"ಅಂಟು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಫೀನಾಲಿಕ್ಸ್ ಅಂಟುಗಳು ದ್ರಾವಣರೂಪದಲ್ಲಿ ದೊರೆಯುತ್ತವೆ. ಪ್ಲೈವುಡ್, ಮರ ಮುಂತಾದ ಸರಂಧ್ರ ವಸ್ತುಗಳನ್ನು ಅಂಟಿಸಲು ಬಳಸುತ್ತಾರೆ. ಗಾಜು ಮತ್ತು ಲೋಹಗಳನ್ನು ಅಂಟಿಸಲು ಉಪಯುಕ್ತವಾದುವಲ್ಲ. ಯೂರಿಯಾಗಳ ಗುಂಪಿನ ಪಾಲಿಯೂರಿಥೇನ್ ಗಳನ್ನು ಗಾಜು, ಲೋಹ, ಮತ್ತು ಸರಂಧ್ರ ವಸ್ತುಗಳನ್ನು ಅಂಟಿಸಲು ಬಳಸಬಹುದು. ಪಾಲಿ ಎಸ್ಟರ್ ರಾಳಗಳಿಂದ ಗಾಜಿನ ಎಳೆಗಳನ್ನು ಅಂಟಿಸಿ ಶಕ್ತಿಯುತ ಕಂಬಿಗಳನ್ನು, ಪಟ್ಟಿಗಳನ್ನು ತಯಾರಿಸಿ ದೋಣಿ ಹಾಗೂ ಕಾರಿನ ಭಾಗಗಳು ಮುಂತಾದುವುಗಳಿಗೆ ಉಪಯೋಗಿಸುತ್ತಾರೆ. ಇವು ಗಟ್ಟಿಯಾದಾಗ ಸಂಕುಚಿತವಾಗುವುದಿಲ್ಲ. ದ್ರಾವಣವೂ ಬೇಕಾಗಿಲ್ಲ. ಶಾಖ ಇದನ್ನು ಬೇಗನೆ ದೃಢವಾಗಿಸುತ್ತದೆ. ಸಿಲಿಕೋನುಗಳು ದೃಢವಾದಮೇಲೆ 280º ಸೆಲ್ಸಿಯಸಿಗಿಂತ ಹೆಚ್ಚು ಶಾಖವನ್ನು ತಡೆಯಬಲ್ಲುವು. ಅಲ್ಲದೆ ನೀರನ್ನು ನಿರೋಧಿಸುವ ಶಕ್ತಿಯೂಂಟು. ವಿದ್ಯುತ್ತು ಹರಿಯದಂತೆ ಮಾಡುವ ಅವಾಹಕ ಪಟ್ಟಿಗಳ ತಯಾರಿಕೆಗೆ, ಗಾಜಿನ ಎಳೆಗಳನ್ನು ಅಂಟಿಸಲು, ಎಲೆಕ್ಟ್ರಾನಿಕ್ಸ್ ಕೈಗಾರಿಕೆಯಲ್ಲಿ ಇವುಗಳ ಉಪಯೋಗ ಹೆಚ್ಚು. ಸಂಶ್ಲೇಷಿತ ರಬ್ಬರನ್ನು ಉಪಯೋಗಿಸಿ ಅಂಟಿಸಿದ ಒಂದು ವಸ್ತುವನ್ನು ಬಗ್ಗಿಸಿದರೂ ಅಂಟುಶಕ್ತಿ ಕುಂದುವುದಿಲ್ಲ. ಆದುದರಿಂದ ಅದನ್ನು ಫೆಲ್ಟು ಬಟ್ಟೆಯನ್ನು, ರಬ್ಬರ್ ಚರ್ಮಗಳನ್ನು ಅಂಟಿಸಲು ಬಳಸುತ್ತಾರೆ.
ಎರಡನೆಯ ಗುಂಪಿಗೆ ಸೇರಿದ ವೀನೈಲ್ ರಾಳವನ್ನು ಗಾಜು, ಲೋಹಗಳನ್ನು ಅಂಟಿಸಲು ಬಳಸುತ್ತಾರೆ. ಹೆಚ್ಚು ಶಾಖದಲ್ಲಿ ಶಕ್ತಿಯನ್ನು ಕಳೆದುಕೊಂಡರೂ ಬಹುಬೇಗ ಗಟ್ಟಿಯಾಗುವ ಮತ್ತು ನೀರನ್ನು ನಿರೋಧಿಸುವ ಶಕ್ತಿಯಿರುವುದರಿಂದ ಇದನ್ನು ಕಾರಿನ ಕೈಗಾರಿಕೆಯಲ್ಲಿ ಸುರಕ್ಷಿತ ಗಾಜನ್ನು ತಯಾರಿಸಲು ಉಪಯೋಗಿಸುತ್ತಾರೆ. ಗೋಂದುಗಳ ಬದಲು ವೀನೈಲ್ ರಾಳ ಬಳಕೆಯಲ್ಲಿ ಬರುತ್ತಿದೆ. ಸೆಲ್ಯುಲೋಸ್ ಅಸಿಟೇಟ್ ಮತ್ತು ನೈಟ್ರೇಟುಗಳ ದ್ರಾವಣಗಳು ಬಹು ಬೇಗ ಗಟ್ಟಿಯಾಗುವುವು; ಅಲ್ಲದೆ ನೀರನ್ನು ನಿರೋಧಿಸುವ ಶಕ್ತಿ ಹೊಂದಿದ ಈ ಅಂಟುಗಳು ಮನೆಯ ಕೆಲಸಗಳಿಗೆ, ಮರ, ಕಾಗದಗಳನ್ನು ಅಂಟಿಸಲು ಯೋಗ್ಯವಾಗಿವೆ. ಅಕ್ರಿಲಿಕ್ ಅಂಟುಗಳಿಗೆ ಅಂಟುಶಕ್ತಿ ಕಡಿಮೆಯಾದರೂ ಅವು ಪಾರದರ್ಶಕವಾಗಿರುವುದರಿಂದ ಅವುಗಳಿಂದಲೂ ಉಪಯೋಗವುಂಟು. ಇದೇ ಗುಂಪಿಗೆ ಸೇರಿದ ಸಯನೊ ಅಕ್ರಿಲೇಟ್ ಎಂಬುದು ಬೇಗ ಗಟ್ಟಿಯಾಗುವ ಗುಣ ಹೊಂದಿರುವುದರಿಂದ ಅದನ್ನು ಗಾಜು ಮತ್ತು ಲೋಹಗಳನ್ನು ಅಂಟಿಸಲು ಉಪಯೋಗಿಸುತ್ತಾರೆ.
==ಬಾಹ್ಯ ಕೊಂಡಿಗಳು==
{{Commons category|Adhesives}}
{{Wiktionary}}
* [http://www.adhesiveandglue.com Web dedicated about adhesive science]
* [http://www.adhesives.org Educational portal on adhesives and sealants]
* [http://www.roymech.co.uk/Useful_Tables/Adhesives/Adhesive_Bond.html RoyMech: The theory of adhesive bonding]
* [http://solutions.3m.com/wps/portal/3M/en_US/3M-Industrial/Adhesives/Resources/Classification/ 3M's Adhesive & Tapes Classification]
* [http://www.thistothat.com/ Database of adhesives for attaching different materials]
 
[[ವರ್ಗ:ರಸಾಯನಶಾಸ್ತ್ರ]]
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/788068" ಇಂದ ಪಡೆಯಲ್ಪಟ್ಟಿದೆ