ಮೃದಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
 
== ಮೃದಂಗದ ರಚನಾಕ್ರಮ ==
 
ಮೃದಂಗವನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು [[ಮರ]], [[ಚರ್ಮ]] ಮತ್ತು [[ಕರಣೆ ಕಲ್ಲು]].
 
ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು [[ಸಂಸ್ಕೃತ]] ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ [[ಹಲಸು]], [[ಹೆಬ್ಬಲಸು]], [[ಸಂಪಿಗೆ]], [[ತೇಗ]], [[ಬೇವು]]ಬೇವು, ಬಿಲ್ವರ ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಹೊಳವು ಒಳಗೆ ಖಾಲಿ ಇದ್ದು, ಮಧ್ಯದಲ್ಲಿ ಉಬ್ಬಿ, ಕಡೆಯ ಭಾಗಗಳಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕರೆಯುತ್ತಾರೆ. ಬಲ ಭಾಗದ ವ್ಯಾಸವು ಎಡ ಭಾಗಕ್ಕಿಂತ ಕಡಿಮೆ ಇರುತ್ತದೆ. ಉಬ್ಬಿದ ಭಾಗವನ್ನು "ಹರಡ" ಅಥವಾ "ಕಡಗ" ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡು ಮುಖಗಳ ವ್ಯಾಸ ನೇರವಾಗಿ ಮೃದಂಗದ ಶ್ರುತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವ್ಯಾಸ ಹೆಚ್ಚಿದ್ದರೆ ತಗ್ಗು ಶ್ರುತಿಗೆ ಹೊಂದಿಸಬಹುದು. ಕಡಿಮೆಯಿದ್ದರೆ ಹೆಚ್ಚು ಶ್ರುತಿಗೆ ಹೊಂದಿಸಬಹುದು.
 
 
Line ೨೨ ⟶ ೨೩:
 
== ಮೃದಂಗದ ಶ್ರುತಿ ಸೇರಿಸುವ ಕ್ರಮ ==
ಆಧಾರ ಶ್ರುತಿಯನ್ನು ಅವಲಂಭಿಸಿ ಮೃದಂಗವನ್ನು ಶ್ರುತಿ ಮಾಡಲಾಗುತ್ತದೆ. ಇದಕ್ಕೆ ಒಂದು ಕಲ್ಲುಗುಂಡುಕಲ್ಲು ಗುಂಡು ಮತ್ತು ಒಂದು ಗಟ್ಟಿ ಮರದ ತುಂಡು (ಗಟ್ಟ ಅಥವಾ ಕುಟ್ಟಿ) ಅಗತ್ಯ. ಮೃದಂಗದ ಶ್ರುತಿ ಹೆಚ್ಚಿಸಲು ಬಲ ಮುಚ್ಚಿಗೆಯ ಇಂಡಿಗೆಯ ಮೇಲೆ ಗಟ್ಟವನ್ನು ಇಟ್ಟು, ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಶ್ರುತಿಯನ್ನು ತುಂಬಾ ಹೆಚ್ಚಿಸಬೇಕಾದರೆ ಬಾರುಗಳ ಮಧ್ಯೆ ಗಟ್ಟಗಳನ್ನು ಸೇರಿಸಲಾಗುತ್ತದೆ. ಶ್ರುತಿಯನ್ನು ಕಡಿಮೆ ಮಾಡಲು ಇಂಡಿಗೆಯ ಕೆಳಗೆ ಗಟ್ಟವನ್ನು ಇಟ್ಟು ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಆಧಾರ ಶ್ರುತಿಯನ್ನು ಕೇಳುತ್ತಾ, "ಛಾಪು" ಮತ್ತು "ಧೀಂ" ಶಬ್ದಾಕ್ಷರಗಳನ್ನು ನುಡಿಸಿ ಶ್ರುತಿ ಸೇರಿಸಲಾಗುವುದು.
 
 
Line ೩೪ ⟶ ೩೫:
 
 
ವೆಲ್ಲೂರು ರಾಮಭದ್ರನ್, ಉಮಯಾಳಪ್ಪುರಮ್ ಶಿವರಾಮನ್, ಕಾರೈಕುಡಿ ಮಣಿ, ತಿರುವಾರೂರು ಭಕ್ತವತ್ಸಲನ್, ಮನ್ನಾರ್ಗುಡಿ ಈಶ್ವರನ್, ಟಿ.ಕೆ.ಮೊರ್ತಿ, ಪಾಲ್ಘಾಟ್ ರಘು, ಶ್ರೀಮುಷ್ಣಂ ರಾಜಾರಾವ್, ಟಿ.ವಿ.ಗೋಪಾಲಕೃಷ್ಣನ್.
 
 
ಗರುವಾಯುರ್ ದೊರೆ, ಟಿ.ಎ.ಎಸ್.ಮಣಿ, ಟಿ.ವಿ.ಭದ್ರಾಚಾರ್, ಪಿ.ಜಿ.ಲಕ್ಷ್ಮೀನಾರಾಯಣ, ಎ.ವಿ.ಆನಂದ್, ಎಮ್.ಟಿ.ರಾಜಕೇಸರಿ, ಟಿ.ಎ.ಎಸ್.ಮಣಿ, ಎಮ್.ವಾಸುದೇವರಾವ್, ಕೆ.ವಿ.ಪ್ರಸಾದ್, ಚೆಲುವರಾಜ, ಎಚ್.ಎಸ್.ಸುಧೀಂದ್ರ, ಅರ್ಜುನ್ ಕುಮಾರ್, ಆನೂರು ಅನಂತಕೃಷ್ಣ ಶರ್ಮ,ಜಿ ಎಸ್ ರಾಮಾನುಜಮ್, ಹೆಚ್. ಎಲ್. ಶಿವಶಂಕರ ಸ್ವಾಮಿ,ತುಮಕೂರು ರವಿಶಂಕರ,ನಿಕ್ಶಿತ್ ಪುತ್ತೂರು
 
 
"https://kn.wikipedia.org/wiki/ಮೃದಂಗ" ಇಂದ ಪಡೆಯಲ್ಪಟ್ಟಿದೆ