ಏಣಗಿ ಬಾಳಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ವೃತ್ತಿಜೀವನದ ಹಲವು ಮಜಲುಗಳು: clean up, replaced: ನಾಡೋಜ ಪ್ರಶಸ್ತಿ ವಿಜೇತರು → ನಾಡೋಜ ಪ್ರಶಸ್ತಿ ಪುರಸ್ಕೃ using AWB
ಹೆಚ್ಚಿನ ವಿವಿರ ಸೇರಿಸಿದೆ
೧ ನೇ ಸಾಲು:
ಕನ್ನಡ ವೃತ್ತಿರಂಗಭೂಮಿ ಕಂಡ ಅವಿಸ್ಮರಣೀಯ ಕಲಾವಿದ.
==ಜನನ, ಬಾಲ್ಯ ಮತ್ತು ವೃತ್ತಿಜೀವನ==
ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ ಬಾಳಪ್ಪನವರ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು. ತಂದೆಯವರನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಹಣದ ಕೊರತೆಯಿಂದ ಮುಂದೆ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಅವರ ಪಾಲಿಗೆ ಬೇಸಾಯ ಹಾಗೂ ಪಶುಪಾಲನೆ ಅವರ ಆದ್ಯತೆಯಾಯಿತು. ಹಳ್ಳಿಯ ಬಯಲಾಟ,ದೊಡ್ಡಾಟದ ಬಗ್ಗೆ ಒಲವು ಬೆಳೆಯಿತು. ಲವ-ಕುಶ ನಾಟಕ ನೋಡಿದ ಮೇಲೆ ಅವರ ಮನಸ್ಸೆಲ್ಲಾ ನಾಟಕದ ಪಾತ್ರಗಳಲ್ಲೇ ಸುತ್ತುತ್ತಿತ್ತು. ಆ ಆಟವನ್ನು ಆಯೋಜಿಲ್ಸಿದ ಗುರುಗಳನ್ನು ಬಾಳಪ್ಪನವರ ಮೈಕಟ್ಟು ಬಹಳ ಆಕರ್ಷಣೀಯವಾಗಿತ್ತು. ಸುಮಧುರ ಕಂಠದ ಸೇರುವಿಕೆಯಿಂದ ಅವರ ಪಾತ್ರಗಳಲ್ಲಿ ಪ್ರಭುದ್ಧತೆ ಕಾಣತೊಡಗಿತು. ತಮ್ಮ ೧೦ ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ರಂಗಮಂಚದ ಸವಿಕಂಡರು. ಅವರ ಮೈಮಾಟ ಸ್ತ್ರೀಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಚಿಕ್ಕೋಡಿ ಸಿದ್ಧಲಿಂಗಸ್ವಾಮಿಗಳ ಕಂಪೆನಿಯ ’ಮಹಾನಂಜನಾಟಕದಲ್ಲಿ ಬಾಲನಟನಾಗಿ ಪ್ರಹ್ಲಾದನಾಗಿ, ಬಹಳ ಅದ್ಬುತ ಅಭಿನಯವನ್ನು ಕೊಟ್ಟರು. ಕೌಸಲ್ಯೆಯ ಪಾತ್ರದಲ್ಲಿ ಅವರು ಬಹಳ ಯಶಸ್ಸನ್ನು ಕಂಡರು. ಕಂಪೆನಿ ಮುಚ್ಚಿದಮೇಲೆ 'ಅಬ್ಬಿಗೇರಿ ಕಂಪೆನಿ'ಗೆ ಸೇರಿ ಅಲ್ಲಿ ಬಾಲನಟನಾಗಿ ಕೆಲಸಮಾದಿದರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ 'ಕಿತ್ತೂರು ರಾಣಿ ಚೆನ್ನಮ್ಮ ನಾಟಕ' ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ಹೋಗಿ ನೆಲೆಸಲು ಮನಸ್ಸುಬರಲಿಲ್ಲ. ಸಿದ್ಧಲಿಂಗಸ್ವಾಮಿಗಳೇ ನಡೆಸುತ್ತಿದ್ದ ಮತ್ತೊಂದು 'ಮಾರಿಕಾಂಬಾ ನಾಟಕ ಮಂಡಲಿ'ಗೆ ಅವರು ಸೇರಿದರು. ಚಿಕ್ಕವರಿದ್ದಾಗ ಊರಿನ ಭಜನಾ ಮಂಡಳಿಯಲ್ಲಿ ಸೇರಿಕೊಂಡು ಹಾಡುತ್ತಿದ್ದರು. ಗುರುಸಿದ್ದಯ್ಯ ಎಂಬುವವರು ಮೊತ್ತಮೊದಲಿಗೆ ಇವರನ್ನು ಸ್ಟೇಜ್ ಹತ್ತಿಸಿದರು. ಊರಲ್ಲೆ ನಡೆದ 'ಲವ-ಕುಶ' ಎಂಬ ನಾಟಕದಲ್ಲಿ ಲವನ ಪಾತ್ರ ಮಾಡುವ ಮೂಲಕ ರಂಗ ಪ್ರವೇಶವಾಯ್ತು. ಊರಿನ ಕಲಾವಿದರನ್ನೇ ಸೇರಿಸಿಕೊಂಡು ಆಡಿದ 'ಪಾದುಕಾಪಟ್ಟಾಭಿಷೇಕ' ನಾಟಕ ತುಂಬ ಯಶಸ್ವಿ ಆಯಿತು. ನಾಟಕ ಮಾಸ್ತರರಾಗಿದ್ದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಬಾಳಪ್ಪನವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಉದ್ಧರಿಸಿದರು. ಸ್ತ್ರೀ ಪಾತ್ರದ ಮೂಲಕವೇ ಇವರು ಪ್ರಸಿದ್ಧರಾದವರು. 'ಕಿತ್ತೂರು ರುದ್ರಮ್ಮ' ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ.
==ಸ್ತ್ರೀಪಾತ್ರದಲ್ಲಿ ರಂಜಿಸಿದರು==
ಉತ್ತರ ಕನ್ನಡದ ಸಿರಸಿಯಲ್ಲಿ ’ವೀರರಾಣಿ ರುದ್ರಮ್ಮ’ ಪ್ರದರ್ಶನವಾಯಿತು. ಅದರ ನಾಯಕಿಯ ಪಾತ್ರ ಅಪಾರಮನ್ನಣೆಗೆ ಪಾತ್ರವಾಯಿತು. ಒಂದು ದಿನ ನಾಯಕಿಯ ಪಾತ್ರಧಾರಿಣಿ ಮುನಿಸಿಕೊಂಡು ನಾಟಕದಲ್ಲಿ ಭಾಗವಹಿಸಲು ನಿರಾಕರಿಸಿದಳು. ಸ್ವಾಮಿಗಳು ಹರಸಾಹಸಮಾಡಿ ಒಪ್ಪಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಬಾಳಪ್ಪನವರಿಗೆ ರಾಣಿಯ ವೇಶ ಹಾಕಿ ರಂಗಮಂಚದಮೇಲೆ ಕಳಿಸಲಾಯಿತು. ಮಹಿಳಾ ವೇಶದಲ್ಲಿ ಖಡ್ಗಹಿಡಿದು ರಂಗವನ್ನು ಪ್ರವೇಶಿಸಿದ ಬಾಳಪ್ಪನವರ ಅಭಿನಯ ಅತ್ಯಂತ ಸಮರ್ಪಕವಾಗಿತ್ತು. ಸಭಿಕರೆಲ್ಲಾ ಅವರ ಅಭಿನಯದಿಂದ ಹರ್ಷಿತರಾದರು. ಈನಾಟಕ ಸಂಸ್ಥೆಯೂ ಸ್ವಲ್ಪದಿನಗಳ ಬಳಿಕ ಬಂದಾದರೂ ರಾಣಿಯ ಪಾತ್ರದಿಂದ ಬಾಳಪ್ಪನವರು ಅತಿ ಜನಪ್ರಿಯರಾದರು. ಪದೇ ಪದೇ ಬಂದಾಗುತ್ತಿದ್ದ ವೃತ್ತಿ ರಂಗಮಂದಿರಗಳ ವಹಿವಾಟು ಬಾಳಪ್ಪನವರಿಗೆ ಸರಿಬೀಳಲಿಲ್ಲ. 'ಹುಚ್ಚಪ್ಪ ಸೂಡಿ'ಯವರ ಜೊತೆಗೂಡಿ ಅವರೊಂದು ಹೊಸ 'ನಾಟಕ ಮಂಡಾಳಿಯನ್ನು ರಚಿಸಿದರು. ಅದೇ 'ಗುರುಸೇವಾ ಸಂಗೀತ ನಾಟಕ ಮಂಡಳಿ'. ’ಹೇಮರೆಡ್ಡಿ ಮಲ್ಲಮ್ಮ ಎಂಬ ನಾಟಕ ಕರ್ನಾಟಕದ ಮನೆಮಾತಾಯಿತು. 'ಗುರುಸೇವಾ ಸಂಸ್ಥೆ'ಯ ವತಿಯಿಂದ ಪುರಾಣ, ಐತಿಹಾಸಿಕ ಕಥೆಗಳ ಆಧಾರದಮೇಲೆ, ಸಂಸ್ಥ್ಯೆ ಹಲವಾರು ನಾಟಕಗಳು ಪ್ರದರ್ಶಿತಗೊಂಡವು.
"https://kn.wikipedia.org/wiki/ಏಣಗಿ_ಬಾಳಪ್ಪ" ಇಂದ ಪಡೆಯಲ್ಪಟ್ಟಿದೆ