ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೪ ನೇ ಸಾಲು:
* ೩) ಉಷ್ಣ ಕೃಷ್ಣ ದ್ರವ್ಯ
* ಎಂದು ವಿಂಗಡಿಸಿದ್ದಾರೆ. ವಿಜ್ಞಾನಿಗಳಿಗೆ ಅದೊಂದು ನಿಗೂಢ ವಸ್ತು ಅಥವಾ ದ್ರವ್ಯ. ಹಿಗ್ಗುತ್ತಿರುವ ವಿಶ್ವದಲ್ಲಿ ಕಾಂತೀಯ ವ್ಯತ್ಯಾಸ, ನೀಹಾರಿಕೆಗಳು ಆಕಾಶದಲ್ಲಿ ಹರಡಿರುವ ಕ್ರಮ, ಆಕಾಶದಲ್ಲಿ ಹರಡಿರುವ ಹೊಗೆಯಂತಹ ವಸ್ತು, ಕಪ್ಪು ಗುಳ್ಳೆಗಳನ್ನು ಆವರಿಸಿರವ, ಅಥವಾ ಮುಚ್ಚಿರುವ ತೆಳುವಾದ ಕಪ್ಪು ವಿಶಾಲ ಹಾಳೆಗಳು, ಇವು ಕಪ್ಪು ದ್ರವ್ಯದ ಇರುವನ್ನು ಸಾರುತ್ತವೆ. ಈಗೀಗ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪು ಸಹಾಯದಿಂದ ಈ ಕೃಷ್ಣ ದ್ರವ್ಯದ ಬಗೆಗೆ ಪರಿಶೀಲನೆ ಪ್ರಯೋಗಗಳನ್ನು ನೆಡೆಸಿದ್ದಾರೆ.
=='ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ==
*14 Jul, 2017;
*ಭಾರತದ ಖಭೌತ ವಿಜ್ಞಾನಿಗಳು ನಕ್ಷತ್ರಪುಂಜಗಳ (ಗೆಲಾಕ್ಸಿ) ಮಹಾ ಸಮೂಹವೊಂದನ್ನು ಪತ್ತೆ ಮಾಡಿದ್ದಾರೆ. ಇದು ಭೂಮಿಯಿಂದ '''400 ಕೋಟಿ ಜ್ಯೋತಿರ್ವರ್ಷ'''ಗಳಷ್ಟು (1 ಜ್ಯೋತಿರ್ವರ್ಷ= ಒಂದು ವರ್ಷದಲ್ಲಿ ಬೆಳಕಿನ ಕಿರಣ ಸಾಗುವ ದೂರ) ದೂರದಲ್ಲಿದೆ. '''ತಾರಾಪುಂಜಗಳ ಈ ಮಹಾಸಮೂಹವನ್ನು ‘ಸರಸ್ವತಿ’ ಎಂದು ಹೆಸರಿಸಲಾಗಿದೆ.''' ಇದು ವಿಶ್ವದಲ್ಲಿರುವ ಅತ್ಯಂತ ಬೃಹತ್ತಾದ ಸಮೂಹಗಳಲ್ಲಿ ಒಂದು. ಇದು ಮೀನಾ ನಕ್ಷತ್ರಪುಂಜದ ದಿಕ್ಕಿನಲ್ಲಿ ಇದೆ. 
 
*ಈ ಮಹಾ ಸಮೂಹದಲ್ಲಿ ಕನಿಷ್ಠ 40 ನಕ್ಷತ್ರಪುಂಜಗಳ ಗುಂಪುಗಳಿವೆ ಮತ್ತು 10 ಸಾವಿರಕ್ಕೂ ಹೆಚ್ಚು ನಕ್ಷತ್ರಪುಂಜಗಳಿವೆ. ಇಷ್ಟೊಂದು ದೊಡ್ಡ ಸಮೂಹ ಈ ವಿಶ್ವದಲ್ಲಿ ಇದೆ ಎಂಬ ಕಲ್ಪನೆಯೇ 10–15 ವರ್ಷಗಳ ಹಿಂದೆ ಇರಲಿಲ್ಲ ಎಂದು ಈ ಶೋಧ ನಡೆಸಿರುವ ಪುಣೆಯ ಇಂಟರ್‌ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿಯ ತಂಡದ ಮುಖ್ಯಸ್ಥ ಪ್ರೊ. ಸೊಮಕ್‌ ರಾಯ್‌ಚೌಧರಿ ಹೇಳಿದ್ದಾರೆ.
 
*ವಿಶ್ವ ಹೇಗೆ ಸೃಷ್ಟಿಯಾಯಿತು ಎಂಬ ಬಗೆಗಿನ ಜನಪ್ರಿಯ ಸಿದ್ಧಾಂತಗಳು ‘ಸರಸ್ವತಿ’ಯಂತಹ ಬೃಹತ್‌ ಸಮೂಹದ ಅಸ್ತಿತ್ವವನ್ನು ಕಲ್ಪಿಸಿಕೊಂಡಿರಲೇ ಇಲ್ಲ. ಹಾಗಾಗಿ ವಿಶ್ವದ ಸೃಷ್ಟಿಯ ಬಗೆಗಿನ ಹೊಸ ಸಿದ್ಧಾಂತಗಳ ಬಗ್ಗೆ ಚಿಂತನೆ ನಡೆಸಲು ಇದು ಅವಕಾಶ ಒದಗಿಸಿಕೊಡಲಿದೆ.<ref>[http://www.prajavani.net/news/article/2017/07/14/505942.html ‘ಸರಸ್ವತಿ’ ನಕ್ಷತ್ರಪುಂಜಗಳ ಮಹಾಸಮೂಹ ಪತ್ತೆ;ಪ್ರಜಾವಾಣಿ ವಾರ್ತೆ;14 Jul, 2017]</ref>
 
=== ಸೂರ್ಯ: ===
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ