ಭಾರತದ ಉಪ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
*ಹಾಲಿ ಉಪರಾಷ್ಟ್ರಪತಿ [[ಹಮೀದ್ ಅನ್ಸಾರಿ]] ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆ.
*ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆ ವಿಷಯವಾಗಿ ಜುಲೈ 4ರಂದು ಅಧಿಸೂಚನೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಜುಲೈ 18. ಜುಲೈ 19ರಂದು ನಾಮಪತ್ರಗಳ ಪರಿಶೀಲನೆ. ನಾಮಪತ್ರ ವಾಪಸ್ ಪಡೆಯಲು ಜುಲೈ 21 ಕೊನೆಯ ದಿನ. ಆಗಸ್ಟ್ 5ರಂದೇ ಮತ ಎಣಿಕೆಯೂ ನಡೆಯಲಿದೆ. (ಚುನಾವಣಾ ಆಯುಕ್ತ ನಸೀಮ್ ಜೈದಿ)<ref>[http://www.prajavani.net/news/article/2017/06/29/502422.html ಆಗಸ್ಟ್ 5ರಂದು ಉಪರಾಷ್ಟ್ರಪತಿ ಚುನಾವಣೆ;ಏಜೆನ್ಸಿಸ್‌29 Jun, 2017] </ref>
===ಆಯ್ಕೆ ವಿಧಿ ವಿಧಾನ===
*ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು..
*ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.<ref>[http://www.kannadaprabha.com/nation/vice-president-poll-today-results-to-be-out-by-7-p-m-naidu-has-clear-edge-over-gopal-gandhi/299754.html]</ref>
 
===ವಿಪಕ್ಷ ಅಭ್ಯರ್ಥಿ===
*ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು 11 ಜುಲೈ 2017 ಮಂಗಳವಾರ ಸಭೆ ಸೇರಿ ಗೋಪಾಲ ಕೃಷ್ಣ ಗಾಂಧಿಯನ್ನು ಒಮ್ಮತದಿಂದ ಆಯ್ಕೆ ಮಾಡಿವೆ.<ref>http://www.prajavani.net/news/article/2017/07/11/505251.html</ref>