ಗಾಂಧಿನಗರ (ಗುಜರಾತ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Gandhinagar_City_Map.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ...
wiki link
೬೫ ನೇ ಸಾಲು:
}}
 
'''ಗಾಂಧಿನಗರ'''([[ಗುಜರಾಥಿ]]: ગાંધીનગર) [[ಗುಜರಾತ್]] ರಾಜ್ಯದ ರಾಜಧಾನಿ ಮತ್ತು ಭಾರತದ ೩ [[ಯೋಜಿತ ನಗರ|ಯೋಜಿತ ನಗರಗಳಲ್ಲಿ]] ಒಂದು. [[ಸಾಬರ್ಮತಿ ನದಿ|ಸಾಬರ್ಮತಿ ನದಿಯ]] ದಂಡೆಯ ಮೇಲೆ ಸ್ಥಿತವಾಗಿರುವ ಈ ಊರು [[ಗಾಂಧಿನಗರಗಾಂಧೀನಗರ ಜಿಲ್ಲೆ|ಗಾಂಧಿನಗರ ಜಿಲ್ಲೆಯ]] ಆಡಳಿತ ಕೇಂದ್ರವಾಗಿದೆ.
ಗುಜರಾತ್ ರಾಜ್ಯದ ರಾಜಧಾನಿ; [[ಸಾಬರ್ಮತಿ ನದಿ]]ಯ ದಡದ ಮೇಲೆ, [[ಅಹ್ಮದಾಬಾದ್|ಅಹಮದಾಬಾದಿನಿಂದ]] ಸು. 24 ಕಿಮೀ ಅಂತರದಲ್ಲಿದೆ. ಈ ನಗರ ಸಂಪುರ್ಣವಾಗಿ ಬೆಳೆದಾಗ 2163 ಚ.ಕಿಮೀ ವಿಸ್ತೀರ್ಣವುಳ್ಳದ್ದಾಗಿರುತ್ತದೆ. [[ಜನಗಣತಿ (ಗಣತಿ)|ಜನಗಣತಿಯ]] ಪ್ರಕಾರ ಇದರ ಜನಸಂಖ್ಯೆ 2,08,299 (2011).
==ರಚನೆ==
 
1960ರಲ್ಲಿ ಗುಜರಾತ್ ರಾಜ್ಯ ರಚಿತವಾದಾಗ ಅಹಮದಾಬಾದ್ ಅದರ ರಾಜಧಾನಿಯಾಯಿತು[[ರಾಜಧಾನಿ|ರಾಜಧಾನಿಯಾಯಿ]]ತು. ಆದರೆ ಹೊಸ ರಾಜ್ಯಕ್ಕೆ ಹೊಸದೊಂದು ರಾಜಧಾನಿಯ ಅವಶ್ಯಕತೆಯಿತ್ತು. [[ಅಹಮದಾಬಾದ್]] ಒಂದು ದೊಡ್ಡ ಕೈಗಾರಿಕಾ ಕೇಂದ್ರ. ಇದರ ಜನಸಂಖ್ಯೆ ತೀವ್ರವಾಗಿ ಬೆಳೆಯುತ್ತಿದೆ. ಅಹಮದಾಬಾದ್ ನಗರಗಳಲ್ಲಿ ಜಮೀನಿನ ಬೆಲೆ ಹೆಚ್ಚು. ಅತಿಯಾದ ಜನಸಂದಣಿಯಿರುವ ಆ ನಗರದಲ್ಲಿ ವಸತಿಯದೊಂದು ಸಮಸ್ಯೆ. ಜನಸಂಖ್ಯೆಯ ಬೆಳೆವಣಿಗೆಯ ವೇಗಕ್ಕೆ ಅನುಗುಣವಾಗಿ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ಕಷ್ಟ. ಈ ಕಾರಣಗಳಿಂದಾಗಿ ರಾಜ್ಯದ ಆಡಳಿತಕ್ಕಾಗಿ ಅಹಮದಾಬಾದಿನ ಹತ್ತಿರದಲ್ಲಿ ಹೊಸ ರಾಜಧಾನಿಯೊಂದನ್ನು ರಚಿಸುವುದು ಸೂಕ್ತವೆಂದು ತೀರ್ಮಾನಿಸಲಾಯಿತು. ಹೊಸ ರಾಜಧಾನಿಗಾಗಿ ಆಯ್ಕೆ ಮಾಡಿದ ನಿವೇಶನದ ಅಡಿಯಲ್ಲಿ ತೈಲ ಸೆಲೆಗಳಿಲ್ಲವೆಂಬುದನ್ನು ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ 1964ರಲ್ಲಿ ಖಚಿತವಾಗಿ ಸಾರಿದ ಬಳಿಕ 1965ರ ಜೂನ್ ತಿಂಗಳಲ್ಲಿ ಈ ನಗರಯೋಜನೆಯ ಅನ್ವಯಕ್ಕೆ ಕ್ರಮ ಕೈಗೊಳ್ಳಲಾಯಿತು. ಅನಂತರದ ಐದು ವರ್ಷಗಳಲ್ಲಿ ರಾಜಧಾನಿಯ ಮುಖ್ಯ ಭಾಗಕ್ಕೆ ಒಂದು ರೂಪು ಬಂದು 1974ರಲ್ಲಿ ಇದು ಗುಜರಾತ್ ರಾಜ್ಯದ ಹೊಸ ರಾಜಧಾನಿಯಾಯಿತು. ಅಹಮದಾಬಾದಿಗಿಂತ 21 ಮೀ ಹೆಚ್ಚು ಎತ್ತರದಲ್ಲಿರುವ, 5,500 ಹೆಕ್ಟೇರ್ ವಿಸ್ತಾರವುಳ್ಳ ಗಾಂಧೀನಗರ ನಿವೇಶನ ವಿಶೇಷವಾಗಿ ಫಲವತ್ತಾದ ಉಸುಕಿನ ಪ್ರದೇಶ; ಇದು ಸುಂದರವಾದ ಮಾವಿನ ಮರಗಳ ಸಾಲುಗಳಿಂದ ಕಂಗೊಳಿಸುತ್ತದೆ. ನಗರರಚನೆಯ ಅನಂತರವೂ ಇಲ್ಲಿಯ ನಿಸರ್ಗ ಸೌಂದರ್ಯ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ. ಈ ನಗರರಚನೆಯಲ್ಲಿ ಮುಖ್ಯವಾದ ಐದು ವಿಭಾಗಗಳಿವೆ: 1. ರಾಜಧಾನಿ ವಿಭಾಗ ಮತ್ತು ಸರ್ಕಾರಿ ಕಾರ್ಯಾಲಯಗಳು. 2. ಔದ್ಯೋಗಿಕ ವಿಭಾಗ, 3. ನಗರ ವಿಭಾಗ, 4. ಸಾರ್ವಜನಿಕ ಸಂಸ್ಥೆಗಳ ವಿಭಾಗ ಮತ್ತು 5. ಮಾರುಕಟ್ಟೆ ಮತ್ತು ದಾಸ್ತಾನು ಮಳಿಗೆಗಳ ವಿಭಾಗ. ರಾಜಧಾನಿ ಮತ್ತು ಸರ್ಕಾರಿ ಕಾರ್ಯಾಲಯಗಳು: ಗಾಂಧೀನಗರ ರಾಜಧಾನಿಯ ಸಮಗ್ರ ಯೋಜನೆಯಲ್ಲಿ ಇದು ಅತ್ಯಂತ ಮಹತ್ತ್ವದ ವಿಭಾಗ. ಇದರಲ್ಲಿ ರಾಜ್ಯ ಸರ್ಕಾರದ ಸಚಿವಾಲಯ ಮತ್ತು ಇತರ ಕಚೇರಿಗಳು, ವಿಧಾನಸಭಾ ಗೃಹ, ಉಚ್ಚ ನ್ಯಾಯಾಲಯ, ರಾಜ್ಯ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳ ಕಚೇರಿಗಳು ಇವೆ. ಒಟ್ಟು 150 ಹೆಕ್ಟೇರ್ ಜಮೀನಿನ ಮೇಲೆ ಸಾಬರ್ಮತಿಯ ದಂಡೆಗುಂಟ ಹರಡಿಕೊಂಡಿರುವ ಈ ವಿಭಾಗದ ಹೊಸ ರಾಜಧಾನಿಯ ಆಕರ್ಷಕ ಭಾಗಗಳಲ್ಲೊಂದು.
==ಔದ್ಯೋಗಿಕ ವಿಭಾಗ==
ಗುಜರಾತ್ ರಾಜ್ಯದ ರಾಜಧಾನಿಯಾಗಿರಬೇಕೆಂಬುದು ಗಾಂಧೀನಗರದ ರಚನೆಯ ಮುಖ್ಯ ಉದ್ದೇಶವಾದರೂ ಆರ್ಥಿಕ ಚಟುವಟಿಕೆಗಳಿಗೂ ಇಲ್ಲಿ ಎಡೆಯುಂಟು. ಇದಕ್ಕಾಗಿ ಸಣ್ಣಪುಟ್ಟ ಕೈಗಾರಿಕೆಗಳ ವಿಭಾಗವನ್ನು ಸೇರ್ಪಡೆ ಗೊಳಿಸಿದೆ. ಆದರೂ ಕೈಗಾರಿಕೆಗಳ ಹೊಗೆಯಿಂದ ಇಲ್ಲಿಯ ಬದುಕಿನ ಬಗೆ ಕೆಡದಂತೆ ಎಚ್ಚರಿಕೆ ವಹಿಸಲಾಗಿದೆ. 100 ಹೆಕ್ಟೇರ್ ಜಮೀನನ್ನು ವ್ಯಾಪಿಸಿದ ಈ ವಿಭಾಗದಲ್ಲಿ 9,000 ಕೆಲಸಗಾರರ ದುಡಿಮೆಗೆ ಅವಕಾಶವಿದೆ.
"https://kn.wikipedia.org/wiki/ಗಾಂಧಿನಗರ_(ಗುಜರಾತ್)" ಇಂದ ಪಡೆಯಲ್ಪಟ್ಟಿದೆ