ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೧ ನೇ ಸಾಲು:
===ರಂಜಾನ್ ತಿಂಗಳ ವ್ರತಾಚರಣೆ===
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ '''[[ರಂಜಾನ್]]''' ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ '''[[ಪ್ರವಾದಿ]]''' '''[[ಮುಹಮ್ಮದ್]]'''(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ [[ಕುರಾನ್]] ಅವತೀರ್ಣಗೊಂಡಿತು. ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ '''[[ಉಪವಾಸ]]''' ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
 
===ಹಜ್ಜ್ ನಿರ್ವಹಿಸುವುದು===
ಐದನೆಯ ಮತ್ತು ಕೊನೆಯ ಕಡ್ಡಾಯಕರ್ಮ '''[[ಹಜ್ಜ್]]''' ನಿರ್ವಹಿಸುವುದಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ತೀರ್ಥಯಾತ್ರೆಯ ಹೆಸರೇ '''[[ಹಜ್ಜ್]]''' ಆಗಿರುತ್ತದೆ. '''[[ಹಜ್ಜ್]]''' ವಿಶ್ವಸಹೋದರತೆಯನ್ನು ಪ್ರತಿಪಾದಿಸುವ ಮಹಾ ಸಮ್ಮೇಳನವಾಗಿದೆ. ಸಕಲ ಮನುಷ್ಯರೂ '''[[ಅಲ್ಲಾಹ]]'''ನ ದಾಸರು ಮತ್ತು ಅವನ ಅನುಸರಣೆ ಮಾಡಬೇಕಾದವರು ಮತ್ತು ಆತನ ಅನುಸರಣೆಯಲ್ಲಿಯೇ ಸಮಾನತೆ ಮತ್ತು ಸಮಾಧಾನ ಕಂಡುಕೊಳ್ಳಬೇಕಾದವರು ಎಂಬ ತಾತ್ಪರ್ಯವನ್ನು '''[[ಹಜ್ಜ್]]''' ನೀಡುತ್ತದೆ. ಯತಾರ್ಥದಲ್ಲಿ '''[[ಏಕ ದೇವತ್ವ]]'''ವನ್ನು ಬಲವಾಗಿ ಪ್ರತಿಪಾದಿಸುವ '''[[ಇಸ್ಲಾಂ]]''', ಮಾನವೀಯ ಏಕತೆಯನ್ನು ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ