ಮೋತಿಲಾಲ್ (ಹಿಂದೀ ಚಿತ್ರ ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ಫೋಬಾಕ್ಸ್
No edit summary
೧೬ ನೇ ಸಾಲು:
}}
'''ಮೋತೀಲಾಲ್''' (೧೯೧೦-೧೯೬೫) ಭಾರತೀಯ ಚಿತ್ರ ನಟ. ಅವರ ಪೂರ್ಣ ಹೆಸರು ಮೋತೀಲಾಲ್ ರಾಜವಂಶ್. ಹಿಂದಿ ಚಿತ್ರರಂಗದಲ್ಲಿ ಸ್ವಾಭಾವಿಕ ಅಭಿನಯವನ್ನು ತೆರೆಗೆ ತಂದ ಮೊದಲ ನಟನೆಂದು ಗುರುತಿಸಲಾಗುತ್ತದೆ.
 
[[ಚಿತ್ರ:Motilal.jpg ]]
 
==ಜನನ, ಬಾಲ್ಯ ಮತ್ತು ಯೌವನ==
೪ನೇ ಡಿಸೆಂಬರ್ ೧೯೧೦ರಲ್ಲಿ [[ಶಿಮ್ಲಾ]]ದಲ್ಲಿ ಜನಿಸಿದ ಮೋತೀಲಾಲ್ [[ದಿಲ್ಲಿ]]ಯ ಸುಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರ ತಂದೆ ಖ್ಯಾತಿವೆತ್ತ ಶಿಕ್ಷಣತಜ್ಞರಾಗಿದ್ದರು. ಆದರೆ ಮೋತೀಲಾಲರು ಒಂದು ವರ್ಷದ ಮಗುವಾಗಿದ್ದಾಗಲೇ ಅವರು ತೀರಿಕೊಂಡರು. ಆ ಕಾರಣದಿಂದಾಗಿ [[ಉತ್ತರಪ್ರದೇಶ]]ದ ಹೆಸರುವಾಸಿ ಸಿವಿಲ್ ಸರ್ಜನರಲ್ಲೊಬ್ಬರಾಗಿದ್ದ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಶಿಮ್ಲಾದ ಶಾಲೆಯಲ್ಲಿ ಪ್ರಾಥಮಿಕ ಇಂಗ್ಲಿಷ ವಿದ್ಯಾಭ್ಯಾಸದ ಬಳಿಕ ದಿಲ್ಲಿಯಲ್ಲಿ ಮಾಧ್ಯಮಿಕ ಹಾಗೂ ಕಾಲೇಜ್ ಶಿಕ್ಷಣವನ್ನು ಪಡೆದರು.