"ಪಂಜಾಬ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Clean up ; template fixing using AWB
ಚು (Clean up ; template fixing using AWB)
}}
 
ಭಾರತದ ವಾಯುವ್ಯ ಭಾಗದಲ್ಲಿರುವ '''ಪಂಜಾಬ್''' ({{lang|pa|ਪੰਜਾਬ}}),ಅನ್ನು [[ಹಿಮಾಚಲ ಪ್ರದೇಶ]], [[ಜಮ್ಮು ಕಾಶ್ಮೀರ|ಜಮ್ಮು-ಕಾಶ್ಮೀರ]], [[ಹರ್ಯಾಣ]], [[ರಾಜಸ್ಥಾನ]] ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಸುತ್ತುವರಿದಿದೆ. ರಾಷ್ಟ್ರದ ಚಿಕ್ಕ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನ ಸಮೃದ್ಧಿ ಭವ್ಯವಾಗಿದೆ.1947 ರಲ್ಲಿ ಪಂಜಾಬ್ ಪ್ರದೇಶವನ್ನು ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವೆಂದು ವಿಂಗಡಿಸಿದ ಬಳಿಕ 1947 ರಲ್ಲಿ ಪಂಜಾಬ್ ಮತ್ತೊಮ್ಮೆ ವಿಂಗಡನೆಯಾಗಿ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ಎಂದಾಯಿತು.
 
ಇದು ಗ್ರೀಕರಿಗೆ, ಅಫ್ಘಾನಿಯರಿಗೆ, ಇರಾನಿಗಳಿಗೆ ಮತ್ತು ಮಧ್ಯ ಏಶ್ಯಾದ ಜನರಿಗೆ ರಹದಾರಿಯಾಗಿ ಉಳಿಯಿತು.ಪಂಜಾಬ್ ಗೆ ಐತಿಹಾಸಿಕ ಮಹತ್ವವಿದ್ದು, ಇದರ ಕುರಿತಾಗಿ ಗ್ರೀಕರು ಮತ್ತು ಝೋರೊಸ್ಟ್ರಿಯನ್ ಗಳಲ್ಲಿ ಕೂಡ ಜನಪ್ರಿಯತೆ ಇದೆ. ಅವರ ಪ್ರಕಾರ ಪಂಜಾಬ್ ಐದು ನದಿಗುಳು ಸಂಧಿಸುವ ಭೂಮಿ. ಪಂಜಾಬ್ ನಲ್ಲಿ ಕೃಷಿ ಜನರ ಪ್ರಮುಖ ಉದ್ಯೋಗವಾಗಿದೆ. ಪಂಜಾಬ್ ನಲ್ಲಿ ಸಿಖ್ ಧರ್ಮದ ಅನುಯಾಯಿಗಳು ಬೃಹತ್ ಸಂಖ್ಯೆಯಲ್ಲಿದ್ದಾರೆ.ಯಂತ್ರಗಳ ಬಿಡಿಭಾಗಗಳು, ಜವಳಿ, ಹೊಲಿಯುವ ಯಂತ್ರ, ಕ್ರೀಡಾ ಸಾಮಗ್ರಿಗಳು, ಪಿಷ್ಟ, ಪ್ರವಾಸೋದ್ಯಮ, ರಸಗೊಬ್ಬರಗಳು, ಸೈಕಲ್, ಸಕ್ಕರೆ ಮತ್ತು ಉಡುಪುಗಳ ಉತ್ಪಾದನೆ ಮಾಡುವ ಕಾರ್ಖಾನೆಗಳು ಇಲ್ಲಿವೆ. ಪಂಜಾಬ್ ನಲ್ಲಿ ಕೃಷಿ ಉತ್ಪನ್ನಗಳು, ವೈಜ್ಞಾನಿಕ ಉಪಕರಣ ಮತ್ತು ವಿದ್ಯುತ್ ವಸ್ತುಗಳು ಉತ್ಪಾದನೆಯಾಗುತ್ತದೆ.<ref>http://punjab.gov.in/</ref>
ಪಂಜಾಬ್ ಪ್ರವಾಸೋದ್ಯಮ ಪಂಜಾಬಿ ಸಂಸ್ಕೃತಿ ಮತ್ತು ಸಂಪ್ರದಾಯದವನ್ನು ಆನಂದಿಸಲು ಅವಕಾಶವನ್ನು ನೀಡುತ್ತದೆ. ಇಲ್ಲಿರುವ ಹೆಚ್ಚಿನವರು ಸಿಖ್ ಧರ್ಮವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಅಮೃತಸರದಲ್ಲಿರುವ ಸ್ವರ್ಣ ಮಂದಿರ ಸಿಖ್ ಧರ್ಮಿಯರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಪಂಜಾಬ್ ನ ಪ್ರತಿಯೊಂದು ಗ್ರಾಮದಲ್ಲೂ ಗುರುದ್ವಾರವಿದೆ. ಹಿಂದೂ ಧರ್ಮ ಇಲ್ಲಿನ ಜನರು ಅನುಸರಿಸುವ ಎರಡನೇ ಧರ್ಮ. ಪಂಜಾಬಿ ಪಂಜಾಬ್ ನ ಅಧಿಕೃತ ಭಾಷೆ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಇಲ್ಲಿನ ಜನರು ಜೀವನವನ್ನು ಆನಂದಿಸುತ್ತಾರೆ.
 
ಸಂಗೀತದೊಂದಿಗೆ ನೃತ್ಯ, ಅಸಂಖ್ಯಾತ ತಿನಿಸು ಇಲ್ಲಿ ಸಾಮಾನ್ಯ. ಲೊಹ್ರಿ, ಬಸಂತ್, ಬೈಸಖಿ ಮತ್ತು ತೀಜ್ ಪಂಜಾಬ್ ನ ಕೆಲವು ಪ್ರಮುಖ ಹಬ್ಬಗಳಾಗಿವೆ. ಬಂಗ್ರಾ ಪಂಜಾಬ್ ನ ಜನಪ್ರಿಯ ನೃತ್ಯವಾಗಿದೆ. ಇದು ಮೊದಲು ಸುಗ್ಗಿಯ ನೃತ್ಯವಾಗಿತ್ತು. ಆದರೆ ಈಗ ಇದು ವಿಶ್ವದಾದ್ಯಂತ ಮಾನ್ಯತೆಯನ್ನು ಪಡೆಯುತ್ತಿದೆ. ಜಾನಪದ ಪಂಜಾಬ್ ನ ಇನ್ನೊಂದು ಅಂಶವಾಗಿದೆ. ಇದರಲ್ಲಿ ಗತ ಇತಿಹಾಸವನ್ನು ನಿರೂಪಿಸುತ್ತದೆ.
 
== ಜಿಲ್ಲೆಗಳು ==
* [[ಸಂಗ್ರೂರ್]]
* [[ತರನ್ ತಾರನ್]]
 
 
{{colend|2}}
{{reflist}}
 
<br {{clear="all">}}
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
 
೪,೭೫೩

edits

"https://kn.wikipedia.org/wiki/ವಿಶೇಷ:MobileDiff/789629" ಇಂದ ಪಡೆಯಲ್ಪಟ್ಟಿದೆ