗೆ ಏಕದ್ರವ್ಯಾತ್ಮಕನಾಗಿದ್ದಾನೆ ಮತ್ತು ಮಾನತ್ವದ ಸಂಬಂಧವಾಗಿ ನಮಗೆ ಏಕದ್ರವ್ಯಾತ್ಮಕನಾಗಿದ್ದಾನೆ; ಪಾಪವಿಲ್ಲದೆ ಎಲ್ಲವುಗಳಲ್ಲಿ ನಮಗೆ ಸಮಾನನಾಗಿದ್ದಾನೆ; ದೇವತ್ವದ ಸಂಬಂಧವಾಗಿ ಪಿತೃವಿನಿಂದ ಯುಗಗಳ ಮುಂಚೆ ಹುಟ್ಟಿಸಲ್ಪಟ್ಟನು, ಮತ್ತು ಮಾನವತ್ವದ ಸಂಬಂಧವಾಗಿ ಇತ್ತೀಚ್ಚಿನ ಈ ದಿನಗಳಲ್ಲಿ, ನಮಗೂ ನಮ್ಮ ರಕ್ಷಣೆಗೂ ದೇವರ ಮಾತೃವಾದ ಕನ್ಯಾಮರಿಯಳಿಂದ ಹುಟ್ಟಿಸಲ್ಪಟ್ಟನೆ; ಒಬ್ಬನೇ ಕ್ರಿಸ್ತನೂ ಪುತ್ರನೂ ಪ್ರಭುವೂ ಏಕಜಾತನಾದವನೂ ಆಗಿದ್ದಾನೆ; ಎರಡು ಸ್ವಭಾವಗಳಲ್ಲಿ ಅಭ್ರಾಂತವಾಗಿ, ಅವ್ಯಯವಾಗಿ, ಅವಿಭಾಜ್ಯವಾಗಿ, ಅವಿಚ್ಛೇದ್ಯವಾಗಿ, ಮಾನ್ಯಮಾಡಲ್ಪಡತಕ್ಕವನಾಗಿದ್ದು; ಸಂಯೋಗದ ಪ್ರಯುಕ್ತ ಸ್ವಭಾವಗಳ ವ್ಯತ್ಯಾಸವು ಯಾವುದೇ ರೀತಿಯಲ್ಲಿ ಅಳಿಸಲ್ಪಡದೆ ಒಂದೊಂದು ಸ್ವಭಾವದ ಲಕ್ಷಣಗಳು ಉಳಿದು ಒಂದೇ ವ್ಯಕ್ತಿಯಲ್ಲಿ ಮತ್ತು ಒಂದೇ ಪುರುಷನಲ್ಲಿ ಸಹಭಾವವಾಗುತ್ತ; ಎರಡು ಪುರುಷಗಳಲ್ಲಿ ಭಾಗಿಸಲ್ಪಡದೆ ಅಥವಾ ಬೇರ್ಪಡಿಕೆಯಾಗದೆ ಒಬ್ಬನೇ ಪುತ್ರನಾಗಿ, ಮತ್ತು ಏಕಜಾತನಾದವನಾಗಿ, ವಾಕ್ಯವಾದ ದೇವರಾಗಿ, ಪ್ರಭುವಾದ ಯೇಸುಕ್ರಿಸ್ತನಾಗಿ; ಆತನ ಬಗ್ಗೆ ಪ್ರವಾದಿಯರು ಮೊದಲಿನಿಂದ ಹೇಳಿದಂತೆ, ಮತ್ತು ಪ್ರಭುವಾದ ಯೇಸುಕ್ರಿಸ್ತನೇ ನಮಗೆ ಕಲಿಸಿ ಪಿತೃಗಳ ನಂಬುಹೇಳಿಕೆಯನ್ನು ನಮಗೆ ಒಪ್ಪಿಸಿದಂತೆ ಎಂದು.</blockquote>
|