ಅರವಿಂದ್ ಅಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅರವಿಂದ್ ಅಡಿಗ'''(ಜನ್ಮ:೧೯೭೪) ಇವರು ಭಾರತೀಯ ಪತ್ರಕರ್ತರು. ಇವರ ಮೊದಲ (ಆಂಗ್ಲ)...
( ಯಾವುದೇ ವ್ಯತ್ಯಾಸವಿಲ್ಲ )

೧೧:೪೧, ೧೫ ಸೆಪ್ಟೆಂಬರ್ ೨೦೦೮ ನಂತೆ ಪರಿಷ್ಕರಣೆ

ಅರವಿಂದ್ ಅಡಿಗ(ಜನ್ಮ:೧೯೭೪) ಇವರು ಭಾರತೀಯ ಪತ್ರಕರ್ತರು. ಇವರ ಮೊದಲ (ಆಂಗ್ಲ)ಕಾದಂಬರಿ ದಿ ವ್ಹೈಟ್ ಟೈಗರ್ ೨೦೦೮ಮ್ಯಾನ್-ಬೂಕರ್ ಪ್ರಶಸ್ತಿಯ ಮುಖ್ಯ ಕಣದಲ್ಲಿದೆ.

ಜನ್ಮ ಮತ್ತು ಶಿಕ್ಷಣ

ಇವರು ೧೯೭೪ರಲ್ಲಿ ಚೆನ್ನೈದಲ್ಲಿ ಜನಿಸಿದರು. ನಂತರ ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು ಸೇಂಟ್ ಅಲೋಯ್ಶಿಯಸ್ ಕಾಲೇಜುಗಳಲ್ಲಿ ಅಭ್ಯಸಿಸಿ ೧೯೯೦ರಲ್ಲಿ ತಮ್ಮ ಹತ್ತನೇಯ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಮನೆಯವರ ಜೊತೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದ ಇವರು, ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪಡೆದರು. ಕೋಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ ಮತ್ತು ಮ್ಯಾಗ್ಡಲೀನ್ ಕಾಲೇಜು, ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರು.