ವರಾಹಮಿಹಿರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ವಿಷಯ ಸೇರಿಸಲಾಗಿದೆ
No edit summary
೩೮ ನೇ ಸಾಲು:
'''ವರಾಹಮಿಹಿರ''' [[ಉಜ್ಜಯಿನಿ]]ಯಲ್ಲಿ ಜನಿಸಿದ ಇವನು ಒಬ್ಬ ಭಾರತೀಯ [[ಖಗೋಳ]] ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರನು [[ಅವಂತಿ ದೇಶ]]ದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದನು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದನು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬ.
'ಪಂಚ ಸಿದ್ಧಾಂತಿಕ'-ಇದು ವರಾಹಮಿಹಿರ ರಚಿಸಿದ ಮುಖ‍್ಯ ಸಿದ್ಧಾಂತಗಳಲ್ಲೊಂದು.ಇದು ಸೂರ್ಯಸಿದ್ಧಾಂತ,ರೋಮಕಸಿದ್ಧಾಂತ,ಪೌಲಿಸಸಿದ‍್ಧಾಂತ,ವಸಿಷ್ಠಸಿದ್ಧಾಂತ,ಪೈತಾಮಹಸಿದ್ಧಾಂತ ಹಾಗೂ ಖಗೋಳ ಶಾಸ್ತ್ರದ ಎಲವು ತುಣುಕುಗಳನ್ನು ಹೊಂದಿದೆ. ಸುಮಾರು ೧೫೦೦ ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು, ಬ್ಬಿಣಕಬ್ಬಿಣ ಇದೆ ಎಂದು ಹೇಳಿದ್ದ. ಆಕಾಶ, ಸೂರ್ಯ,ಚಂದ್ರ,ನಕ್ಷತ್ರಗಳೆಲ್ಲ ದೇವರುಗಳೆಂದು ಪೂಜಿಸುತ್ತಿದ್ದ ಕಾಲದಲ್ಲಿ ಅವರಲ್ಲಾ ಸೃಷ್ಟಿಯ ಕೊಡುಗೆ ಎಂದು ಸಾರಿ ಹೇಳಿದ. ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ,ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ. ೫೧೨ನೇ ಇಸವಿಯಲ್ಲಿ ಅಂದರೆ ತನ್ನ ೧೩ನೇ ವಯಸ್ಸಿನಲ್ಲಿ 'ಸೂರ್ಯಸಿದ್ಧಾಂತ' ಬರೆದ. ಇದರಲ್ಲಿ ನಕ್ಷತ್ರ ಮಂಡಲ, ಊರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳ ಕುರಿತು ವಿವರಿಸಿದ. ಗಣಿತದ ತ್ರಿಕೋಣಮಿತಿ ನಿಯಮ ಹಾಗು 'ಜ್ಯಾ' ಮಾನದ ಸರಣಿಯನ್ನೂ ಆರಂಭಿಸಿದ. ಇದಲ್ಲದೇ ಈತ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೊಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ. ಇವನ ಕಾಲದಲ್ಲಿ ಉಜ್ಜಯಿನ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧನೆಗಳು ಆರಂಭವಾಗಿದ್ದಉ. ಇವನ ನಂತರ ಬಂದ ಆರ್ಯಭಟ ಇದನ್ನು ಮುಂದುವರಿಸಿ ಆಧುನಿಕ ಗಣಿತದ ರೂವಾರಿಯಾದ. ಇವನು ಮೊತ್ತ ಮೊದಲ ಜಲವಿಜ್ಞಾನಿಯೂ ಹೌದು. ಮಳೆ, ಅಂತರ್ಜಲದ ಮಟ್ಟ, ಈರಿನ ಒಳಹರಿಉ, ಭೂಜಲವನ್ನು ಗುರುತಿಸುಉದು, ಮಣ್ಣಿನ ಗುಣಮಟ್ಟದಿಂದ ನೀರಿನ ಪ್ರಮಾಣ ಅಳೆಯುಉದು, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ನೀರು ಹರಿಯುತ್ತದೆ, ಪ್ರವಾಹ ತಡೆ, ಬರಪರಿಹಾರಕ್ಕೆ ಮಾರ್ಗೋಪಾಯಳ ಬಗ್ಗೆ ಕೂಡ ಹೇಳಿದ್ದಾನೆ.
ಬೃಹತ್ ಸಂಹಿತ-ಇದೂ ವರಾಹಮಿಹಿರನ ಕೊಡುಗೆಗಳಲ್ಲೊಂದು.ಇದು ಜ್ಯೊತಿಷ್ಯ,ಗ್ರಹಗಳ ಚಲನೆ,ಗ್ರಹಣ,ಮೋಡ,ಮಳೆ,ಶಿಲ್ಪಕಲೆ,ಬೆಳೆಗಳ ಬೆಳವಣಿಗೆ,ಸುಗನಧ ದ್ರವ್ಯಗಳ ತಯಾರಿಕೆ,ಮದುವೆ,ಮುತ್ತು,ರತ್ನ ಹಾಗೂ ಸಂಪ್ರದಾಯದ ವಿಷಯಗಳನ್ನೊಳಗೊಂದಿದೆ.ಬೃಹತ್ ಜಟಕ,ಲಘುಜತಕ,ಸಮಾಸ ಜಟಕ,ಬೃಹತ್ ಯೋಗಯಾತ್ರ,ಯೋಗಯಾತ್ರ,ಟಿಕ್ಕಾಣಿ ಯಾತ್ರ,ಬೃಹತ್ ವಿವಾಹ ಪತಲ್,ಲಘು ವಿವಾಹ ಪತಲ್,ಲಗ್ನ ವರಾಹಿ,ಕುತೂಹಲ ಮಂಜರಿ,ದೈವಜ್ಞ ವಲ್ಲಭ ಇವು ವರಾಹಮಿಹಿರ ಬರೆದ ಜ್ಯೋತಿಷ‍್ಯ ಶಾಸ್ತ್ರಗಳು.ತ್ರಿಕೋನಮಿತೀಯಕ್ಕೆ ಇವನ ಕೊಡುಗೆಗಳು ಅಪಾರ.
"https://kn.wikipedia.org/wiki/ವರಾಹಮಿಹಿರ" ಇಂದ ಪಡೆಯಲ್ಪಟ್ಟಿದೆ