ದ್ವಿತೀಯ ಆಂಗ್ಲೋ-ಸಿಖ್‌‌ ಸಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up My contribs round 2 using AWB
೧೭ ನೇ ಸಾಲು:
 
==ಸಮರದ ಹಿನ್ನೆಲೆ==
ಪಂಜಾಬ್‌‌ನ ಸಿಖ್ಖರ ಸಾಮ್ರಾಜ್ಯವನ್ನು ಹತ್ತೊಂಬತ್ತನೇ ಶತಮಾನದ ಆದಿಯ ವರ್ಷಗಳಲ್ಲಿ ಮಹಾರಾಜಾ ರಣಜಿತ್‌/ರಂಜಿತ್‌ ಸಿಂಗ್‌‌ರು ಸಂಘಟಿಸಿದರು ಹಾಗೂ ವಿಸ್ತರಿಸಿದರು. ಇದೇ ಅವಧಿಯಲ್ಲಿ, ಬ್ರಿಟಿಷ್‌‌ ಈಸ್ಟ್‌‌ ಇಂಡಿಯಾ ಕಂಪೆನಿಯ ಸಂಸ್ಥಾನಗಳನ್ನು, ಪಂಜಾಬನ್ನು ನೆರೆಯ ಪ್ರಾಂತ್ಯವಾಗಿಸುವವರೆಗೆ ವಿಸ್ತರಿಸಲಾಗಿತ್ತು. ಖಾಲ್ಸಾ ಸೇನಾಪಡೆಯ(ತಮ್ಮ ರಾಷ್ಟ್ರ ಹಾಗೂ ಧರ್ಮದ ಮೂರ್ತಸ್ವರೂಪವನ್ನಾಗಿ ಮೈದಾಳಿದ ಸಿಖ್ಖರ ಸೇನಾಪಡೆ) ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ತನ್ನ ರಾಜ್ಯದ ಮೇಲಿನ ಬ್ರಿಟಿಷರ ದುರಾಕ್ರಮಣವನ್ನು ತಡೆಯಲು ಹಾಗೂ [[ಅಫ್ಘಾನಿಸ್ತಾನ|ಆಫ್ಘಾನಿಸ್ತಾನ]] ಮತ್ತು [[ಕಾಶ್ಮೀರ|ಕಾಶ್ಮೀರ]] ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಸಿಖ್ಖರ ಪ್ರಾಂತ್ಯದ ಸೀಮೆಯನ್ನು ಉತ್ತರ ಹಾಗೂ ವಾಯುವ್ಯ ದಿಕ್ಕುಗಳಲ್ಲಿ ವಿಸ್ತರಿಸುವ ಉದ್ದೇಶದಿಂದ ಈಸ್ಟ್‌‌ ಇಂಡಿಯಾ ಕಂಪೆನಿಯೊಂದಿಗೆ ರಣಜಿತ್‌/ರಂಜಿತ್‌ ಸಿಂಗ್‌‌ ಅಹಿತರಕರ ಸಂಧಾನವನ್ನು ಕಾಯ್ದುಕೊಂಡು ಬಂದಿದ್ದನು.
 
1839ರಲ್ಲಿ ರಣಜಿತ್‌/ರಂಜಿತ್‌ ಸಿಂಗ್‌ರು ಮರಣಿಸಿದಾಗ ಸಿಖ್ಖರ ಸಾಮ್ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿಯು ಆರಂಭವಾಗತೊಡಗಿತು. ಕೇಂದ್ರೀಯ ದರ್ಬಾರಿನಲ್ಲಿ (ರಾಜಾಸ್ಥಾನ) ಅಲ್ಪಾವಧಿಯ ಅರಸರುಗಳ ಪರಂಪರೆಯೇ ಉಂಟಾಯಿತು ಹಾಗೂ ಖಾಲ್ಸಾ ಪಡೆ ಮತ್ತು ದರ್ಬಾರಿನವರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಾ ಬಂದವು. ಈಸ್ಟ್‌‌ ಇಂಡಿಯಾ ಕಂಪೆನಿಯು ಪಂಜಾಬ್‌‌ನ ಗಡಿಪ್ರದೇಶಗಳಲ್ಲಿ ತನ್ನ ಸೇನಾಪಡೆಗಳ ಜಮಾವಣೆಯನ್ನು ಹೆಚ್ಚಿಸಿಕೊಳ್ಳಲು ಆರಂಭಿಸಿತು. ಅಂತಿಮವಾಗಿ, ಹೆಚ್ಚುತ್ತಾ ಹೋದ ಭಿನ್ನಾಭಿಪ್ರಾಯಗಳ ಒತ್ತಡವು ಖಾಲ್ಸಾ ಪಡೆಯನ್ನು ದುರ್ಬಲರಾದ ಹಾಗೂ ಪ್ರಾಯಶಃ ವಿಶ್ವಾಸಘಾತಕರಾಗಬಹುದಾದ ನಾಯಕರುಗಳ ನಾಯಕತ್ವದಲ್ಲಿ ಬ್ರಿಟಿಷ್‌ ಪ್ರಾಂತ್ಯದ ಮೇಲೆ ಆಕ್ರಮಣವನ್ನು ನಡೆಸುವಂತೆ ಪ್ರಚೋದಿಸಿತು. ಪ್ರಯಾಸಕರವಾದ ಹೋರಾಟದಿಂದ ಕೂಡಿದ್ದ ಪ್ರಥಮ ಆಂಗ್ಲೋ-ಸಿಖ್‌‌ ಸಮರದ ಅಂತ್ಯದಲ್ಲಿ ಖಾಲ್ಸಾ ಪಡೆಯು ಸೋಲನ್ನಪ್ಪಬೇಕಾಯಿತು.
 
===ಪ್ರಥಮ ಆಂಗ್ಲೋ-ಸಿಖ್‌‌ ಸಮರಾನಂತರದ ಪರಿಣಾಮಗಳು===
ಸಮರದ ಕೊನೆಯ ವೇಳೆಗೆ, ಸಿಖ್ಖರ ಸಾಮ್ರಾಜ್ಯವು ಕೆಲ ಅಮೂಲ್ಯವಾದ ಪ್ರಾಂತ್ಯಗಳನ್ನು (ಜುಲ್ಲುಂದೂರ್‌‌/ಜಲ್ಲಂದೂರು ಡೋಬ್‌) ಈಸ್ಟ್‌‌ ಇಂಡಿಯಾ ಕಂಪೆನಿಗೆ ಬಿಟ್ಟುಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತಲ್ಲದೇ, ಈಸ್ಟ್‌‌ ಇಂಡಿಯಾ ಕಂಪೆನಿಯು ಜಮ್ಮುವಿನ ಅರಸರಾದ ಮಹಾರಾಜಾ ಗುಲಾಬ್‌‌ ಸಿಂಗ್‌‌ರಿಂದ ಭಾರೀ ಪ್ರಮಾಣದ ನಗದು ಹಣವನ್ನು ಪಡೆದು, ಸಿಖ್ಖರ ಸಾಮ್ರಾಜ್ಯದಿಂದ [[ಕಾಶ್ಮೀರ|ಕಾಶ್ಮೀರ]]ವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿತು. ಗುಲಾಬ್‌‌ ಸಿಂಗ್‌‌ರಿಗೆ ಸಹಾಯವಾಗುವಂತೆ ಕಾಶ್ಮೀರದ ಆಡಳಿತಾರೂಢ ಮಹಾರಾಜರನ್ನು ಪದಚ್ಯುತಗೊಳಿಸಲು ದಂಡಯಾತ್ರೆಯನ್ನು ಕೈಗೊಳ್ಳುವಂತೆ ಖಾಲ್ಸಾ ಪಡೆಯ ಕೆಲವರನ್ನು ಒತ್ತಾಯಪೂರ್ವಕವಾಗಿ ಕಳಿಸಲಾಯಿತು.<ref>ಹೆರ್ನಾನ್‌‌, p.575</ref>
 
ಅಪ್ರಾಪ್ತ ವಯಸ್ಕನಾಗಿದ್ದ ಸಿಖ್ಖರ ಸಾಮ್ರಾಜ್ಯದ ಮಹಾರಾಜಾ ದುಲೀಪ್‌ ಸಿಂಗ್‌‌ನಿಗೆ ತನ್ನ ಗದ್ದುಗೆಯನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಯಿತಾದರೂ, ಓರ್ವ ಬ್ರಿಟಿಷ್‌‌ ಪ್ರತಿನಿಧಿಯಾದ ಸರ್‌‌ ಹೆನ್ರಿ ಲಾರೆನ್ಸ್‌ ಎಂಬಾತನು ದರ್ಬಾರಿನ ರಾಜನೀತಿಯ ಮೇಲೆ ನಿಯಂತ್ರಣವನ್ನು ಹೊಂದಿದ್ದನು. ದುಲೀಪ್‌ ಸಿಂಗ್‌‌'ನ ತಾಯಿ, ಮಹಾರಾಣಿ ಜಿಂದ್‌‌ ಕೌರ್‌‌ಳು, ರಾಜಪ್ರತಿನಿಧಿಯಾಗಿ ಹಿಂದೆ ತನಗಿದ್ದ ಕೆಲ ಅಧಿಕಾರಗಳನ್ನು ಮರುಗಳಿಸಿಕೊಳ್ಳಲು ಸತತವಾಗಿ ಯತ್ನಿಸುತ್ತಿದ್ದರೂ, ಅಂತಿಮವಾಗಿ ಲಾರೆನ್ಸ್‌ನಿಂದ ಗಡೀಪಾರುಗೊಳಿಸಲ್ಪಟ್ಟಳು. ಕೆಲ ಸಿಖ್ಖರ ದಳಪತಿಗಳು ಹಾಗೂ ಆಸ್ಥಾನಿಕರು ಆಕೆಯ ಗಡೀಪಾರನ್ನು ಸ್ವಾಗತಿಸಿದರೂ, ಇತರರು ಲಾರೆನ್ಸ್‌'ನ ಕ್ರಮದಿಂದ ತೀವ್ರ ಅಸಮಾಧಾನಗೊಂಡರು.<ref>ಹೆರ್ನಾನ್‌‌, p.576</ref>
೪೨ ನೇ ಸಾಲು:
ಈ ನಡುವೆ, ಮುಲ್ತಾನ್‌‌ನಲ್ಲಿ ನಡೆದ ಘಟನೆಗಳನ್ನು ಕುರಿತು ಮಾಹಿತಿ ಪಡೆದ ನಂತರ, ಬಂಗಾಳ ಸೇನಾಪಡೆಯ ಪ್ರಧಾನ ದಂಡನಾಯಕನಾದ ಸರ್‌ ಹುಗ್‌‌ ಗೌಘ್‌ ಎಂಬಾತನಿಗೆ ಕರ್ರೀಯು ಪ್ರಧಾನ ಬ್ರಿಟಿಷ್‌‌ ಸೇನಾಪಡೆಯನ್ನು ಮುಲ್ತಾನ್‌‌ನೆಡೆಗೆ ಕಳುಹಿಸಬೇಕೆಂದು ಶಿಫಾರಸು ಮಾಡಿ ಪತ್ರವೊಂದನ್ನು ಬರೆದನು. ಆದಾಗ್ಯೂ ಗವರ್ನರ್‌ ಜನರಲ್‌‌/ಮಹಾಮಂಡಲಾಧಿಪತಿಯಾದ ಡಾಲ್‌ಹೌಸಿಯ ಬೆಂಬಲವನ್ನು ಪಡೆದಿದ್ದ ಗೌಘ್‌‌‌ನು, ಈಸ್ಟ್‌‌ ಇಂಡಿಯಾ ಕಂಪೆನಿಯ ಪ್ರಧಾನ ಸೇನಾಘಟಕಗಳನ್ನು ಬೇಸಿಗೆಯ ಅವಧಿ ಹಾಗೂ ಮುಂಗಾರಿನ ಋತುಗಳ ಕೊನೆಗೊಳ್ಳುವವರೆಗೆ ಎಂದರೆ ನವೆಂಬರ್‌ ತಿಂಗಳಿನವರೆಗೆ ಪಂಜಾಬ್‌‌ನೆಡೆಗೆ ಕಳುಹಿಸಲು ಸಾಧ್ಯವಿಲ್ಲವೆಂದು ನಿರಾಕರಿಸಿದನು.<ref>ಮಾಲ್ಲೆಸನ್‌‌, ಜಾರ್ಜ್‌ ಬ್ರೂಸ್‌: ''ಡಿಸಿಸೀವ್‌ ಬ್ಯಾಟಲ್ಸ್‌ ಆಫ್‌‌ ಇಂಡಿಯಾ'' , p.40</ref> ಬದಲಿಗೆ, ಕರ್ರೀಯು ಸ್ಥಳೀಯವಾಗಿ ನೇಮಕಗೊಂಡ ಸೈನಿಕರು ಹಾಗೂ ಖಾಲ್ಸಾದಿಂದ ಪ್ರತ್ಯೇಕಗೊಂಡ ದಳಗಳನ್ನು ಸೇರಿಸಿಕೊಂಡು ಸೈನ್ಯಾಧಿಪತಿ/ಜನರಲ್‌ ವ್ಹಿಶ್‌‌ರ ನೇತೃತ್ವದಡಿಯಲ್ಲಿ ಬಂಗಾಳ ಸೇನಾಪಡೆಯ ಸಣ್ಣ ತುಕಡಿಯೊಂದನ್ನು ನಗರವನ್ನು ವಶಪಡಿಸಿಕೊಳ್ಳಲು ಕಳುಹಿಸಿಕೊಟ್ಟನು. ಈ ಹೆಚ್ಚುವರಿ ಸೇನೆಗಳು ಮುಲ್ತಾನ್‌‌ನಲ್ಲಿ ಎಡ್ವರ್ಡೆಸ್‌ನನ್ನು ಆಗಸ್ಟ್‌ನ 18ರಿಂದ 28ರ ದಿನಾಂಕಗಳ ನಡುವೆ ಸೇರಿಕೊಂಡವು. ಅನೇಕ ರಾಜಕೀಯ ಪ್ರತಿನಿಧಿಗಳು ನೀಡಿದ ಎಚ್ಚರಿಕೆಯ ಮೇರೆಗೆ, ಛತ್ತಾ/ಟ್ಟಾರ್‌‌ ಸಿಂಗ್‌‌'ರ ಪುತ್ರ ಸರದಾರ ಷೇರ್‌‌ ಸಿಂಗ್‌ ಅಟ್ಟಾ/ತ್ತಾರಿವಾಲಾನ ನೇತೃತ್ವದಡಿಯಲ್ಲಿ ಬೃಹತ್‌‌ ದತ್ತದಳವನ್ನು ಕೂಡಾ ಖಾಲ್ಸಾ ಪಡೆಯು ಸೇರಿಸಿಕೊಂಡಿತು.
 
ಬಂಡಾಯ ಹೋರಾಟಗಳು ಸಿಡಿದೇಳುವ ಮುನ್ನವೇ ಅವನ್ನು ಹತ್ತಿಕ್ಕಲು ಆ ಹೊತ್ತಿಗಾಗಲೇ ಕೆಲ ಪ್ರತಿನಿಧಿಗಳು ಕ್ರಮ ತೆಗೆದುಕೊಳ್ಳುತ್ತಿದ್ದರು. ಪೇಷಾವರ ಮೂಲದ ಅನಿಯತ ಅಶ್ವಸೈನಿಕ ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್‌/ಮುಖ್ಯಾಧಿಕಾರಿ ಜಾನ್‌‌ ನಿಕೋಲ್‌‌ಸನ್‌‌ [[ಸಿಂಧೂ ನದಿ|ಸಿಂಧೂ ನದಿ]]ದಂಡೆಯಲ್ಲಿದ್ದ ಮಹತ್ವದ ಅಟ್ಟಾಕ್‌ ಕೋಟೆಯನ್ನು ತಾವು ಬಂಡಾಯವೇಳಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿರದಿದ್ದ ಸಿಖ್ಖರ ಕೋಟೆರಕ್ಷಕಸೈನ್ಯದಿಂದ ಅವರು ಹೋರಾಟಕ್ಕೆ ಇನ್ನೂ ತಯಾರಾಗದಿರುವಾಗಲೇ ವಶಪಡಿಸಿಕೊಂಡನು. ಅದಾದ ನಂತರ ಜೇಮ್ಸ್‌ ಅಬಾಟ್ಟ್‌‌'ನ ಸ್ಥಳೀಯ ಹಝಾರಾ ಪಡೆಯೊಂದಿಗೆ ನಿಕೋಲ್‌‌ಸನ್‌‌'ನ ಪಡೆಯು ಸೇರಿಕೊಂಡು ಪಂಜಾಬ್‌‌ನ ಇತರ ಭಾಗಗಳಿಂದ ಹಝಾರಾವನ್ನು ಪ್ರತ್ಯೇಕಿಸುವ ಮಾರ್ಗಲ್ಲಾ ಗುಡ್ಡಗಾಡು ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದುವರೆಯಿತು. ಛತ್ತಾ/ಟ್ಟಾರ್‌‌ ಸಿಂಗ್‌‌ನು ಆಗಸ್ಟ್‌ನಲ್ಲಿ ಬಹಿರಂಗವಾಗಿ ಬಂಡಾಯವನ್ನು ಘೋಷಿಸಿದಾಗ, ಆತನ ಪಡೆಗಳು ಕದನವನ್ನು ಮಾಡದೇ ಹಝಾರಾವನ್ನು ತೊರೆಯಲು ಸಾಧ್ಯವಾಗಲಿಲ್ಲ. ಛತ್ತಾ/ಟ್ಟಾರ್‌‌ ಸಿಂಗ್‌‌ನು ಎರಡು ಬಾರಿ ಗುಡ್ಡಗಾಡು ಪ್ರದೇಶದ ಕಣಿವೆ ಪ್ರದೇಶಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಆತ ಅದರ ಅನುಕೂಲತೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲೇ ಇಲ್ಲವಾದುದರಿಂದ (ತನ್ನ ಹಿರಿಯ ಅಧಿಕಾರಿಗಳ ನಡುವಿನ ಒಡಕುಗಳು ಹಾಗೂ ಬ್ರಿಟಿಷ್‌ರ-ಪರವಾದ ‌ಅನಿಯತ ಸೈನಿಕರುಗಳಿಂದ ಆಗುತ್ತಿದ್ದ ಸತತ ಕಿರುಕುಳಗಳಿಂದಾಗಿ), ಹಝಾರಾಗೆ ಹಿಮ್ಮೆಟ್ಟಬೇಕಾಯಿತು.
 
ಷೇರ್‌‌ ಸಿಂಗ್‌‌'ನ ಸೇನಾಪಡೆಯು ಬಹಿರಂಗವಾಗಿ ಸೆಪ್ಟೆಂಬರ್‌ 14ರಂದು ಮುಲ್ತಾನ್‌‌ನಲ್ಲಿ ಬಂಡಾಯವೆದ್ದಿತು. ಆದಾಗ್ಯೂ ಆತನು ಮುಲ್‌ರಾಜ್‌‌ನೊಂದಿಗೆ ಸಖ್ಯ ಬೆಳೆಸಲಿಲ್ಲ. ಆತ ಹಾಗೂ ಮುಲ್‌ರಾಜ್‌‌ ಈರ್ವರೂ ಎಚ್ಚರಿಕೆಯಿಂದ ಆಯ್ಕೆ ಮಾಡಿದ ತಟಸ್ಥ ಪ್ರದೇಶದಲ್ಲಿ ಸೇರಿ ಸಮಾಲೋಚನೆ ನಡೆಸಿದರು, ಆ ಸಭೆಯಲ್ಲಿ ಷೇರ್‌‌ ಸಿಂಗ್‌‌'ನ ಸೇನಾಪಡೆಗೆ ಮುಲ್‌ರಾಜ್‌‌ ತನ್ನ ಖಜಾನೆಯಿಂದ ಸ್ವಲ್ಪ ಹಣವನ್ನು ನೀಡುವುದೆಂದು ಹಾಗೂ ತದನಂತರ ಆ ಪಡೆಯು ಉತ್ತರದಿಕ್ಕಿನಲ್ಲಿ ಮಧ್ಯ ಪಂಜಾಬ್‌‌ನೆಡೆಗೆ ಸಾಗಿ ಅಂತಿಮವಾಗಿ ಛತ್ತಾ/ಟ್ಟಾರ್‌‌ ಸಿಂಗ್‌‌ನೊಡನೆ ಮತ್ತೆ ಸೇರಿಕೊಳ್ಳುವುದೆಂದು ನಿರ್ಧಾರವಾಯಿತು. ಅಷ್ಟರಲ್ಲಿ, ವ್ಹಿಶ್‌ನಿಗೆ ಆತನು ಮತ್ತೆ ಸೇನೆಯನ್ನು ಬಲಪಡಿಸಿಕೊಳ್ಳುವುದರೊಳಗೆ ಮುತ್ತಿಗೆ ಹಾಕಲು ಆದೇಶಿಸಲಾಯಿತು.
೯೪ ನೇ ಸಾಲು:
* 70th ಬಂಗಾಳ ಪದಾತಿ ದಳ - 5th ದಂಡು ತುಕಡಿ, ರಜಪೂತ್‌ ತುಕಡಿ
* 19th ಬಾಂಬೆ ಪದಾತಿ ದಳ - 2nd ದಂಡು ತುಕಡಿ, ಜಾಟ್‌ ತುಕಡಿ
* ಕಾರ್ಪ್ಸ್‌ ಆಫ್‌ ಗೈಡ್ಸ್‌ - 10 ಗೈಡ್ಸ್‌ ಅಶ್ವಸೈನಿಕ ಪಡೆ ([[ಪಾಕಿಸ್ತಾನ|ಪಾಕಿಸ್ತಾನ]])
* 1st ಬಾಂಬೆ ಅಶ್ವಸೈನಿಕ ಪಡೆ - ಕನ್ನಾಟ್‌ನ 13th ಡ್ಯೂಕರ ಖಾಸಗೀ ಭಲ್ಲೆ ಅಶ್ವಾರೋಹಿಗಳ ಪಡೆ
* 1st ಸಿಖ್ಖರ ಸ್ಥಳೀಯ ಪದಾತಿ ದಳ ಮತ್ತು 2nd ಸಿಖ್‌‌/ಸಿಖ್ಖರ ಸ್ಥಳೀಯ ಪದಾತಿ ದಳ - 1st ಮತ್ತು 2nd ದಂಡು ತುಕಡಿಗಳು, 12th ಸರಹದ್ದು ದಳ ತುಕಡಿ
೧೧೯ ನೇ ಸಾಲು:
 
{{DEFAULTSORT:Anglo-Sikh War, 2nd}}
[[Categoryವರ್ಗ:1848ರಲ್ಲಿನ ಹೋರಾಟ/ಘರ್ಷಣೆಗಳು]]
[[Categoryವರ್ಗ:1849ರಲ್ಲಿನ ಹೋರಾಟ/ಘರ್ಷಣೆಗಳು]]
[[Categoryವರ್ಗ:ಭಾರತದಲ್ಲಿನ ಬ್ರಿಟಿಷ್ ಆಡಳಿತ]]
[[Categoryವರ್ಗ:ಬ್ರಿಟಿಷ್ ಸಾಮ್ರಾಜ್ಯ]]
[[Categoryವರ್ಗ:ಸಿಖ್ಖರ ಇತಿಹಾಸ]]
[[Categoryವರ್ಗ:ಆಂಗ್ಲೋ-ಸಿಖ್ಖರ ಸಮರಗಳು]]
[[Categoryವರ್ಗ:ಸಿಖ್ಖರು ಪಾಲ್ಗೊಂಡ ಕದನಗಳು]]
[[Categoryವರ್ಗ:1848ರಲ್ಲಿ ಭಾರತ]]
[[Categoryವರ್ಗ:1849ರಲ್ಲಿ ಭಾರತ]]
[[Categoryವರ್ಗ:ಬಾಂಬೆ ಸ್ಯಾಪ್ಪರ್ಸ್‌‌ ಪಡೆಯ ಇತಿಹಾಸ ]]
[[Categoryವರ್ಗ:ಬಂಗಾಳ ಸ್ಯಾಪ್ಪರ್ಸ್‌‌ ಪಡೆಯ ಇತಿಹಾಸ]]
[[Categoryವರ್ಗ:ಕಾರ್ಪ್ಸ್‌‌ ಆಫ್‌ ಇಂಜಿನಿಯರ್ಸ್‌‌ ಪಡೆಯ ಇತಿಹಾಸ (ಭಾರತೀಯ ಸೇನಾಪಡೆ)]]