ಸಿಲಂಬಾಟ್ಟಮ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
}}
 
'''ಸಿಲಂಬಮ್‌''' ({{lang-ta|சிலம்பம்}}) ಅಥವಾ '''ಸಿಲಂಬಾಟ್ಟಮ್‌''' ({{lang-ta|சிலம்பாட்டம்}}) [[ದಕ್ಷಿಣ ಭಾರತ]]ದ [[ತಮಿಳುನಾಡಿನ]] ಒಂದು ಆಯುಧ-ಆಧಾರಿತ [[ದ್ರಾವಿಡ ಕದನ-ಕಲೆ]]ಯಾಗಿದೆ. ಇದನ್ನು [[ಮಲೇಷಿಯಾ]]ದ [[ತಮಿಳು ಸಮುದಾಯ]]ವೂ ಸಹ ಅಭ್ಯಾಸ ಮಾಡುತ್ತದೆ. [[ತಮಿಳಿನಲ್ಲಿ]], ಸಿಲಂಬಮ್‌ ಪದವು [[ಬಿದಿರು]] ಕೋಲನ್ನು ಸೂಚಿಸುತ್ತದೆ. ಅದು ಈ ಶೈಲಿಯಲ್ಲಿ ಬಳಸುವ ಪ್ರಮುಖ ಸಾಧನವಾಗಿದೆ. ಇತರ ಆಯುಧಗಳನ್ನೂ ಬಳಸಲಾಗುತ್ತದೆ, ಉದಾಹರಣೆಗಾಗಿ [[ಮಡುವು]] (ಜಿಂಕೆಯ ಕೊಂಬು), ''ಕತಿ'' (ಕತ್ತಿ) ಮತ್ತು ''ವಾಲ್'' (ಖಡ್ಗ). [[ಕುಟ್ಟು ವರಿಸೈ]] ಎಂದು ಕರೆಯಲ್ಪಡುವ ನಿರಾಯುಧ ಸಿಲಂಬಮ್‌ [[ಹಾವು]], [[ಹುಲಿ]] ಮತ್ತು [[ಹದ್ದು]] ಮೊದಲಾದ ಪ್ರಾಣಿಗಳ ಚಲನೆಗಳ ಆಧಾರದಲ್ಲಿ ಹೊಡೆತದ ಭಂಗಿಗಳು ಮತ್ತು ನಿಯತಕ್ರಮಗಳನ್ನು ಬಳಸುತ್ತದೆ.
 
ಕೋಲಿನ ಉದ್ದವು ಭಾಗವಹಿಸುವವರ ಎತ್ತರವನ್ನು ಆಧರಿಸಿರುತ್ತದೆ. ಅದು ತಲೆಯಿಂದ ಮೂರು ಬೆರಳುಗಳಷ್ಟು ಕೆಳಗೆ ಹಣೆಯನ್ನು ತಲುಪಬೇಕು. ಆದರೂ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದಗಳನ್ನು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸರಿಸುಮಾರು 1.68 ಮೀಟರ್‌ಗಳಷ್ಟು (ಐದೂವರೆ ಅಡಿ) ಉದ್ದವಿರುತ್ತದೆ. ''ಸೆಡಿಕುಟ್ಚಿ'' ಎಂದು ಕರೆಯುವ 3 ಅಡಿಯ ಕೋಲನ್ನು ಸುಲಭವಾಗಿ ಮರೆಮಾಡಬಹುದು. ವಿವಿಧ ಉದ್ದದ ಕೋಲುಗಳ ಬಳಕೆಗೆ ಪ್ರತ್ಯೇಕ ಅಭ್ಯಾಸದ ಅಗತ್ಯವಿರುತ್ತದೆ. ಸಾಮಾನ್ಯ ಹೊಡೆತದ ಭಂಗಿಯೆಂದರೆ ಬಲಕೈಯನ್ನು ಕೋಲಿನ ಹಿಂಭಾಗದ ತುದಿಗೆ ಹತ್ತಿರವಾಗಿ, ಎಡಕೈಯನ್ನು ಸುಮಾರು 40 ಸೆಂಟಿಮೀಟರ್‌ಗಳಷ್ಟು (16 ಇಂಚುಗಳು) ದೂರದಲ್ಲಿ ಹಿಡಿದುಕೊಳ್ಳುವುದು. ಈ ಸ್ಥಾನವು ಸಂಕೀರ್ಣವಾದ ದಾಳಿ ಮತ್ತು ತಡೆಗಳನ್ನೂ ಒಳಗೊಂಡಂತೆ ತಿವಿಯಲು ಮತ್ತು ದೇಹದ ಚಲನೆಗಳಿಗೆ ಉತ್ತಮ ಅವಕಾಶ ಮಾಡಿಕೊಡುತ್ತದೆ.
"https://kn.wikipedia.org/wiki/ಸಿಲಂಬಾಟ್ಟಮ್‌" ಇಂದ ಪಡೆಯಲ್ಪಟ್ಟಿದೆ