"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಆಡಳಿತ==
*[[ತಮಿಳುನಾಡು ಸರ್ಕಾರ]]
[[File:India Tamil Nadu districts numbered.svg|thumb|200px|right|Districts of Tamil Nadu]]
ತಮಿಳು ನಾಡಿನ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳದರಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ರಾಜ್ಯ ವಿಧಾನಮಂಡಲದಲ್ಲಿ ವಿಧಾನ ಪರಿಷತ್ತು (ಮೇಲ್ಮನೆ) ಮತ್ತು ವಿಧಾನ ಸಭೆ ಇವೆ. ವಿಧಾನ ಸಭೆಯ ಸದಸ್ಯರು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮತದಾನದಿಂದ ನೇರವಾಗಿ ಆಯ್ಕೆಯಾಗುತ್ತಾರೆ. ವಿಧಾನ ಸಭೆ, ಸ್ಥಳೀಯ ಸಂಸ್ಥೆಗಳು, ಪದವೀಧರರು. ಅಧ್ಯಾಪಕ ಕ್ಷೇತ್ರಗಳಿಂದ ಆಯ್ಕೆ ಹೊಂದಿದವರು, ಮತ್ತು ರಾಜ್ಯಪಾಲರಿಂದ ನಾಮಕರಣವಾದವರು ವಿಧಾನ ಪರಿಷತ್ತಿನ ಸದಸ್ಯರು. ಮುಖ್ಯಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ನ್ಯಾಯಾಲಯಗಳಿವೆ.ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ: ಜಿಲ್ಲೆಯ ಉನ್ನತ ಅಧಿಕಾರಿ ಕಲೆಕ್ಟರ್.
 
ಜಿಲ್ಲೆಯಿಂದ ಕೆಳಗಿನ ಹಂತಗಳ ಆಡಳಿತ ಘಟಕಗಳು [[ತಾಲ್ಲೂಕು]], ಫಿರ್ಕಾ ಮತ್ತು ಗ್ರಾಮಗಳು. ತಮಿಳು ನಾಡಿನಲ್ಲಿ 29 ಜಿಲ್ಲಾ ಅಭಿವೃದ್ಧಿ ಮಂಡಲಿಗಳೂ 374 ಪಂಚಾಯಿತಿ ಮಂಡಲಿಗಳೂ (ಬ್ಲಾಕ್) 12,490 ಗ್ರಾಮ ಪಂಚಾಯಿತಿಗಳೂ ಇವೆ. ಕ್ಷೇತ್ರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ವಿಸ್ತರಣೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಯಕತ್ವದ ವಿಕಾಸ ನೆರವಿನೊಂದಿಗೆ ಸ್ವಸಹಾಯ-ಇವನ್ನು ಸಾಧಿಸಲು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.
 
==ಶಿಕ್ಷಣ==
1964-65 ರಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ. ಮೊದಲನೆಯ ತರಗತಿಗೆ ಪ್ರವೇಶದ ಕನಿಷ್ಠ ವಯಸ್ಸು 5+. ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಯನ್ನು 1956ರಲ್ಲಿ ಜಾರಿಗೆ ತರಲಾಯಿತು. ಸ್ವಸಹಾಯದ ತಳಹದಿಯ ಮೇಲೆ ತರಲಾದ ಈ ಯೋಜನೆಯ ಅನ್ವಯದಲ್ಲಿ ಸರ್ಕಾರವೂ ಕೇರ್ ಸಂಸ್ಥೆಯೂ ಅನಂತರ ಆಸಕ್ತಿ ವಹಿಸಿದುವು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬರುತ್ತಿರುವ ವಿಧ್ಯಾರ್ಥಿಗಳ ಅಧಿಕ ಸಂಖ್ಯೆಯಿಂದಾಗಿ ಕಾಲೇಜು ಶಿಕ್ಷಣದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದು ಅಗಾಧವಾಗಿ ವಿಸ್ತರಿಸಿದೆ. ಸರ್ಕಾರದ ವೆಚ್ಚದಲ್ಲಿ ಸೇ. 25ಕ್ಕಿಂತ ಹೆಚ್ಚು ಭಾಗ ಶಿಕ್ಷಣಕ್ಕೆ ಮೀಸಲಾಗಿದೆ. ಪ್ರಿ-ಯೂನಿವರ್ಸಿಟಿ ಘಟ್ಟದ ವರೆಗೆ ರಾಜ್ಯದಲ್ಲಿ ಶಿಕ್ಷಣ ಉಚಿತ.
೪೦,೮೯೦

edits

"https://kn.wikipedia.org/wiki/ವಿಶೇಷ:MobileDiff/787584" ಇಂದ ಪಡೆಯಲ್ಪಟ್ಟಿದೆ