ಚಂದ್ರಶೇಖರ ಪಾಟೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಉಲ್ಲೇಖಗಳು
೨೩ ನೇ ಸಾಲು:
}}
 
'''ಚಂದ್ರಶೇಖರ ಪಾಟೀಲ''' ([[ಜೂನ್ ೧೮]], [[೧೯೩೯]]) ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದಾರೆ. '''ಚಂದ್ರಶೇಖರ ಪಾಟೀಲರ''' ಕಾವ್ಯನಾಮ "ಚಂಪಾ".<ref>{{cite web|url=http://www.karnataka.com/personalities/chandrashekhar-patil-kannada-writer/|title=Chandrashekar Patil|website=Karnataka.com|publisher=Oneindia.com|accessdate=27 September 2015}}</ref>
 
==ಜೀವನ==
ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ೧೯೩೯ರ ಜೂನ್‌ ೧೮ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್‌ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಇದಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು.<ref>{{cite news|url=http://www.thehindu.com/news/national/kalburgi-murder-kannada-writer-to-return-pampa-award/article7622303.ece|title=Kalburgi murder: Kannada writer to return Pampa award|date=September 7, 2015|work=The Hindu|accessdate=27 September 2015}}</ref>
 
==ಅಧ್ಯಾಪನದ ಜೊತೆಗೆ ಬರಹ==
೫೭ ನೇ ಸಾಲು:
==ವಿನೋದ ಪ್ರವೃತ್ತಿ==
ಚಂದ್ರಶೇಖರ ಪಾಟೀಲರು 'ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ; ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಾರೆ.
 
==ಚಂಪಾರ ಒಂದು ಕವಿತೆ==
===''ಅತಿಥಿ'''===
ಹಿಂದಿಬ್ಬರು ಮುಂದಿಬ್ಬರು ರಾಜಭಟ್ಟರ ನಡುವೆ
 
ನಡೆದಾಗ ದೊಡ್ಡಗೇಟು ಕಿರುಗುಡುತ್ತದೆ
 
ಒಂದು ಮೂಲೆಗೆ ಗಾಂಧಿ-ಇನ್ನೊಂದು ಮೂಲೆಗೆ ನೆಹೆರು
 
ಗೋಡೆಯ ತುಂಬಾ ಮತ್ತೊಬ್ಬ ಗಾಂಧಿಯ ಅಮರ ಸಂದೇಶ
 
 
ಭೂಗರ್ಭದ ಕಾಲಕೋಶಕ್ಕಾಗಿ ಹೆಸರು-ದೆಸೆ-ಕಿರಿಗೋತ್ರ
 
ದಾಖಲಾಗುತ್ತದೆ-ಎರಡು ಪೋಜಿನ ಫೋಟೋ ಸಮೇತ
 
ಮತ್ತೇ ರಾಜಭಟರ ನಡುವೆ ಅತಿಥಿಗೃಹಕ್ಕೆ ಪ್ರವೇಶ
 
ಸಣ್ಣಸರಳಿನ ಬಾಗಿಲು ಸರಳವಾಗಿ ತೆರೆದು ಸರಳವಾಗಿ ಮುಚ್ಚುತ್ತದೆ
 
 
ಮಲಗಲು ಹಾಸಿಗೆ, ಹೊದೆಯಲು ಕಂಬಳಿ, ಹೇಲಲು ಪಾಯಖಾನೆ
 
ಎಲ್ಲಾ ಒಂದೇ ಕಡೆ ಸರ್ವತಂತ್ರ ಸ್ವತಂತ್ರ ಪ್ರದೇಶ
 
ಓದಲು ಪಂಚತಂತ್ರ, ಧರ್ಮಶ್ರೀ,ಪುರುಶೋತ್ತಮನ ಸಾಹಸಗಳು
 
ಬರೆಯಬೇಕಿನಿಸಿದರೆ ಬುಗುರಿದೆ, ಖಾಲಿ ಗೋಡೆ ಇದೆ
 
 
ಹೊತ್ತು ಹೊತ್ತಿಗೆ ಡಾಕ್ಟ್ಟರರ ನಾಲಿಗೆಯ ಶಬರಿ ಸ್ಪರ್ಶದ ಊಟ
 
ಕಟ್ ಕಟ್ ಬೂಟಿನ ಯೋಗಕ್ಷೇಮ,ಆಕಾಶದಲ್ಲಾಗೀಗ
 
ವರ್ಣಮಯ ಕ್ರಾಂತಿಯ ಸುದ್ದಿ,ಗಿಳಿವಿಂಡು,ದಾಸರ ಹಾಡು
 
ಕುಂಡಿಯಹಿಂದೆ ಕೈಕಟ್ಟಿಕೊಂಡು ತಿರಗುಣಿಯ ಓಡಾಟ
 
 
ಸಂಜೆ ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ
 
ಮುಗಿಲಲ್ಲಿ ಎಲ್ಲೋ ಹಕ್ಕಿಯ ಲಗಾಟ ಹೊಡೆದಾಗ
 
ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ
 
ಮೈತುಂಬಾ ತುಂಗಭದ್ರೆಯ ಸೆಳವು ಹೆಚ್ಚುತ್ತದೆ
 
([['ಗಾಂಧಿ ಸ್ಮರಣೆ']]ಸಂಕಲನದಿಂದ)
 
==ಮಾಹಿತಿ ಕೃಪೆ==
ಕಣಜ
 
== ಉಲ್ಲೇಖಗಳು ==
 
{{reflist}}
[[Category:ಸಾಹಿತಿಗಳು|ಚಂದ್ರಶೇಖರ ಪಾಟೀಲ]]
[[Category: ಕನ್ನಡ ಸಾಹಿತ್ಯ]]
"https://kn.wikipedia.org/wiki/ಚಂದ್ರಶೇಖರ_ಪಾಟೀಲ" ಇಂದ ಪಡೆಯಲ್ಪಟ್ಟಿದೆ